ಕರ್ನಾಟಕದಲ್ಲಿ ಬೇರೆ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿ ಪರಿವರ್ತನಾ ಯಾತ್ರೆಯೇ ಮುಂದು!
ಬೆಂಗಳೂರು: ಚುನಾವಣೆ ಹಾಗೂ ಪ್ರಜಾಪ್ರಭುತ್ವ ದೃಷ್ಟಿಯಿಂದ ಯಾವುದೇ ಪಕ್ಷಗಳು ಚುನಾವಣೆ ಪೂರ್ವವಾಗಿ ಜನರ ಎದುರು ಹೋಗುವುದು ಒಳ್ಳೆಯದು. ಸರ್ಕಾರದ ವೈಫಲ್ಯ, ಸರ್ಕಾರದ ಸಾಧನೆ, ಪ್ರತಿಪಕ್ಷಗಳ ಹೋರಾಟ, ಜನರೊಂದಿಗೆ ಒಡನಾಟ, ಟೀಕೆ, ಸಮಾಲೋಚನೆಗಳೆಲ್ಲವೂ ಸರ್ಕಾರ ಹಾಗೂ ಪ್ರತಿಪಕ್ಷಗಳ ಬಂಡವಾಳ ಬಯಲಾಗಲು ಅನುಕೂಲ.
ಇದೇ ದಿಸೆಯಲ್ಲಿಯೇ ಕರ್ನಾಟಕದಲ್ಲಿ ಚುನಾವಣೆ ಪೂರ್ವವಾಗಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಹಲವು “ಯಾತ್ರೆ”ಗಳನ್ನು ಕೈಗೊಂಡಿದ್ದು, ಅವುಗಳಲ್ಲಿ ಬೇರೆ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿಯೇ ಮುಂದಿದೆ.
ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಮೊದಲು ಪರಿವರ್ತನಾ ಯಾತ್ರೆ ಕೈಗೊಂಡು ಅಪಾರ ಜನಬೆಂಬಲದೊಂದಿಗೆ ಯಶಸ್ವಿಯಾಗಿ ಮುಗಿಸಿದೆ. ಅಲ್ಲದೆ ರಾಜ್ಯದ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಈ ಯಾತ್ರೆ ಸಂಚರಿಸಿದೆ ಎಂದು ಎಂಬ ಖ್ಯಾತಿಗೂ ಭಾಜನವಾಗಿದೆ.
ತುಮಕೂರಿನಿಂದ ಸಾಗಿದ ಬಿಜೆಪಿ ಪರಿವರ್ತನಾ ಯಾತ್ರೆ ಈಗ ಫೆಬ್ರವರಿ 4ರಂದು ಬೆಂಗಳೂರಿನಲ್ಲಿ ಸಮಾರೋಪಗೊಳ್ಳಲಿದ್ದು, ಈ ಅವಧಿಯಲ್ಲಿ ಯಡಿಯೂರಪ್ಪ ಅವರು 85 ದಿನಗಳವರೆಗೆ ಸಂಚರಿಸಿ, 185 ರ್ಯಾಲಿ ಏರ್ಪಡಿಸಿದ್ದಾರೆ. ಅಲ್ಲದೆ ರ್ಯಾಲಿ ಇದುವರೆಗೆ 10,500 ಕಿಲೋಮೀಟರ್ ವರೆಗೆ ಸಾಗಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ದೂರ ಸಾಗಿದ ಹಾಗೂ ಹೆಚ್ಚು ರ್ಯಾಲಿ ನಡೆಸಿದ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ.
ಕಾಂಗ್ರೆಸ್ ಸಹ ನವ ಕರ್ನಾಟಕ ನಿರ್ಮಾಣ ಯಾತ್ರೆ ಕೈಗೊಂಡಿದ್ದು ರಾಜ್ಯದಲ್ಲಿ ಕೇವಲ 30 ದಿನ ಸಂಚರಿಸಿ, 120 ರ್ಯಾಲಿಗಳನ್ನು ಮಾತ್ರ ಏರ್ಪಡಿಸಿ, ಯಾತ್ರೆಗೆ ಅಂತ್ಯ ಹಾಡಿದೆ. ಅತ್ತ ಜೆಡಿಎಸ್ ಸಹ ನವೆಂಬರ್ ನಿಂದ ರ್ಯಾಲಿಗಳನ್ನು ಏರ್ಪಡಿಸುತ್ತಿದೆಯಾದರೂ ಬಿಜೆಪಿಯಷ್ಟು ರ್ಯಾಲಿ ಆಯೋಜಿಸಿಲ್ಲ ಎಂದು ತಿಳಿದುಬಂದಿದೆ.
Leave A Reply