• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪಂಜಾಬ್ ಹಿಂದೂ ಮುಖಂಡರ ಹತ್ಯೆಯಲ್ಲಿ ಪಾಕಿಸ್ತಾನಿ ಐಎಸ್ ಐ ಖಲಿಸ್ತಾನ್ ಅಜೆಂಡಾ: ಎನ್ ಐಎ

TNN Correspondent Posted On January 15, 2018
0


0
Shares
  • Share On Facebook
  • Tweet It

ದೆಹಲಿ: ಭಾರತದ ನೆಮ್ಮದಿಗೆ ಸದಾ ಕೊಳ್ಳಿ ಇಡುವ ಪಾಕಿಸ್ತಾನ ಇದೀಗ ಮತ್ತೊಮ್ಮೆ ತನ್ನ ಕೊಳಕು ನೀತಿ ಪ್ರದರ್ಶಿಸಿರುವುದು ಬಹಿರಂಗವಾಗಿದೆ. ಪಂಜಾಬ್ ನಲ್ಲಿ ನಡೆದ 6 ಹಿಂದೂ ಮುಖಂಡರ ಹತ್ಯೆಯಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಭಾಗಿಯಾಗಿದ್ದು, ಖಲಿಸ್ತಾನದ ಉಗ್ರರನ್ನಿಟ್ಟುಕೊಂಡು ಭಾರತದಲ್ಲಿ ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಎನ್ಐಎ ತಿಳಿಸಿದೆ.

ಪಂಜಾಬ್ ನಲ್ಲಿ ನಡೆದ 6 ಹಿಂದೂ ಮುಖಂಡರ ಕೊಲೆ ಪ್ರಕರಣದಲ್ಲಿ ವಶಕ್ಕೆ ಪಡೆದ ಆರೋಪಿಗಳು, ಆಯುದ್ಧಗಳಲ್ಲಿ ಸಾಮೀಪ್ಯವಿದೆ. ಇದನ್ನು ಎನ್ಐಎ ವೈಜ್ಞಾನಿಕವಾಗಿ ಸಾಬೀತುಪಡಿಸುತ್ತದೆ. ಎಲ್ಲ ಕೊಲೆಗಳ ಹಿಂದೆ ಪಾಕಿಸ್ತಾನದ ಕೈವಾಡ ಇರುವುದು ಕೂಡ ಸಾಬೀತಾಗಿದೆ ಎಂದು ಎನ್ಐಎ ಮಹಾ ನಿರ್ದೇಶಕ ವಾಯ್ ಸಿ ಮೋದಿ  ತಿಳಿಸಿದ್ದಾರೆ.

ಮಾಹಿತಿ ಪ್ರಕಾರ ಆರು ಕೊಲೆಗಳಲ್ಲಿ ಬೇರೆ ಬೇರೆ ಅಸ್ತ್ರಗಳನ್ನು ಹೊರತುಪಡಿಸಿದರೆ ಮೊಬೈಲ್ ಕರೆಗಳಿಗೆ ಸಂಬಂಧಿಸಿದಂತೆ  ಎಲ್ಲ ಕರೆಗಳಲ್ಲಿ ಸಾಮಿಪ್ಯವಿದೆ ಎಂದು ತಿಳಿದು ಬಂದಿದೆ. ಹತ್ಯೆ ಆರೋಪದಲ್ಲಿ ಬಂಧಿಸಲಾಗಿರುವ ರಾಮದೀಪ್ ಸಿಂಗ್ ಮತ್ತು ಹರ್ದೀಪ್ ಶೇರಾ ವಿಚಾರಣೆಯಲ್ಲೂ ಪಾಕಿಸ್ತಾನದಿಂದ ಹಿಂದೂ ಮತ್ತು ಬಿಜೆಪಿ ಮುಖಂಡರ ಹತ್ಯೆಗೆ ಪಿತೂರಿ ನಡೆಸಿರುವ ಮಾಹಿತಿ ಹೊರಬಿದ್ದಿದೆ.

ಇಟಲಿ, ಪಾಕಿಸ್ತಾನ ಮತ್ತು ಬ್ರಿಟನ್ ನಿಂದ ಈ ಕಾರ್ಯಾಚರಣೆಗೆ ಹಣ ಪೂರೈಸಲಾಗಿದೆ ಎಂಬ ಮಾಹಿತಿ ಶಂಕಿತರಿಂದ ತಿಳಿದು ಬಂದಿದೆ. ಅಲ್ಲದೇ ಹವಾಲಾ ದಂದೆ ನಡೆಸುವವರಿಂದ ದೇಶದಲ್ಲಿ ಭಯೋತ್ಪಾದಕರಿಗೆ ಪೂರೈಸಲಾಗುತ್ತಿದೆ ಎನ್ನಲಾಗುತ್ತಿದೆ.

ಪಂಜಾಬ್ ನಲ್ಲಿ ನಡೆದ ಹಿಂದೂ ಮುಖಂಡರ ಕೊಲೆಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು ಇಟಲಿ, ಯುಕೆ, ಯುಎಇ ಮತ್ತು ಫ್ರಾನ್ಸ್ ನಲ್ಲಿ ತನಿಖೆ ನಡೆಸುವ ಅಥವಾ ತನಿಖೆ ನಡೆಸುವ ಸಾಧ್ಯತೆಗಳಿವೆ.

ಹಿಂದೂ ಸಂಘಟನೆಳ ಮುಖಂಡರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಗದೀಶ್ ಗಗ್ನೆಜಾ, ಪಂಜಾಬ್ ಶಿವಸೇನೆ ಕಾರ್ಮಿಕ ವಿಭಾಗದ ಮುಖ್ಯಸ್ಥ ದುರ್ಗಾ ಪ್ರಸಾದ್ ಗುಪ್ತಾ, ಹಿಂದೂ ಮುಖಂಡ ಅಮಿತ್ ಶರ್ಮಾ, ಡೇರಾ ಸಚ್ಚಾ ಸೌದಾ ಬೆಂಬಲಿಗ ಸತ್ಪಾಲ್ ಕುಮಾರ ಮತ್ತು ಮಗ ರಮೇಶ್ ಕುಮಾರ,  ಲುಧಿಯಾನ ಮೂಲದ ಆರ್ ಎಸ್ ಎಸ್ ಮುಖಂಡ ರವಿಂದರ್ ಗೋಸಾನ ಅವರನ್ನು ಹತ್ಯೆ ಮಾಡಲಾಗಿತ್ತು.

0
Shares
  • Share On Facebook
  • Tweet It




Trending Now
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Tulunadu News May 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
  • Popular Posts

    • 1
      ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!

  • Privacy Policy
  • Contact
© Tulunadu Infomedia.

Press enter/return to begin your search