ರಾಮಮಂದಿರ ವಿರೋಧಿಸುವ ಮುಸ್ಲಿಮರು ಪಾಕಿಸ್ತಾನ, ಐಸಿಸ್ ಸೇರಲಿ ಎಂದವನೂ ಮುಸ್ಲಿಂ
ದೆಹಲಿ: ಹಲವು ದಶಕಗಳ ಕಾಲ ಹಿಂದೂಗಳ ಅಸ್ಮಿತೆಯ ಸಂಕೇತವಾಗಿರುವ ರಾಮಮಂದಿರ ನಿರ್ಮಾಣದ ಕುರಿತು ಇದೀಗ ಮುಸ್ಲಿಮರು ಕೂಡ ಒಲವು ತೋರಿಸುತ್ತಿದ್ದಾರೆ. ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಬೇಕು. ರಾಮಂದಿರ ವಿರೋಧಿಸುವವರು ಪಾಕಿಸ್ತಾನ ಅಥವಾ ಬಾಂಗ್ಲಾಕ್ಕೆ ಹೋಗಬೇಕು ಎಂದು ಎಂದು ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಾಸೀಮ್ ರಿಜ್ವಿ ಹೇಳಿದ್ದಾರೆ.
ಅಯೋಧ್ಯೆಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ರಿಜ್ವಿ, ರಾಮಜನ್ಮ ಭೂಮಿಯ ಮುಖ್ಯ ಅರ್ಚಕ್ ಆಚಾರ್ಯ ಸತ್ಯೇಂದ್ರ ದಾಸ್ ಅವರನ್ನು ಭೇಟಿಯಾಗಿ ಮಾತನಾಡಿದ ಅವರು. ರಾಮಂದಿರ ವಿರೋಧಿಸುವುವರು ದೇಶ ಬಿಟ್ಟು ಹೋಗಲಿ ಅಥವಾ ಐಸಿಸ್ ನಂತಹ ಭಯೋತ್ಪಾದಕ ಸಂಘಟನೆಗಳನ್ನು ಸೇರಲಿ ಎಂದು ಸಲಹೆ ನೀಡಿದ್ದಾರೆ.
‘ರಾಮ ಮಂದಿರ ನಿರ್ಮಾಣಕ್ಕೆ ಜಾತ್ಯತೀತ ಮನಸ್ಥಿತಿಯುಳ್ಳವರು ವಿರೋಧ ವ್ಯಕ್ತಪಡಿಸುವುದಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ವಿರೋಧಿಸುವವರು ಹಾಗೂ ಅಲ್ಲಿ ಮಸೀದಿ ನಿರ್ಮಿಸಬೇಕು ಎನ್ನುವ ಮುಸ್ಲಿಮರು ಪಾಕಿಸ್ತಾನ ಅಥವಾ ಬಾಂಗ್ಲಾದೇಶಕ್ಕೆ ಹೋಗಲಿ. ಮುಸ್ಲಿಂ ಮೂಲಭೂತವಾದಿಗಳಿಗೆ ಭಾರತದಲ್ಲಿ ಸ್ಥಳವಿಲ್ಲ ಎಂದು ರಿಜ್ವಿ ವಿವರಿಸಿದ್ದಾರೆ.
ಅಯೋಧ್ಯೆ ಹಿಂದುಗಳ ಪವಿತ್ರ ಭೂಮಿ. ಆದ್ದರಿಂದ ಹಿಂದೂಗಳ ಭೂಮಿಯಲ್ಲಿ ಮಸೀದಿ ನಿರ್ಮಿಸಲು ಯಾವುದೇ ಅವಕಾಶವಿಲ್ಲ. ಮಸೀದಿ ನಿರ್ಮಾಣ ಭಯಸುವವರು ಐಸಿಸ್ ನಂತರ ಭಯೋತ್ಪಾದಕ ಸಂಘಟನೆ ಸೇರಲಿ ಎಂದು ಹೇಳಿದ್ದಾರೆ.
Leave A Reply