ನರೇಂದ್ರ ಮೋದಿ ಅವರು 56 ಇಂಚಿನ ಎದೆಯನ್ನು ಯಾರ್ಯಾರ ಎದುರು ತೋರಿಸಿದ್ದಾರೆ ಗೊತ್ತಾ ಓವೈಸಿ?
ಅಸಾದುದ್ದೀನ್ ಓವೈಸಿ
ಮಮತಾ ಬ್ಯಾನರ್ಜಿ
ಸೋನಿಯಾ ಗಾಂಧಿ
ರಾಹುಲ್ ಗಾಂಧಿ
ಲಾಲೂ ಪ್ರಸಾದ್ ಯಾದವ್
ಮಲ್ಲಿಕಾರ್ಜುನ ಖರ್ಗೆ
ಸಿದ್ದರಾಮಯ್ಯ
ಜಿಗ್ನೇಶ್ ಮೇವಾನಿ
ಹಾರ್ದಿಕ್ ಪಟೇಲ್
ಅರವಿಂದ್ ಕೇಜ್ರಿವಾಲ್…
ಭಾರತದಲ್ಲಿ ಈ ಪಟ್ಟಿಗೆ ತುಂಬ ಜನ ಇದ್ದಾರೆ. ಇವರೆಲ್ಲರ ನಿತ್ಯ ಹಾಗೂ ಒಂದೇ ಕಾಯಕ. ಪ್ರಧಾನಿ ನರೇಂದ್ರ ಮೋದಿ ಅವರನ್ನು ತೆಗಳುವುದು. ಇವರು ಮೋದಿಯವರನ್ನು ತೆಗಳದಿದ್ದರೆ ಉಂಡ ಅನ್ನ ಕರಗುವುದಿಲ್ಲ, ನಿದ್ದೆ ಬರುವುದಿಲ್ಲ ಎಂಬುವಷ್ಟರ ಮಟ್ಟಿಗೆ ಸುಖಾಸುಮ್ಮನೆ ಟೀಕೆಗೆ ಒಗ್ಗಿಕೊಂಡಿದ್ದಾರೆ ಹಾಗೂ ಅದನ್ನೇ ಕೆಲಸ, ರಾಜಕಾರಣವನ್ನಾಗಿ ಮಾಡಿಕೊಂಡಿದ್ದಾರೆ.
ಇವರೆಲ್ಲರಿಗೂ ಮುಖ್ಯಸ್ಥರಂತಿರುವ ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಎಂದಿನ ನಿತ್ಯ ಕಾಯಕ ಮುಂದುವರಿಸಿದ್ದು, “ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 56 ಇಂಚಿನ ಎದೆಯನ್ನು ಕೇವಲ ಮುಸ್ಲಿಮರ ಎದುರು ಮಾತ್ರ ಪ್ರದರ್ಶಿಸುತ್ತಾರೆ. ಸಂಸತ್ತಿನಲ್ಲಿ ಮುಸ್ಲಿಂ ಸಂಸದರ ಅಭಿಪ್ರಾಯ ಕೇಳದೆ ತ್ರಿವಳಿ ತಲಾಖ್ ಜಾರಿಗೊಳಿಸಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ. ರಜಪೂತರ ಕರ್ಣಿ ಸೇನಾ ಪ್ರತಿಭಟನೆ ಟೀಕಿಸುವ ಭರದಲ್ಲಿ ಮೋದಿ ಅವರನ್ನು ಟೀಕಿಸಿದ್ದಾರೆ.
