ಕಾಶ್ಮೀರದಲ್ಲಿ ಶಾಂತಿ ಕದಡಿದ ಉಗ್ರ ಹಫೀಜ್, ಸಲಾಹುದ್ದಿನ್ ಸೇರಿ 12 ಜನರ ವಿರುದ್ಧ ಚಾರ್ಜ್ ಶೀಟ್
ದೆಹಲಿ: ವಿಶ್ವಕ್ಕೆ ಸವಾಲಾಗಿ ಪರಿಣಮಿಸಿರುವ, ಭಾರತಕ್ಕೆ ಕಂಟಕವಾಗಿರುವ ಲಷ್ಕರ್ ಎ ತೊಯ್ಯಬ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಸೈಯದ್ ಸಲಾಹುದ್ದೀನ್ ಸೇರಿ 10 ಭಯೋತ್ಪಾದಕರ ವಿರುದ್ಧ ರಾಷ್ಟ್ರೀಯ ತನಿಖಾ ದಳ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಭಯೋತ್ಪಾದಕರಿಗೆ ಸಹಾಯ ಧನ ಸಹಾಯ ಪ್ರಕರಣದ ಕುರಿತು ತನಿಖೆ ಮುಂದುವರಿದೆ. ಇದು ಶೀಘ್ರದಲ್ಲಿ ಉಗ್ರ ನಿಯಂತ್ರಣಕ್ಕೆ ಹೊಸ ತಿರುವು ದೊರೆಯುವ ಮುನ್ಸೂಚನೆ ದೊರೆತಿದೆ.
1,279 ಪುಟದ ದೋಷಾರೋಪ ಪಟ್ಟಿಯನ್ನು ಕೋರ್ಟ್ ಗೆ ಸಲ್ಲಿಸಿರುವ ರಾಷ್ಟ್ರೀಯ ತನಿಖಾ ದಳವೂ ತನಿಖೆ ಮುಂದುವರಿಸಲು ಅನುಮತಿಯನ್ನು ಪಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ 10 ಜನರ ವಿಚಾರಣೆ ಗುರುವಾರ ಕೊನೆಗೊಂಡಿದೆ.
ಭಯೋತ್ಪಾದನೆ ನಿಯಂತ್ರಣ ಕಾನೂನು, ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿ ನಾನಾ ಕಾನೂನಿನ ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 60 ಸ್ಥಳಗಳಲ್ಲಿ ದಾಳಿ ಮಾಡಿದ್ದು, 950 ಮಹತ್ತರ ದಾಖಲೆ ವಶಕ್ಕೆ ಪಡೆದುಕೊಳ್ಳಲಾಗಿದೆ.ಪ್ರಕರಣದಲ್ಲಿ 300 ಸಾಕ್ಷಿಗಳು ದೊರೆತಿವೆ.
ಚಾರ್ಜ ಶೀಟ್ ನಲ್ಲಿ ಕಾಶ್ಮೀರದ ಪ್ರತ್ಯೇಕವಾದಿ, ದೇಶದ್ರೋಹಿ ಸೈಯದ್ ಅಲಿ ಶಾ ಗೀಲಾನಿ, ಮಿರ್ವಾಜ್ ಉಮರ್ ಫಾರೂಖ್, ನಯೀಮ್ ಖಾನ್, ಬಶೀರ್ ಭಟ್, ರಾಜಾ ಮೇಹ್ರಾಜುದ್ದಿನ್ ಕಲ್ವಾಲ್ ಸೇರಿ ಒಟ್ಟು 12 ಜನರ ಹೆಸರು ದಾಖಲಿಸಲಾಗಿದೆ.
ಕಾಶ್ಮೀರದಲ್ಲಿ ಕಲ್ಲು ಎಸೆಯುವವರಿಗೆ ಧನ ಸಹಾಯ ಮಾಡಿದ್ದ ಮತ್ತು ಶಾಂತಿ ಕದಡಿದವರಿಗೆ ಹಣ ನೀಡಿದವರ ವಿರುದ್ಧ ದೋಷಾರೋಪ ಪಟ್ಟಿಯಲ್ಲಿ ಮೊದಲ ಸಾಲಿನಲ್ಲಿ ನಿಲ್ಲಿಸಲಾಗಿದೆ.
Leave A Reply