ಜಸ್ಟೀಸ್ ಲೋಯಾ ಪುತ್ರನೇ ನನ್ನ ತಂದೆ ಹೃದಯಾಘಾತದಿಂದ ಸತ್ತರು ಎಂದ ಮೇಲೆ ತನಿಖೆ ಉಸಾಬರಿ ಇವರಿಗೇಕೆ?
ಸಂತೋಷ್ ಕೋಲಿ ಅವರ ತಾಯಿ: ನನ್ನ ಮಗಳನ್ನು ಕೊಲೆ ಮಾಡಲಾಗಿದೆ.
ಎಡಬಿಡಂಗಿ ಗುಂಪು: ಇಲ್ಲ, ಕೊಲೆ ಅಲ್ಲ. ಸಹಜ ಸಾವು. ಇದರಲ್ಲಿ ರಾಜಕೀಯ ಮಾಡಬೇಡಿ. ಸುಮ್ಮನಿರಿ.
ಇಂಥಾದ್ದೇ ಮತ್ತೊಂದು ಪ್ರಕರಣ…
ನ್ಯಾಯಮೂರ್ತಿ ಲೋಯಾ ಅವರ ಮಗ: ನನ್ನ ತಂದೆಯದ್ದು ಸಹಜ ಸಾವು ಎಂಬುದರ ಬಗ್ಗೆ ನನಗೆ ಯಾವ ಅನುಮಾನವೂ ಇಲ್ಲ.
ಎಡಬಿಡಂಗಿ ತಂಡ: ನೀನ ಆರೆಸ್ಸೆಸ್ಸಿನವನು. ನಿನಗೇನೂ ಗೊತ್ತಿಲ್ಲ. ನಿನ್ನ ತಂದೆಯದ್ದು ಕೊಲೆ.
ಸೋಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಸೋಕಾಲ್ಡ್ ಬುದ್ಧಿ ಜೀವಿಗಳು, ಪ್ರಗತಿಪರರು, ಎಡಬಿಡಂಗಿಗಳ ವರ್ತನೆಯಲ್ಲಿ ಇಂಥಾದ್ದೊಂದು ವಾಸ್ತವ ಹಾಗೂ ಇವರ ಜನ್ಮಜಾಲಾಡುವ ಇಂಥಾದ್ದೊಂದು ಜೋಕ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಜಸ್ಟಿಸ್ ಲೋಯಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಮೊದಲಿನಿಂದಲೂ ಹೇಳುತ್ತಿದೆ. ಮೊನ್ನೆಯೂ ನ್ಯಾಯಮೂರ್ತಿಗಳು ಪ್ರಕರಣದ ಕುರಿತು ತಗಾದೆ ತೆಗೆದಾಗ ಲೋಯಾ ಅವರ ಪುತ್ರನೇ ನನ್ನ ತಂದೆಯ ಸಾವಿನ ಕುರಿತು ಯಾವುದೇ ಶಂಕೆಯಿಲ್ಲ, ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೂ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೆಸರಿರುವುದರಿಂದ ಹಾಗೂ ಅವರ ವಿರುದ್ಧ ಮಾತನಾಡಲು ಇರುವುದೊಂದು ಅಂಶವಿರುವುದರಿಂದ ಈ ಎಡಬಿಡಂಗಿಗಳ ತಂಡ ಹೀಗೆ ವರ್ತಿಸುತ್ತಿದ್ದಾರೆ.
ಲೋಯಾ ಮಗನೇ ತಂದೆ ಸಾವು ಸಹಜ ಎನ್ನುತ್ತಿದ್ದರೂ ಪತ್ರಕರ್ತೆ ಸಾಗರಿಕಾ ಘೋಸ್ ಅವರು ಲೋಯಾ ಗೆಳೆಯ ಉದಯ ಗವಾರೆ ಅವರು ಲೋಯಾ ಸಾವು ಪೂರ್ವಯೋಜಿತ ಕೊಲೆ ಎಂದಿದ್ದಾರೆ ಎಂದು ಟ್ವೀಟ್ ಮಾಡಿ ಸಾಮಾಜಿಕ ಜಾಲತಾಣಿಗರಿಂದ ಉಗಿಸಿಕೊಂಡಿದ್ದಾರೆ.
ಯಾವುದೇ ವ್ಯಕ್ತಿಯ ಸಾವು ಅಥವಾ ಅನುಮಾನಾಸ್ಪದ ಸಾವಿನ ಬಗ್ಗೆ ಅವರ ಕುಟುಂಬದವರಿಗಿಂತ ಬೇರೆ ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ. ಲೋಯಾ ಪ್ರಕರಣದಲ್ಲೂ ಹಾಗೆಯೇ ಆಗಿದ್ದು. ಅವರ ವೈದ್ಯಕೀಯ ದಾಖಲೆ, ಅವರಿಗೆ ಇದ್ದ ಒಡನಾಟ ಎಲ್ಲವನ್ನು ನೋಡಿಯೇ ಕುಟುಂಬಸ್ಥರು ಲೋಯಾ ಅವರದ್ದು ಸಹಜ ಸಾವು ಎಂಬ ನಿರ್ಧಾರಕ್ಕೆ ಬಂದಿದೆ.
ಒಂದು ವೇಳೆ ಲೋಯಾ ಸಾವಿನ ಹಿಂದೆ ಪಿತೂರಿ ಇದ್ದರೆ, ಅವರಿಗಾರಾದರೂ ವೈರಿಗಳಿದ್ದರೆ, ಕುಟುಂಬಸ್ಥರೇ ಮುಂದೆ ಬಂದು ತನಿಖೆಯಾಗಲಿ ಎನ್ನುತ್ತಿದ್ದರು. ಅವರ್ಯಾಕೆ ಸಹಜ ಸಾವು ಎನ್ನುತ್ತಿದ್ದರು.
ಇಷ್ಟಾದರೂ ಈ ಬುದ್ಧಿಜೀವಿಗಳು ಪ್ರಕರಣದ ತನಿಖೆಯಾಗಲಿ, ತನಿಖೆಯಾಗಲಿ ಎಂದು ಬೊಬ್ಬೆ ಹಾಕುತ್ತಾರೆ. ಆದರೆ ಕರ್ನಾಟಕ, ಕೇರಳ ಸೇರಿ ಹಲವೆಡೆ ಹಿಂದೂಗಳ ಹತ್ಯೆಯಾದರೂ, ಯಾರ ವಿರುದ್ಧವೂ ಕ್ರಮ ಕೈಗೊಳ್ಳದಿದ್ದರೂ, ತನಿಖೆಯಾಗಲಿ ಎಂದು ಬಾಯಿಬಿಡಲ್ಲ ಇವರು. ಯಾಕೆಂದರೆ ಈ ಪ್ರಕರಣಗಳಲ್ಲಿ ಅಮಿತ್ ಶಾ ಹೆಸರು ಇಲ್ಲವಲ್ಲ!
Leave A Reply