ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿರುವ ಆ ರಾಷ್ಟ್ರ ಯಾವುದು ಗೊತ್ತೇ?
ದೆಹಲಿ: ವಿಶ್ವದಲ್ಲೇ ಭಾರತದ ಚಹರೆಯನ್ನು ಬದಲಾಯಿಸಿ, ಭಾರತವೊಂದು ಬಲಿಷ್ಠ ರಾಷ್ಟ್ರ, ಭಾರತ ವಿಶ್ವಕ್ಕೆ ಸೆಡ್ಡು ಹೊಡೆಯಬಲ್ಲ ರಾಷ್ಟ್ರ ಎಂಬ ಸಂದೇಶವನ್ನು ಸಾರಿದವರು ಪ್ರಧಾನಿ ನರೇಂದ್ರ ಮೋದಿ. ಇದೀಗ ಮೋದಿ ಭಾರತದ ಇತಿಹಾಸದಲ್ಲೇ ಪ್ರಧಾನಿಗಳ್ಯಾರು ಭೇಟಿ ನೀಡದ ದೇಶಕ್ಕೆ ಭೇಟಿ ನೀಡುವ ಮೂಲಕ ಮತ್ತೊಮ್ಮೆ ವಿಶ್ವದ ಗಮನ ಸೆಳೆಯುತ್ತಿದ್ದಾರೆ.
ಫೆ.9ರಿಂದ 13 ರವರೆಗೆ ಪ್ರಧಾನಿ ನರೇಂದ್ರ ಯುಎಇ, ಒಮೆನ್ ಮತ್ತು ಪ್ಯಾಲೆಸ್ತಿನ್ ಗೆ ಭೇಟಿ ನೀಡಲಿದ್ದಾರೆ. ಅದರಲ್ಲೂ ಪ್ಯಾಲೆಸ್ತೀನ್ ಗೆ ಮೊದಲ ಭಾರಿಗೆ ಭಾರತದ ಪ್ರಧಾನಿಯೊಬ್ಬರು ಪ್ರಥಮ ಭೇಟಿ ನೀಡುತ್ತಿದ್ದಾರೆ. ಇತ್ತೀಚೆಗೆ ಪ್ಯಾಲೆಸ್ತೀನ್ ನ ಪ್ರಬಲ ವಿರೋಧಿ ರಾಷ್ಟ್ರ ಇಸ್ರೇಲ್ ಪ್ರಧಾನಿ ನೇತ್ಯಾನುಹ ಭಾರತಕ್ಕೆ ಭೇಟಿ ನೀಡಿ, ಬಾಂದವ್ಯಕ್ಕೆ ಹೊಸ ಪರಿಭಾಷೆ ನೀಡಿದ್ದರು. ಆದರೆ ಮೋದಿ ಇಸ್ರೇಲ್ ವೈರಿ ರಾಷ್ಟ್ರ ಪ್ಯಾಲೆಸ್ತೀನ್ ಗೆ ಭೇಟಿ ನೀಡುತ್ತಿರುವುದು ಕುತೂಹಲ ಮೂಡಿಸಿದೆ.
ದುಬೈ ನಲ್ಲಿ ನಡೆಯಲಿರುವ 6ನೇ ವಿಶ್ವ ಸರ್ಕಾರಗಳು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೇ ಯುಎಇ ಮತ್ತು ಒಮೆನ್ ನಲ್ಲಿರುವ ಆನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ವಿಶ್ವದ ಗಮನ ಸೆಳೆಯಲಿದೆ ಪ್ಯಾಲೆಸ್ತೀನ್ ಭೇಟಿ
ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಪ್ಯಾಲೆಸ್ತೀನ್ ನ ವಿರೋಧಿ ರಾಷ್ಟ್ರ ಇಸ್ರೇಲ್ ಪ್ರಧಾನಿ ನೆತ್ಯಾನುಹ್ ಅವರು ಭೇಟಿ ನೀಡಿದ ಕೆಲವೇ ದಿನಗಳಲ್ಲಿ ಮೋದಿ ಪ್ಯಾಲೆಸ್ತೀನ್ ಭೇಟಿ ನೀಡುತ್ತಿರುವುದು ವಿಶ್ವದ ಗಮನ ಸೆಳೆದಿದ್ದು, ತೀವ್ರ ಕುತೂಹಲ ಮೂಡಿಸಿದೆ. 1980 ರಲ್ಲಿ ಪ್ಯಾಲೆಸ್ತೀನ್ ಒಂದು ಪ್ರತ್ಯೇಕ ರಾಷ್ಟ್ರ ಎಂಬ ವಾದಕ್ಕೆ ಭಾರತವೇ ಮೊದಲ ಭಾರಿಗೆ ಬೆಂಬಲ ವ್ಯಕ್ತಪಡಿಸಿತ್ತು. ಇತ್ತೀಚೆಗೆ ಜೇರುಸೆಲಂ ಇಸ್ರೇಲ್ ನ ರಾಜಧಾನಿ ಎಂಬ ಅಮೆರಿಕದ ವಾದಕ್ಕೆ ವಿರೋಧಿಸಿ, ಭಾರತ ಮತ ನೀಡಿತ್ತು. ಈ ಎಲ್ಲ ಘಟನೆಗಳು ಅತ್ತ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಎರಡರ ವಿಶ್ವಾಸವನ್ನು ಗಳಿಸುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ.
Leave A Reply