ಹಾಗಾದರೆ ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಮರ ವಿರೋಧಿಯೇ? ಮುಸ್ಲಿಮರ ಎದುರು ಮಾತ್ರ ಮೋದಿ ತಮ್ಮ ಶೌರ್ಯ ಪ್ರದರ್ಶಿಸಿದ್ದಾರೆಯೇ? ತ್ರಿವಳಿ ತಲಾಖ್ ವಿರುದ್ಧ ಕಾನೂನು ರಚಿಸಲು ಲೋಕಸಭೆಯಲ್ಲಿ ಮಸೂದೆ ಅಂಗೀಕಾರ ಪಡೆದಿದ್ದು ಮುಸ್ಲಿಮರಿಗೆ ಮಾಡಿದ ಅನ್ಯಾಯವೇ? ಅಸಲಿಗೆ ಮೋದಿ ಅವರು ಯಾರ ವಿರುದ್ಧ ತಮ್ಮ 56 ಇಂಚಿನ ಎದೆ ತೋರಿದ್ದಾರೆ? ಏನಾಗಿದೆ ಈ ಅಸಾದುದ್ದೀನ್ ಓವೈಸಿಗೆ?
ಹೌದು, ತ್ರಿವಳಿ ತಲಾಖ್ ವಿರುದ್ಧ ಲೋಕಸಭೆಯಲ್ಲಿ ಮಸೂದೆ ಅಂಗೀಕಾರ ಪಡೆಯುವಲ್ಲಿ ಪ್ರಧಾನಿ ಮೋದಿ ಅವರ ಪಾಲು ತುಂಬ ಇದೆ. ಹಾಗಂತ ಇದರಲ್ಲಿ ಮುಸ್ಲಿಮರ ವಿರೋಧ ಜಾರಿಗೊಳಿಸುವ ಕಾನೂನು ಹೇಗಾಗುತ್ತದೆ ಸ್ವಾಮಿ? ದೇಶಾದ್ಯಂತ ಲಕ್ಷಾಂತರ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ನಿಂದ ಬೇಸತ್ತು ಸಹಿ ಸಂಗ್ರಹಕ್ಕೆ ಮುಂದಾಗಿದ್ದರು. ಇದನ್ನು ಗಮನಿಸಿಯೇ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ವಿರುದ್ಧ ಕಾನೂನು ರಚಿಸುವಂತೆ ನಿರ್ದೇಶನ ನೀಡಿತ್ತು. ಅದರಂತೆ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ವಿರುದ್ಧ ಕಾನೂನು ರಚಿಸಲು ಮುಂದಾಗಿದೆ.
ಇಷ್ಟಕ್ಕೂ ತ್ರಿವಳಿ ತಲಾಖ್ ಅನ್ನು ಇಡೀ ದೇಶದ ಮುಸ್ಲಿಂ ಮಹಿಳೆಯರು ಸ್ವಾಗತಿಸಿದ್ದಾರೆ. ಹಾಗೊಂದು ವೇಳೆ ಮೋದಿ ಮುಸ್ಲಿಂ ವಿರೋಧಿಯಾಗಿದ್ದರೆ, ತಲಾಖ್ ನಿಷೇಧಿಸಲು ನಿರ್ದೇಶಿಸಿದ ಸುಪ್ರೀಂ ಕೋರ್ಟ್ ಸಹ ಮುಸ್ಲಿಮರ ವಿರೋಧಿಯಾಗುತ್ತದೆಯೇ? ಈ ಓವೈಸಿ ಮಾತಿನಲ್ಲಿ ಯಾವ ಅರ್ಥವಿದೆ?
