ಜೈಷ್ ಎ ಮಹಮ್ಮದ್ ಉಗ್ರ ಸಂಘಟನೆಗೆ ಮೋದಿಯೇ ಮೊದಲ ಟಾರ್ಗೆಟ್
ಇಸ್ಲಾಮಾಬಾದ್: ವಿಶ್ವದೆಲ್ಲೆಡೆ ಪ್ರಧಾನಿ ನರೇಂದ್ರ ಮೋದಿ ಪ್ರಭಾವ ಬೀರಿ, ಭಯೋತ್ಪಾದನೆ ವಿರುದ್ಧ ರಣಘೋಷಣೆ ಮೊಳಗಿಸಿದ್ದು, ಭಯೋತ್ಪಾದಕ ಸಂಘಟನೆಗಳ ನೀರಿಳಿಸಿದೆ. ಅದಕ್ಕಾಗಿ ಇದೀಗ ನಮ್ಮ ಮೊದಲ ಶತ್ರು, ವಿರೋಧಿ ಪ್ರಧಾನಿ ನರೇಂದ್ರ ಮೋದಿ ಎಂದು ಪಾಕಿಸ್ತನದ ಮುಸ್ಲಿಂ ಮೂಲಭೂತವಾದಿ, ಭಯೋತ್ಪಾದಕ ಸಂಘಟನೆ ಜೈಷ್ ಎ ಮಹಮ್ಮದ್ ನ ಮುಖಂಡ ಮೌಲಾನ ತಲ್ಹಾ ಸೌಫ್ ಬಹಿರಂಗ ಸಮಾವೇಶದಲ್ಲಿ ಬೆದರಿಕೆ ಒಡ್ಡಿದ್ದಾನೆ.
ಇತ್ತೀಚೆಗೆ ಸಿಂದ್ ಪ್ರಾಂತ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೈಷ್ ಎ ಮಹಮ್ಮದ್ ಸ್ಥಾಪಕ ಉಗ್ರ ಮೌಲಾನ್ ಮಸೂದ್ ಅಜರ್ ನ ಸಹೋದರ ಈ ಘೋಷಣೆ ಮಾಡಿದ್ದಾನೆ. ಭಾರತ ಜೈಷ್ ಎ ಮಹಮ್ಮದ್ ಸಂಘಟನೆಯ ಮೊದಲ ವಿರೋಧಿ, ಅದರ ಪ್ರಧಾನಿಯೇ ನಮ್ಮ ಟಾರ್ಗೆಟ್ ಎಂದು ನಾಲಿಗೆ ಹರಿಬಿಟ್ಟಿದ್ದಾನೆ.
ಮುಸ್ಲಿಂ ಮಹತ್ತರವಾದ ಗುರಿಯೊಂದನ್ನು ಮುಟ್ಟಲು ಜಿಹಾದ್ ನ್ನು ಬೆಂಬಲಿಸಬೇಕು, ಪ್ರೋತ್ಸಾಹಿಸಬೇಕು. ಇಲ್ಲದಿದ್ದರೇ ತೀವ್ರ ಸಮಸ್ಯೆ ಎದುರಾಗಲಿದೆ. ಭಾರತ ಮಿನಿ ಸೂಪರ್ ಪವರ್ ಇದ್ದಂತೆ. ಇದು ಪಾಕಿಸ್ತಾನದ ವಿರುದ್ಧ 60 ವರ್ಷಗಳಿಂದ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ನಾವು ಶೀಘ್ರದಲ್ಲಿ ಕಾಶ್ಮೀರ ಕಣಿವೆಯಲ್ಲಿ ಜಯ ಸಾಧಿಸಲಿದ್ದೇವೆ ಎಂಬ ದರ್ಪದ ಮಾತುಗಳನ್ನು ಆಡಿದ್ದಾನೆ.
ನಮ್ಮ ತಾಯಿ ಮತ್ತು ಸಹೋದರಿಯರು ನಮ್ಮಗೆ ಆಹ್ವಾನಿಸುತ್ತಿದ್ದಾರೆ. ನಮ್ಮನ್ನು ಈ ಬಂಧನದಿಂದ ಮುಕ್ತಿ ನೀಡಿ ಎಂದು. ನಮ್ಮ ಸಂಘಟನೆ ಆ ಕೆಲಸವನ್ನು ಮಾಡಲು ಶಕ್ತವಾಗಿದ್ದು, ಗಡಿ ದಾಟಿ ಒಳನುಗ್ಗುವಲ್ಲಿ ಯಶಸ್ವಿಯಾಗಿದ್ದೇವೆ. ಬಾಬ್ರಿ ಮಸೀದಿ ಸ್ಥಳದಲ್ಲಿ ಭಾರತದ ಸರ್ಕಾರ ರಾಮ ಮಂದಿರ ಕಟ್ಟಲು ಪ್ರಯತ್ನಿಸುತ್ತಿದೆ. ಅದಕ್ಕೆ ನಾವು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾನೆ.
ಮೌಲಾನ್ ತೌಸಿಫ್ ನಂತ ಉಗ್ರರು ಈ ರೀತಿ ಬಹಿರಂಗವಾಗಿ ಮಾತನಾಡಿದರೂ ಪಾಕಿಸ್ತಾನ ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳುವ ಮೂಲಕ ಭಯೋತ್ಪಾದನೆ ಪರೋಕ್ಷವಾಗಿ ಪ್ರೇರಣೆ ನೀಡುತ್ತಿದೆ.
Leave A Reply