ಬುದ್ಧಿಜೀವಿಗಳೇ ಹಲುಬುವುದನ್ನು ಬಿಡಿ, ಹೆಗಡೆ ಮಾತು ಸವಾಲಾಗಿ ಸ್ವೀಕರಿಸಿ
ಕೆಲ ಎಡಬಿಡಂಗಿ ಸಾಹಿತಿಗಳು ಸರ್ಕಾರಿ ಸೈಟ್ ಗಾಗಿ ಸಾಹಿತಿಯ ಪಟ್ಟ ಕಟ್ಟಿಕೊಂಡಿದ್ದಾರೆ.. ಜಾತ್ಯತೀತ ಎಂಬುದು ಶೋಕಿಯಾಗಿದೆ. ತಲೆ ಬುಡವಿಲ್ಲದವರಿಂದ ಜಾತ್ಯತೀತ ಎಂಬ ವಾದ ಮಂಡಿಸಲಾಗುತ್ತಿದೆ..
ಕೇಂದ್ರ ಕೌಶಲಾಭಿವೃದ್ಧಿ ಸಚಿವ, ಹಿಂದೂತ್ವದ ಫೈರ್ ಬ್ರ್ಯಾಂಡ್, ತನ್ನ ಸಿದ್ಧಾಂತದೊಂದಿಗೆ ಎಂದೂ ರಾಜಿಯಾಗದ ಅನಂತಕುಮಾರ ಹೆಗಡೆ ಹೇಳಿರುವ ಈ ಮಾತುಗಳಲ್ಲಿ ಎಷ್ಟು ಸತ್ಯವಿದೆಯಲ್ಲವೇ.? ಜಾತ್ಯತೀತತೆಯ ಹೆಸರಿನಲ್ಲಿ ಕೆಲವು ಎಡಬಿಡಂಗಿ ಸಾಹಿತಿಗಳು ನಡೆಸಿದ ದೊಂಬರಾಟಗಳು ಕಡಿಮೆಯೇ.. ಸದಾ ಬಿಜೆಪಿಯನ್ನು ನಿಂದಿಸುತ್ತಾ.! ವಿನಾಕಾರಣ ಹಳಿಯುತ್ತಾ ತಾವು ಒಂದು ಪಕ್ಷದ ಏಜೆಂಟರು ಎಂಬಂತೆ ಬಹಿರಂಗವಾಗಿ ವರ್ತಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಇವರು ರಾಜಕಾರಣದ ಕಳಂಕವನ್ನು ಹಚ್ಚಿಬಿಟ್ಟರು. ಅಲ್ಲೂ ಜಾತ್ಯತೀತರಿಗೆ ಮತ ನೀಡಬೇಡಿ ಎಂದು ಸಾಹಿತ್ಯ ಸಮ್ಮೇಳದ ಅಧ್ಯಕ್ಷ ಚಂಪಾ ಹೇಳುವ ಮೂಲಕ ತಮ್ಮ ಸಣ್ಣತನವನ್ನು, ರಾಜಕಾರಣವನ್ನು ಬಹಿರಂಗಪಡಿಸಿದರು. ಇನ್ನು ಕೆಲವು ಎಡಬಿಡಂಗಿ ಮತ್ತು ಸ್ವಯಂ ಘೋಷಿತ ಸಾಹಿತಿಗಳು, ಬಹುವೇಷ ಧರಿಸುವ ಪ್ರಕಾಶ್ ರೈರಂತ ನಟರು, ಸ್ವಯಂ ಘೋಷಿತ ಬುದ್ಧಿ ಜೀವಿಗಳು ತಮ್ಮ ಮಾತಿನ ತೆವಲು ತೀರಿಸಿಕೊಳ್ಳಲು, ಕಾಂಗ್ರೆಸ್ ನವರನ್ನು ಮೆಚ್ಚಿಸಲು, ಮೋದಿ ಅವರನ್ನು ತೆಗಳಲು ಮಾತ್ರ ವೇದಿಕೆಗಳನ್ನು ಬಳಸಿಕೊಳ್ಳುತ್ತಿರುವುದು ಹೆಗಡೆ ಅವರ ಮಾತಿನಲ್ಲಿ ಸುಳ್ಳಿಲ್ಲ ಎಂಬುದು ಸಾಬೀತಾಗುತ್ತದೆ.
