ಅಲ್ಪಸಂಖ್ಯಾತರ ಓಲೈಕೆಗೆ ಮುಂದಾದ ಕಾಂಗ್ರೆಸ್, ಮುಸ್ಲಿಮರ ಮೇಲಿನ ಪ್ರಕರಣ ವಾಪಸ್ ಗೆ ಚಿಂತನೆ
ಬೆಂಗಳೂರು: ಮಹದಾಯಿ ಹೋರಾಟದಲ್ಲಿ ರೈತರು ಹಾಗೂ ದಕ್ಷಿಣ ಕನ್ನಡ ಸೇರಿ ಹಲವೆಡೆ ನಡೆದ ಕೋಮುಗಲಭೆಯಲ್ಲಿ ಹಿಂದೂಗಳ ಮೇಲೆ ಕೇಸ್ ದಾಖಲಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಈಗ ಚುನಾವಣೆ ಬರುತ್ತಲೇ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದೆ.
ಹೌದು, ರೈತರು ಹಾಗೂ ಹಿಂದೂಗಳ ವಿರುದ್ಧ ಹಲವು ಪ್ರಕರಣ ದಾಖಲಾಗಿದ್ದರೂ, ಕೇವಲ ಮುಸ್ಲಿಮರ ವಿರುದ್ಧ ದಾಖಲಿಸಿದ್ದು ಪ್ರಕರಣ ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಮತಕ್ಕಾಗಿ ಮುಸ್ಲಿಮರ ಓಲೈಕೆಗೆ ಪ್ರಯತ್ನಿಸುತ್ತಿದೆ.
ಹಲವು ಗಲಭೆ, ಗಲಾಟೆಗಳಲ್ಲಿ 2013 ರಿಂದ 2017ರವರೆಗೆ ಮುಸ್ಲಿಮರ ವಿರುದ್ಧ ದಾಖಲಾದ ಪ್ರಕರಣ ಹಿಂಪಡೆಯಲು ಸರ್ಕಾರ ತೀರ್ಮಾನಿಸಿದ್ದು, ಈ ಕುರಿತು ಅಧಿಸೂಚನೆ ಹೊರಡಿಸಿದೆ. ಅಲ್ಲದೆ, ರಾಜ್ಯದ 22 ಜಿಲ್ಲೆಗಳ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗಳ ಅಭಿಪ್ರಾಯ ಕೇಳಿದೆ.
ಸರ್ಕಾರದ ಈ ನಡೆಯನ್ನು ಸಚಿವರಾದ ಎಚ್.ಆಂಜನೇಯ ಹಾಗೂ ರಾಮಲಿಂಗಾರೆಡ್ಡಿ ಸಮರ್ಥಿಸಿಕೊಂಡಿದ್ದು, ಕಾವೇರಿ, ಮಹದಾಯಿ ಹಾಗೂ ಟಿಪ್ಪು ಜಯಂತಿ ವೇಳೆ ಮುಸ್ಲಿಮರ ವಿರುದ್ಧ ದಾಖಲಾದ ಪ್ರಕರಣ ಹಿಂಪಡೆಯಲು ನಿರ್ಧರಿಸಿದ್ದು ಸರಿಯಾಗಿಯೇ ಇದೆ ಎಂದಿದ್ದಾರೆ.
ಆದರೆ ಈ ಎಲ್ಲ ಗಲಾಟೆಗಳಲ್ಲಿ ಹಿಂದೂಗಳ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಅವುಗಳನ್ನು ಹಿಂಪಡೆಯಲು ಸರ್ಕಾರಕ್ಕೆ ಯಾವ ಅಳುಕಿದೆಯೋ? ಗೊತ್ತಿಲ್ಲ. ಒಟ್ಟಿನಲ್ಲಿ ಚುನಾವಣೆ ವೇಳೆ ಒಂದು ಸಮುದಾಯದ ಮತ ಸೆಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೀಗೆ ಮಾಡಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.
Leave A Reply