ಜರ್ಮನಿಯಲ್ಲಿ ಹಿಂದೂ ದೇವಾಲಯ ನಿರ್ಮಾಣ ಮಾಡಲು ಆಶೀರ್ವಾದ ಮಾಡಿತು ಗೋವು, ನಮ್ಮವರಿಗೆ ಗೋವೆಂದರೆ ನೋವು!
ಬರ್ಲಿನ್: ಗೋವು ಎಂದರೆ ಭಾರತದಲ್ಲಿ ಮಾತ್ರವಲ್ಲ, ಅನ್ಯ ದೇಶಗಳಲ್ಲೂ ಪೂಜ್ಯನೀಯ ಭಾವನೆಯಿಂದ ನೋಡುತ್ತಾರೆ ಎಂಬುದು ಸಾಬೀತಾಗಿದೆ.
ಜರ್ಮನಿಯ ಬ್ರೆಮೆನ್ ಎಂಬ ಪ್ರದೇಶದಲ್ಲಿ ಹಿಂದೂಗಳು ದೇವಾಲಯ ಕಟ್ಟಲು ಗೋವಿನ ಆಶೀರ್ವಾದ ಪಡೆದಿದ್ದು, ದೇವಾಲಯ ನಿರ್ಮಾಣಕ್ಕೆ ಹಸು ಅನುಮತಿ ನೀಡಿದೆ ಎಂದೇ ಭಾವಿಸಲಾಗಿದೆ.
ಹೌದು, ಜರ್ಮನಿಯ ಈ ಪ್ರದೇಶದಲ್ಲಿ ಸುಮಾರು 300 ಹಿಂದೂ ಕುಟುಂಬಗಳಿದ್ದು, ಹಿಂದೂ ದೇವಾಲಯ ಕಟ್ಟಲು ತೀರ್ಮಾನಿಸಿದ್ದಾರೆ. ಅದಕ್ಕಾಗಿ ಜಾಗವೊಂದನ್ನು ಸಹ ನಿಗದಿಪಡಿಸಿದ್ದು, ಸಂಪ್ರದಾಯದಂತೆ ಗೋವಿನ ಅನುಮತಿ ಪಡೆದಿದ್ದಾರೆ. ಅದಕ್ಕಾಗಿ ರೈತ ಫ್ರ್ಯಾಂಕ್ ಇಮ್ಹಾಫ್ ಎಂಬುವವರ ಮಾಡೆಲ್ ಎಂಬ ಗೋವನ್ನು ದೇವಾಲಯ ನಿರ್ಮಾಣ ಮಾಡಲು ನಿಗದಿಪಡಿಸಿರುವ ಜಾಗಕ್ಕೆ ಕರೆದುಕೊಂಡು ಬಂದು ಆಶೀರ್ವಾದ ಪಡೆದಿದ್ದಾರೆ. ನಂಬಿಕೆಯ ಪ್ರಕಾರ, ಗೋವು ದೇವಾಲಯ ನಿರ್ಮಾಣ ಮಾಡುವ ಸ್ಥಳದಲ್ಲಿ ಕೆಲಹೊತ್ತು ನಿಂತರೆ ದೇವಾಲಯ ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ ಎಂದು, ಹಾಗೂ ನಿಲ್ಲದಿದ್ದರೆ ಬೇಡ ಎಂದು ಅರ್ಥ. ಅದರಂತೆ ಸ್ಥಳದಲ್ಲಿ ಮಾಡೆಲ್ ಕೆಲಹೊತ್ತು ನಿಂತಿದ್ದು, ದೇವಾಲಯ ನಿರ್ಮಾಣಕ್ಕೆ ಅನುಮತಿ ನೀಡಿದೆ ಎಂದೇ ನಂಬಲಾಗಿದೆ.
ದೇವಾಲಯ ನಿರ್ಮಿಸಲು ಗೋವು ಅನುಮತಿ ನೀಡಿದೆ. ಈ ಪ್ರಾಶಸ್ತ್ಯವಾದ ಸ್ಥಳದಲ್ಲಿ ನಾವು ಹಿಂದೂ ದೇವಾಲಯ ನಿರ್ಮಿಸುತ್ತೇವೆ ಎಂದು ಹಿಂದೂಗಳ ಮುಖಂಡ ಪದ್ಮನಾಥನ್ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಭಾರತೀಯರೂ ಸೇರಿ ಸುಮಾರು 10 ಸಾವಿರ ಹಿಂದೂಗಳು ವಾಸಿಸುತ್ತಾರೆ.
ವಿದೇಶದಲ್ಲೂ ಗೋವು ಎಂದರೆ ಪೂಜ್ಯನೀಯ ಭಾವನೆಯಿದ್ದು, ದುರದೃಷ್ಟವಶಾತ್ ಭಾರತದಲ್ಲಿ ಮಾತ್ರ ಗೋವು ಎಂದರೆ ತಿನ್ನುವ ಮಾಂಸ ಎಂದೇ ಭಾವಿಸುವವರೂ ಇದ್ದಾರೆ.
Leave A Reply