ಈ ದಲಿತ ವ್ಯಕ್ತಿಯ ಶವ ಮಸೀದಿ ಬಳಿ ಸಿಕ್ಕಿತು, ಆದರೂ ದಲಿತ ನಾಯಕರ ಬಾಯಿಗೆ ಬೀಗ ಬಿತ್ತು, ಏಕೆ?
ಬೀದರ್ ನ ದಲಿತ ಬಾಲಕಿಯ ಅತ್ಯಾಚಾರ, ಕೊಲೆಯಾದರೂ ಯಾವೊಬ್ಬ ದಲಿತ ಮುಖಂಡರು, ಜಿಗ್ನೇಶ್ ಮೇವಾನಿ ಸೊಲ್ಲೆತ್ತಲಿಲ್ಲ. ಏಕೆಂದರೆ ಕೊಂದವ ಮುಸ್ಲಿಂ? ಈಗ ಇಂಥಾದ್ದೇ ಒಂದು ಪ್ರಕರಣ ಉತ್ತರ ಪ್ರದೇಶದಲ್ಲಿ ಸುದ್ದಿಯಾಗಿದ್ದು, ದಲಿತ ವ್ಯಕ್ತಿಯ ಶವ ಮಸೀದಿ ಬಳಿ ಸಿಕ್ಕರೂ, ದಲಿತರ ಪರರು, ಜೀವಪರರು ನ್ಯಾಯ ಕೇಳುತ್ತಿಲ್ಲ.
ಹೌದು, ಉತ್ತರ ಪ್ರದೇಶದ ಗಧಿ ಖಂಡಾರಿ ಎಂಬ ಪ್ರದೇಶದಲ್ಲಿ ಮುಸ್ಲಿಮರು ಹಾಗೂ ದಲಿತರು ಜಾಸ್ತಿಯಿದ್ದು, ಇತ್ತೀಚೆಗೆ ಮುಸ್ಲಿಮರು ದಲಿತರ ವಿರುದ್ಧ ಹಲ್ಲು ಮಸಿಯುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದ್ದವು. ಅದಕ್ಕೆ ಸಾಕ್ಷಿಯಾಗಿ ಅಮಿತ್ ಕುಮಾರ್ ಗೌತಮ್ (27) ಎಂಬ ದಲಿತ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದ್ದು, ಮಸೀದಿ ಬಳಿ ಶವಪತ್ತೆಯಾಗಿದೆ.
ಮುಸ್ಲಿಮರೇ ಈ ಕೃತ್ಯ ಎಸಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಆಲಂ, ಸದ್ದಾಂ, ಖಾಲಿದ್, ಸುಕೇಲ್ ಹಾಗೂ ಆಶು ಎಂಬ ಐವರು ಮುಸ್ಲಿಂ ಯುವಕರ ವಿರುದ್ಧ ದೂರು ದಾಖಲಿಸಿದ್ದಾರೆ. ಇಡೀ ಪ್ರದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ರಾತ್ರಿ ಮನೆಯಿಂದ ಹೊರಗಡೆ ಹೋಗಿದ್ದ ಮಗ ತಡರಾತ್ರಿಯಾದರೂ ಬಾರದ ಕಾರಣ ಕಂಗಾಲಾದ ಕುಟುಂಬಸ್ಥರು ಹುಡುಕಾಡಿದರೂ ಅಮಿತ್ ಸಿಕ್ಕಿರಲಿಲ್ಲ. ಆದರೆ ಬೆಳಗ್ಗೆ 7 ಗಂಟೆ ಸುಮಾರಿಗೆ ಜನ ಸುತ್ತಾಡುತ್ತಲೇ ಮಸೀದಿ ಬಳಿ ಅಮಿತ್ ಶವವಾಗಿ ಪತ್ತೆಯಾಗಿದ್ದಾರೆ. ಬಳಿಕ ಮುಸ್ಲಿಂ ಯುವಕರ ಮೇಲೆ ಅನುಮಾನಗೊಂಡಿರುವ ಪೋಷಕರು ದೂರು ನೀಡಿದ್ದು, ಪೊಲೀಸರು ಸದ್ದಾಂ ಹಾಗೂ ಆಲಂ ಎಂಬ ಇಬ್ಬರನ್ನು ಬಂಧಿಸಿದ್ದಾರೆ.
ಒಂದೆಡೆ ಕರ್ನಾಟಕದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿದ್ದರೂ, ಇನ್ನೊಂದೆಡೆ ದಲಿತರ ಹತ್ಯೆಯಾಗುತ್ತಿದ್ದರೂ ಬಾಯಿ ಬಿಡದ ದಲಿತ ಮುಖಂಡರು, ಜಾತ್ಯತೀತರು, ಜೀವಪರರು ಎಲ್ಲಿ ಅಡಗಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಯಾರೂ ಸೊಲ್ಲೆತ್ತುತ್ತಿಲ್ಲ. ಎಂಥ ಇಬ್ಬಂದಿತನ ಅಲ್ಲವಾ?
Leave A Reply