ಗೋವುಗಳ ಪ್ರಾಮುಖ್ಯತೆ ಕುರಿತು ಬಿಜೆಪಿಯಿಂದ 24 ಗಂಟೆ ಯಜ್ಞ, ಜಾಗೃತಿ ಕಾರ್ಯಕ್ರಮ ನಾಳೆ
ಬೆಂಗಳೂರು: ದೇಶದಲ್ಲ ಗೋವುಗಳ ರಕ್ಷಣೆಗಾಗಿ ಪಣತೊಟ್ಟಿರುವ ಬಿಜೆಪಿ ಫೆಬ್ರವರಿ 2ರಂದು ಬೆಂಗಳೂರಿನಲ್ಲಿ 24 ಗಂಟೆಗಳ ಯಜ್ಞ ಹಾಗೂ ಗೋ ರಕ್ಷಣೆ ಕುರಿತು ಮಾಹಿತಿ ನೀಡುವ ಜಾಗೃತಿ ಕಾರ್ಯಕ್ರಮ ಆಯೋಜಿಸಿದೆ.
ಗೋ ರಕ್ಷಾ ಅಭಿಯಾನ ಯಜ್ಞ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಗೋವುಗಳ ಬಹುಪಯೋಗಿ ಗುಣಗಳು, ಪಾವಿತ್ರ್ಯತೆ ಹಾಗೂ ಪ್ರಾಮುಖ್ಯತೆ ಕುರಿತು ಮಾಹಿತಿ ನೀಡಲಾಗುತ್ತದೆ. ಅಲ್ಲದೆ ಗೋವುಗಳ ಸಂತಿ ಉಳಿಸುವ ಮತ್ತು ಗೋವುಗಳು ಹೇಗೆ ಗ್ರಾಮೀಣ ಪ್ರದೇಶದ ಆರ್ಥಿಕ ಸ್ಥಿತಿಯನ್ನು ಗಟ್ಟಿಗೊಳಿಸಿವೆ ಎಂಬ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ಬಿಜೆಪಿಯ ಗೋ ರಕ್ಷಣಾ ವಿಭಾಗದ ಮುಖಂಡ ಸಿದ್ಧಾರ್ಥ ಗೋಯೆಂಕಾ ಮಾಹಿತಿ ನೀಡಿದ್ದಾರೆ.
ಜತೆಗೆ ಸೀತೆಯ ಜನ್ಮಸ್ಥಾನವಾದ ಜನಕಪುರಿಯಿಂದ ತಂಡವೊಂದು ಆಗಮಿಸಲಿದ್ದು, ಶ್ರೀರಾಮನ ಮದುವೆ ಕುರಿತು ವಿಶೇಷ ನೃತ್ಯ ಮಾಡುವ ಮೂಲಕ ಜನರಿಗೆ ರಂಜನೆ ನೀಡಲಿದ್ದಾರೆ. ಅಖಂಡ ರಾಮಾಯಣದ ಕುರಿತು ಸಹ ಮಾಹಿತಿ ನೀಡಲಾಗುತ್ತದೆ ಎಂದು ವಿವರಿಸಿದ್ದಾರೆ.
ಫೆಬ್ರವರಿ 3ರಂದು ಕಾರ್ಯಕ್ರಮ ಮುಕ್ತಾಯವಾಗಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಭಾವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಗೋವುಗಳ ಅಕ್ರಮ ಸಾಗಣೆ ಹಾಗೂ ಮಾರಾಟ ನಿಷೇಧಿಸಿ ಕೇಂದ್ರ ಸರ್ಕಾರ 2017ರ ಮೇ 25ರಂದು ಅಧಿಸೂಚನೆ ಸಹ ಹೊರಡಿಸಿದೆ.
Leave A Reply