ಸಾದ್ವಿ ಪ್ರಜ್ಞಾಸಿಂಗ್ ಮನಬಿಚ್ಚಿ ನುಡಿದ ಸತ್ಯಗಳೇನು?

ಈ ಬಾರಿಯ ಮಕರ ಸಂಕ್ರಾಂತಿಗೆ ಬೆಂಗಳೂರಿಗೆ ಆಗಮಿಸಿದ್ದ ಸಾದ್ವಿ ಪ್ರಜ್ಞಾ ಸಿಂಗ್ ಅವರು “ಮಾತೃಭೂಮಿಯ ಹಿತದೃಷ್ಟಿಯ ವಿಚಾರ ಬಂದಾಗ ನಮ್ಮ ಬದುಕು ಅತ್ಯಂತ ಘೋರ ಸ್ಥಿತಿಗೆ ತಲುಪಿದರೂ ಭಾರತ್ ಮಾತಾ ಕಿ ಜೈ ಎನ್ನುವ ಮಟ್ಟಕ್ಕೆ ಏರಬೇಕೇ ಹೊರತು ಸ್ವಾರ್ಥ ಬದುಕಿಗಾಗಿ ಭಾರತ್ ತೇರೆ ತುಕ್ಡೇ ಹೋಂಗೆ ಎನ್ನುವ ಮಟ್ಟಕ್ಕೆ ಇಳಿಯಬಾರದು ಎಂಬುದನ್ನು ತಮ್ಮದೇ ಉದಾಹರಣೆಯ ಮೂಲಕ ವಿವರಿಸಿ ದೇಶವಾಸಿಗಳಿಗೆ ಜಾಗೃತಿ ಮೂಡಿಸಿದರು.
ಕೆಲವು ಹೇಳಿಕೆಗಳು ಇಲ್ಲಿವೆ. ಉಳಿದ ಹಲವು ಹೇಳಿಕೆಗಳನ್ನು ನೀವೇ ಕೇಳಿ..
“ಚಿತ್ರಹಿಂಸೆ ಕೊಟ್ಟು ನನ್ನ ಬಾಯಿಂದ ದೇಶ ವಿರೋಧಿ ಹೇಳಿಕೆ ಹೊರ ತಂದು ಗೆಲ್ಲಲು ಪ್ರಯತ್ನಿಸಿದ್ದ ಅವರೆಲ್ಲರೂ
ನಾನು ಬಾಯಿಗೆ ಆಕ್ಸಿಜನ್ ಇಟ್ಟು ಉಸಿರಾಡುವ ಪರಿಸ್ಥಿತಿಗೆ ಬಂದಾಗಲೂ ಜಗ್ಗದೇ ಇದ್ದಾಗ ಸೋತು ಹೋಗಿದ್ದರು”
“ಅಂದಿನ ಬ್ರಿಟಿಷರೂ ಕೂಡಾ ಭಾರತೀಯ ಸ್ತ್ರೀಯನ್ನು ಈ ಮಟ್ಟಕ್ಕೆ ಹಿಂಸಿಸಿರಲಿಕ್ಕಿಲ್ಲ. ಆದರೆ ಇಂದು ನಮ್ಮವರೇ ನನ್ನನ್ನು ಬಂಧಿಸಿ ಚಿತ್ರಹಿಂಸೆ ನೀಡಿದರು. ಇವರಿಗೆ ನಾನೊಬ್ಬ ಸ್ತ್ರೀ ಎನ್ನುವುದಕ್ಕಿಂತ ಕೇಸರಿ ಧರಿಸಿರುವ ಸಾಧ್ವಿ ಆಗಿರುವುದೇ ದೊಡ್ಡ ಸಮಸ್ಯೆ ಆಗಿತ್ತು”
“ಭಾರತದ ಆತ್ಮ ಆಧ್ಯಾತ್ಮ. ಆಧ್ಯಾತ್ಮಕ್ಕೆ ಮೂಲ ಧರ್ಮ. ಅಂತಹ ಸನಾತನ ಧರ್ಮವನ್ನು ಒಡೆದರೆ ಸಾಕು, ಭಾರತ ನಮ್ಮ ವಶವಾಗುತ್ತದೆ ಎಂದು ಕೆಲವು ವಿಧ್ವಂಸಕ ಶಕ್ತಿಗಳು ಹೊಂಚು ಹಾಕಿ ಕುಳಿತಿವೆ. ಆ ದುಷ್ಟ ಶಕ್ತಿಗಳೇ ಭಾರತದಲ್ಲಿ ಭಯೋತ್ಪಾದನೆಯನ್ನು ಪೋಷಿಸುವ ಕೆಲಸ ಮಾಡುತ್ತಿವೆ”
“ಇಂತಹವರೇ ಕೇಸರಿ ಭಯೋತ್ಪಾದನೆ ಹೆಸರಿನಲ್ಲಿ ಭಾರತವನ್ನು ಜಗತ್ತಿನ ಇತರೆ ರಾಷ್ಟ್ರಗಳ ಮುಂದೆ ತಲೆ ತಗ್ಗಿಸುವಂತೆ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಅದೇ ಷಡ್ಯಂತ್ರದ ಮುಂದುವರಿದ ಭಾಗವಾಗಿ ನನ್ನನ್ನು ಎಲ್ಲಾ ಕಾನೂನು ನೀತಿ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಬಂಧಿಸಿ ಹಿಂಸಿಸಿದರು
Leave A Reply