ಅನಂತಕುಮಾರ ಹೆಗಡೆರನ್ನು ವಿರೋಧಿಸುವ ಬುದ್ಧಿಜೀವಿಗಳು ತಾವೆಷ್ಟು ನಿಷ್ಠರೆಂಬುದು ಸಾಬೀತುಪಡಿಸಲಿ..!
ನಾವು ದೇಶದ ಅಭಿವೃದ್ಧಿ, ಸಮಾನತೆ ಮಾತ್ರ ಶ್ರಮಿಸುತ್ತಿದ್ದೇವೆ, ಯಾವುದೋ ಪಕ್ಷಕ್ಕಲ್ಲ ಎಂಬುದನ್ನು ಸಾಬೀತುಪಡಿಸಿ
ಅನಂತಕುಮಾರ ಹೆಗಡೆ ಮುಖಕ್ಕೆ ಹೊಡೆದಂತೆ ಹೀಗೊಂದಿಷ್ಟು ಕಟು ನಿರ್ಧಾರ ತೆಗೆದುಕೊಳ್ಳುವ ತಾಕತ್ತು ಇದೆಯೇ
ಜಾತ್ಯತೀತತೆಗೆ ಬೆಲೆ ನೀಡುವವರೇ ಸಿದ್ಧಾಂತಕ್ಕೆ ಬೆಲೆ ನೀಡಿ, ಪಕ್ಷ, ವ್ಯಕ್ತಿಗಲ್ಲ
ಆಡಳಿತದಲ್ಲಿರುವ ಸರ್ಕಾರದ ಚೇಲಾಗಳು ನಾವು ಅಲ್ಲ ಎನ್ನುವ ರೀತಿ ವರ್ತಿಸಿ
ಜಾತ್ಯತೀತರು ಪಕ್ಷಕ್ಕೆ, ಧರ್ಮಕ್ಕೆ, ಜಾತಿಗೆ ಸೇರಿಲ್ಲ ಎಂದು ಘೋಷಿಸಿದರಷ್ಟೇ ಅಲ್ಲ ವರ್ತಿಸಿ
ನಮಗೆ ಯಾವುದೇ ಪ್ರಶಸ್ತಿ, ಸ್ಥಾನ ಮಾನ, ಬಿರುದ್ದು ಬೇಡ ಎಂದು ಸವಾಲು ಹಾಕಿ
ನಾವು ವಿಚಾರಗಳಿಗೆ ಬದ್ಧರಾದವರು ಪಕ್ಷ, ವ್ಯಕ್ತಿ, ಸೈಟ್ ನೀಡುವ ಸರ್ಕಾರಕಲ್ಲ ಎಂದು ನಿರೂಪಿಸಿ
ಬರೀ ಮೋದಿ, ಬಿಜೆಪಿ ವಿರುದ್ಧ ಧ್ವೇಷ ಕಾರುವುದೇ ಜಾತ್ಯತೀತತೆ ಎಂಬುದು ಸುಳ್ಳು ಎಂಬುದು ಸಾಬೀತುಪಡಿಸಿ
ಜಾತಿ, ಧರ್ಮ ಮೀರಿದ್ದು ಜಾತ್ಯತೀತತೆ ಎಂದರೇ ಅದೇಕೆ ಜಾತಿ ಸಂಘಟನೆಗಳೊಂದಿಗೆ ನಿತ್ಯ ಹಾರಾಟ, ಹೋರಾಟ ಮಾಡುತ್ತೀರಿ
ಬರೀ ಹಿಂದೂ ಧರ್ಮವನ್ನಲ್ಲ ಎಲ್ಲ ಧರ್ಮದ ತಪ್ಪುಗಳನ್ನು ಖಂಡಿಸಿ, ಬದುಕುವ ತಾಕತ್ತು ಪ್ರದರ್ಶಿಸಿ.
