ಕರ್ನಾಟಕದ ಹೆಬ್ಬಾಗಿಲು ಮಂಗಳೂರಿನಿಂದಲೇ ದೇಶದ ಭದ್ರತೆಗೆ ಆತಂಕ!
ಮುಂಬರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೊರ ರಾಜ್ಯದವರಿಗೆ ಮತದಾನದ ಹಕ್ಕು ಕಲ್ಪಿಸಿ ಗೆಲ್ಲಲು ಯತ್ನಿಸಿ ಸಿಕ್ಕಿಬಿದ್ದ ಮಂಗಳೂರಿನ ಸ್ಥಳೀಯ ಕಾಂಗ್ರೆಸ್ ಶಾಸಕರು ಇದೀಗ ವಿದೇಶೀಯರಿಗೆ ಆಧಾರ್ ಕಾರ್ಡ್ ಮಾಡಿಸಿ ಕೊಡುವ ಮೂಲಕ ಅವರನ್ನೂ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಯತ್ನದಲ್ಲಿ ಮತ್ತೆ ಸಿಕ್ಕಿ ಬಿದ್ದಿದ್ದಾರೆ.
ಭಾರತೀಯ ಪ್ರಜೆಗಳಿಗೆ ತಮ್ಮ ಅಸ್ಮಿತೆಯ ಪ್ರಶ್ನೆಯಾಗಿರುವ ಆಧಾರ್ ಕಾರ್ಡ್ ಪಡೆಯಲು ಸೂಕ್ತ ದಾಖಲೆಗಳನ್ನು ಹೊಂದಿಸಿಕೊಂಡು, ಎಷ್ಟೋ ದಿನಗಳ ಮೊದಲೇ ತಮ್ಮ ಸಮಯಕ್ಕಾಗಿ ಕಾದು, ಆ ದಿನ ಬಂದ ಮೇಲೆ ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತು ಕೊನೇಗೆ ಆಧಾರ್ ಕಾರ್ಡ್ ಪಡೆದುಕೊಳ್ಳುತ್ತಾರೆ.
ಆದರೆ ಮಂಗಳೂರಿನ ಕಾಂಗ್ರೆಸ್ ನಾಯಕರ ಕಪಾಕಟಾಕ್ಷದಿಂದ ಹಾಗೂ ದೇಶದ್ರೋಹಿ ಕೆಲಸದಿಂದ ವಿದೇಶೀಯರಿಗೆ ಯಾವ ತಾಪತ್ರಯವೂ ಇಲ್ಲದೇ, ಅವರಿದ್ದಲ್ಲಿಯೇ ಕಾಲ ಬುಡಕ್ಕೆ ಹೋಗಿ ಆಧಾರ್ ಕಾರ್ಡ್ ಬಿದ್ದಿದೆ.
ಮಲೇಷ್ಯಾದಿಂದ ಮಂಗಳೂರಿಗೆ ವೈದ್ಯ ಶಿಕ್ಷಣಕ್ಕಾಗಿ ಸ್ಟಡಿ ವೀಸಾದಲ್ಲಿ ಬಂದಿರುವ “ಹೋಹ್ ಜಿಯಾನ್ ಮೆಗ್” (25) ಆಧಾರ್ ಕಾರ್ಡ್ ಪಡೆದಿರುವ ವ್ಯಕ್ತಿ. ಈಗ ಅವನು ಭಾರತೀಯ ಪ್ರಜೆ!
ಅಷ್ಟಕ್ಕೂ ಇವನಂತೆಯೇ ಇನ್ನೂ ಅದೆಷ್ಟು ವಿದೇಶೀಯರಿಗೆ ಆಧಾರ್ ಕಾರ್ಡ್ ಆಗಿರಬಹುದು? ಭಯೋತ್ಪಾದಕರು ಇದನ್ನು ಉಪಯೋಗಿಸಿಕೊಂಡು ತಮ್ಮ ಕಾರ್ಯ ಚಟುವಟಿಕೆ ವಿಸ್ತರಿಸಿದರೆ ಯಾರು ಹೊಣೆ?
ಇದು ಅತ್ಯಂತ ಗಂಭೀರ ಪ್ರಕರಣವಾಗಿರುವುದರಿಂದ ಜಿಲ್ಲಾಡಳಿತ, ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತು ಇದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ದೇಶದ್ರೋಹ ಕೆಲಸ ಮಾಡಿದ ಆರೋಪಿಗಳನ್ನು ಸೆರೆ ಹಿಡಿಯಲು ಮುಂದಾಗಬೇಕಿದೆ. ಇಲ್ಲದಿದ್ದಲ್ಲಿ ಇಂಥಾ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಭವ್ಯ ಭಾರತವನ್ನು ವಿದೇಶೀಯರ ಕೈಗೆ ಕೊಟ್ಟು ಬಿಡಲೂ ಹಿಂಜರಿಯಲಾರರು..
Leave A Reply