ಕೇರಳದಲ್ಲಿ ಎಬಿವಿಪಿ ಕಾರ್ಯಕರ್ತನ ಹತ್ಯೆ, ಪಿಎಫ್ಐನವರೇ ಮಾಡಿದರೇ?
ತಿರುವನಂತಪುರ: ಕರ್ನಾಟಕದಲ್ಲಿ ಬಿಜೆಪಿ ಕಾರ್ಯಕರ್ತ ದೀಪರ್ ರಾವ್ ಹತ್ಯೆ ಪ್ರಕರಣ ಜನಮಾನಸದಿಂದ ಮರೆಮಾಚುವ ಮುನ್ನವೇ ಕೇರಳದಲ್ಲಿ ಮತ್ತೊಬ್ಬ ಹಿಂದೂವನ್ನು ಹತ್ಯೆ ಮಾಡಲಾಗಿದ್ದು, ಹಿಂದೂಗಳ ವಿರುದ್ಧದ ಮನಸ್ಸುಗಳ ಅಸ್ತಿತ್ವ ಢಾಳಾಗಿದೆ. ಅಲ್ಲದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ದ ಇಸ್ಲಾಮಿಕ್ ಮೂಲಭೂತವಾದಿಗಳೇ ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹೌದು, ಕಣ್ಣೂರು ಜಿಲ್ಲೆಯ ಪೆರವೂರ್ ಎಂಬಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತ ಶಾಮ್ ಪ್ರಸಾದ್ ಎಂಬುವವರ ಮೇಲೆ ಮೂವರು ಮುಸುಕುಧಾರಿಗಳು ದಾಳಿ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊಮ್ಮೇರಿ ಗೋಟ್ ಫಾರ್ಮ್ ಬಳಿ ಶ್ಯಾಮ್ ಪ್ರಸಾದ್ ಬೈಕ್ ಮೇಲೆ ತೆರಳುತ್ತಿರುವಾಗ ಮೂವರು ಮುಸುಕುಧಾರಿಗಳು ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ. ಗಾಯಗೊಂಡರೂ ತಪ್ಪಿಸಿಕೊಳ್ಳಲು ಯತ್ನಿಸಿದ ಶ್ಯಾಮ್, ಯಾವುದೋ ಮನೆಗೆ ನುಗ್ಗಿದ್ದಾರೆ. ಇಷ್ಟಾದರೂ ಸುಮ್ಮನಿರದ ದುಷ್ಕರ್ಮಿಗಳು ಬೆನ್ನತ್ತಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಶ್ಯಾಮ್ ಪ್ರಸಾದ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯದಲ್ಲೇ ಮೃತಪಟ್ಟರು ಎಂದು ಮೂಲಗಳಿಂದ ತಿಳಿದುಬಂದಿದೆ.
ಪೆರವೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, “ಪ್ರಾಥಮಿಕ ವರದಿಯ ಆಧಾರದಂತೆ ಹತ್ಯೆಯ ಹಿಂದೆ ಪಿಎಫ್ಐನ ಇಸ್ಲಾಮಿಕ್ ಭಯೋತ್ಪಾದಕರ ಕೈವಾಡ ಇರಬಹುದು” ಎಂದು ಎಬಿವಿಪಿ ಟ್ವೀಟ್ ಮಾಡಿದೆ.
ಒಟ್ಟಿನಲ್ಲಿ ಕರ್ನಾಟಕ ಹಾಗೂ ಕೇರಳ ರಾಜ್ಯಗಳು ಹಿಂದೂಗಳ ಹತ್ಯಾ ಕೇಂದ್ರಸ್ಥಾನಗಳಾಗಿದ್ದು, ಬಿಜೆಪಿ, ಆರೆಸ್ಸೆಸ್ ಹಾಗೂ ಎಬಿವಿಪಿ ಕಾರ್ಯಕರ್ತರೇ ಟಾರ್ಗೆಟ್ ಆಗುತ್ತಿದ್ದಾರೆ. ಇಷ್ಟಾದರೂ ಕೇರಳದ ಸಿಪಿಎಂ ಹಾಗೂ ಕರ್ನಾಟಕದ ಕಾಂಗ್ರೆಸ್ ಸರ್ಕಾರಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ.
Leave A Reply