ಹೆಗಡೆಯವರದ್ದು ವಿವಾದಾತ್ಮಕವಲ್ಲ ವಾಸ್ತವಕ್ಕೆ ಹತ್ತಿರವಾದ ಮಾತು
ಸಂವಿಧಾನ ತಿದ್ದುಪಡಿಯಾಗಲಿ, ಸೋಗಲಾಡಿ ಜಾತ್ಯತೀತೆಯ ಬಗೆಯಾಗಲಿ, ಸೈಟ್ ಸಾಹಿತ್ಯವಾಗಲಿ, ಪ್ರಶಸ್ತಿ ಹಂಗಿನ, ಸೈಟ್ ಪಡೆದ ಬಹುಭಾಷಾ ನಟನಾಗಲಿ ಈ ಎಲ್ಲ ವಿಷಯಗಳ ಬಗ್ಗೆ ಅನಂತಕುಮಾರ ಹೆಗಡೆ ಮಾತನಾಡಿರುವುದು ಕೆಲ ಸೈಟ್ ಸಾಹಿತಿಗಳಿಗೆ, ಬುದ್ಧಿಜೀವಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಸಂವಿಧಾನ ಇದುವರೆಗೆ ಹಲವು ಬಾರಿ ಬದಲಾವಣೆಯಾಗಿದೆ, ಇಂದಿರಾ ಕಾಲದಲ್ಲಿ ಸಂವಿಧಾನದ ಮೂಲ ಆಶಯವನ್ನೇ ಬದಲಾಯಿಸಲಾಗಿದೆ. ಕೇವಲ ಮೋದಿ, ಬಿಜೆಪಿ ಮತ್ತು ಹಿಂದೂ ಧರ್ಮದ ಬಗ್ಗೆ ಮಾತನಾಡುವ ಜಾತ್ಯತೀತರ ಸೋಗಲಾಡಿತನವು ಪದೇ ಪದೆ ಬಹಿರಂಗವಾಗುತ್ತಿದೆ. ಆಡಳಿತದಲ್ಲಿರುವ ಸರ್ಕಾರಕ್ಕೆ ಬಕೆಟ್ ಹಿಡಿದು ಬಿಜೆಪಿ, ಮೋದಿ ಮತ್ತು ಹಿಂದೂ ಧರ್ಮವನ್ನು ತೆಗಳಿ ಸೈಟ್, ಅಧಿಕಾರ, ಸ್ಥಾನ ಮಾನ, ಪ್ರಶಸ್ತಿ, ಬಿರುದ್ಧು ಪಡೆದವರ ಸಂಖ್ಯೆಯೇನು ಸಣ್ಣದೇ..?
ಜಾತ್ಯತೀತತೆ ಎಂದರೆ ಧರ್ಮ, ಜಾತಿ, ಪಕ್ಷಗಳನ್ನು ಮೀರಿದ್ದು ಎಂಬುದನ್ನು ಸಾಬೀತು ಪಡಿಸಿ ವರ್ತಿಸಿದರೇ ಜಾತ್ಯತೀತತೆಯನ್ನು ವಿರೋಧಿಸುವವರು ಅದರ ಬೆಂಬಲಕ್ಕೆ ನಿಲ್ಲುತ್ತಾರೆ. ಅನಂತಕುಮಾರ ಹೆಗಡೆ ಅವರನ್ನೆ ತೆಗೆದುಕೊಳ್ಳಿ ಯಾರ ವಿರೋಧವೇ ಇರಲಿ, ಅಧಿಕಾರದ ಹಂಗಿಲ್ಲದೇ ತಮ್ಮ ತತ್ತ್ವ ಸಿದ್ಧಾಂತಕ್ಕೆ ಬೆಲೆ ನೀಡುತ್ತಾರೆ. ಅದೆಷ್ಟೇ ಹೋರಾಟ, ಪ್ರತಿರೋಧ ಎದುರಾದರೂ ನನ್ನ ಸಿದ್ಧಾಂತದೊಂದಿಗೆ ರಾಜಿಯಾಗಲ್ಲ ಎಂಬುದನ್ನು ಪದೇ ಪದೆ ಸಾಬೀತುಪಡಿಸುತ್ತಾರೆ. ಇದೇ ಅಲ್ಲವೇ ಅವರು ನಂಬಿದ, ಪಾಲಿಸುವ ಸಿದ್ಧಾಂತಕ್ಕೆ ನೀಡುವ ಗೌರವ. ಹೆಗಡೆ ಅವರ ಬದ್ಧತೆಯನ್ನು ಸೋಗಲಾಡಿ ಬುದ್ಧಿಜೀವಿಗಳು ಸೈಟಿನ ಆಸೆ ಬಿಟ್ಟು ತೋರಿಸಲಿ ಆಗ ನಿಮ್ಮ ಸಿದ್ಧಾಂತದಲ್ಲಿ ಸೋಗಲಾಡಿತನ ಇಲ್ಲ ಎಂಬುದು ಒಪ್ಪೋಣ..
Leave A Reply