ಹಾಗೆ ನೋಡಿದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕವೇ ಮುಸ್ಲಿಮರಿಗೆ ಅನೇಕ ಅನುಕೂಲಗಳಾಗಿವೆ. ಪುರುಷರ ಸಹಾಯವಿಲ್ಲದೆ ಮುಸ್ಲಿಂ ಮಹಿಳೆಯರು ಮೆಕ್ಕಾ ಪ್ರವಾಸ ಕೈಗೊಳ್ಳಲು, ತ್ರಿವಳಿ ತಲಾಖ್ ಎಂಬ ಜ್ವಲಂತ ತೊಲಗಿಸಲು, ಹಜ್ ಯಾತ್ರೆ ಸಬ್ಸಿಸಿ ರದ್ದುಗೊಳಿಸಿ, ಆ ಹಣವನ್ನು ಮುಸ್ಲಿಂ ಮಹಿಳೆಯರ ಶಿಕ್ಷಣಕ್ಕೆ ಮೀಸಲಿಡಲು ಮುಂದಾಗಿರುವುದು ಮುಸ್ಲಿಮರ ಸಬಲೀಕರಣ ತೋರಿಸುತ್ತದೆ. ಇಷ್ಟಿದ್ದರೂ ಓವೈಸಿ ಟೀಕಿಸುವುದೇಕೆ? ನಿಜವಾದ ಮುಸ್ಲಿಂ ವಿರೋಧಿಗಳು ಮಹಿಳೆಯರ ಪ್ರಗತಿ ತಡೆಯುವ ಓವೈಸಿಯೋ, ಮಹಿಳಾ ಸಬಲೀಕರಣಕ್ಕೆ ಪಣ ತೊಟ್ಟಿರುವ ನರೇಂದ್ರ ಮೋದಿಯವರೋ?
ಖಂಡಿತವಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಈ ಮೂರುವರೆ ವರ್ಷದಲ್ಲಿ ತಮ್ಮ 56 ಇಂಚಿನ ಎದೆಯ ತಾಕತ್ತನ್ನು ತೋರಿಸಿದ್ದಾರೆ. ಆದರೆ ಅದು ಯಾವುದೇ ಸಮುದಾಯ ಅಥವಾ ಜಾತಿಯ ವಿರುದ್ಧ ಅಲ್ಲ ಎಂಬುದನ್ನು ಪ್ರತಿ ಭಾರತೀಯನೂ ಮನಗಾಣಬೇಕು.
ಉಗ್ರರನ್ನು ಬಿಟ್ಟು ಉಪಟಳ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಸರ್ಜಿಕಲ್ ಸ್ಟ್ರೈಕ್ ಮೂಲಕ ಮೋದಿ ಅವರು 56 ಇಂಚಿನ ಎದೆ ತೋರಿಸಿದ್ದಾರೆ. ಅಷ್ಟೇ ಅಲ್ಲ, ಕಾಳಧನಿಕರಿಗೆ ನೋಟು ನಿಷೇಧ, ತೆರಿಗೆ ಚೋರರಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ), ಭಯೋತ್ಪಾದನೆ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ, ಚೀನಾ ವಿರುದ್ಧ, ಸುಮ್ಮನೆ ವಿರೋಧಿಸುವ ರಾಜಕಾರಣಿಗಳಿಗೆ ಮೋದಿ ಅವರು ತಮ್ಮ ಎದೆಯ ತಾಕತ್ತು ತೋರಿಸಿದ್ದಾರೆ.
ಮೋದಿ ಅವರ ಈ ತಾಕತ್ತಿನ ಫಲವಾಗಿಯೇ ಇಂದು ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಆರ್ಥಿಕವಾಗಿ ಬಲಾಢ್ಯವಾಗುತ್ತಿದೆ. ಹೀಗಿರುವಾಗ ಸುಖಾಸುಮ್ಮನೆ ಓವೈಸಿಯಂಥವರು ಟೀಕಿಸುವ ಭರದಲ್ಲಿ ಬಾಯಿಗೆ ಬಂದಹಾಗೆ ಮಾತನಾಡುತ್ತಾರೆ. ಆದರೇನು ಬಂತು, ಅದರಿಂದ ಯಾವ ಪ್ರಯೋಜನವೂ ಇಲ್ಲ. ದೇಶದ ಜನ ಮೋದಿ ಅವರ ಬೆಂಬಲಕ್ಕೆ ಇರುವಷ್ಟು ದಿನವೂ ಮೋದಿ ಅವರ 56 ಇಂಚಿನ ಎದೆಯ ಒಂದು ರೋಮವನ್ನೂ ಅಲ್ಲಾಡಿಸಲು ಆಗುವುದಿಲ್ಲ.
Leave A Reply