ಇನ್ನೊಬ್ಬ ಮಗನಿದ್ದರೂ ಸೈನ್ಯಕ್ಕೆ ಸೇರಿಸುತ್ತಿದ್ದೇ ಎಂದ ಹುತಾತ್ಮ ಯೋಧನ ತಾಯಿ
ಗುರುಗ್ರಾಮ್: ನನಗೆ ಇನ್ನೊಬ್ಬ ಮಗನಿದ್ದರೂ ಸೈನ್ಯಕ್ಕೆ ಸೇರಿಸುತ್ತಿದೆ ಎಂದು ಹೇಳುವ ಮೂಲಕ ಜಮ್ಮು ಕಾಶ್ಮೀರದ ಪಾಕಿಸ್ತಾನದ ಅಪ್ರಚೋಧಿತ ಸೆಲ್ ದಾಳಿಗೆ ಹುತಾತ್ಮರಾದ ಕ್ಯಾಪ್ಟನ್ ಕಪಿಲ್ ಖಂಡು ತಾಯಿ ಸೈನಿಕರ ಕುಟುಂಬದ ದೇಶಭಕ್ತಿಯನ್ನು ಅನಾವರಣಗೊಳಿಸಿದ್ದಾರೆ.
ತನ್ನ ಮಗನನ್ನು ಕಳೆದುಕೊಂಡರೂ ದೃತಿಗೆಡದ 52 ವರ್ಷದ ಸುನಿತಾ ಖಂಡು ಅವರು ‘ನನ್ನ ಮಗ ಯಾವಾಗಲೂ ದೇಶಕ್ಕಾಗಿ ಜೀವನ ಮುಡಿಪಾಗಿಟ್ಟಿದ್ದ. ಸೈನ್ಯಕ್ಕೆ ಸೇರಿದ್ದರಿಂದ ಖುಷಿಯಾಗಿದ್ದ. ಕಪೀಲ್ ನಮ್ಮ ಜೀವನ ಸಾರ್ಥಕವಾಗಬೇಕು ಎನ್ನುತ್ತಿದ್ದ. ಧೈರ್ಯವಂತನಾಗಿದ್ದ. ದೇಶದ ರಕ್ಷಣೆಗಾಗಿ ಹೋರಾಡಿದವನ ತಾಯಿ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ.
ಕಪಿಲ್ ಜೀವನ ಸಾಹಸದಿಂದ ಕೂಡಿರಬೇಕು ಎಂದು ಬಯಸುತ್ತಿದ್ದ. ದೇಶಭಕ್ತಿಯನ್ನು ಕವನ ರಚಿಸುವ ಮೂಲಕ ವ್ಯಕ್ತಪಡಿಸುತ್ತಿದ್ದ. ನಿಸರ್ಗವನ್ನು ಪ್ರೀತಿಸುತ್ತಿದ್ದ. ದೇಶವೇ ನನ್ನ ಮೊದಲ ಆದ್ಯತೆ ಎಂದು ಹೇಳುತ್ತಿದ್ದ. ಅಂತಹ ಮಗನನ್ನು ಕಳೆದುಕೊಂಡಿದ್ದು ದುಖಃವೆನ್ನಿಸುತ್ತಿದೆ.
ಪಾಕ್ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಆಗಲಿ
ನಿತ್ಯ ದೇಶಕ್ಕೆ ಕಂಟಕವಾಗಿರುವ ಪಾಕಿಸ್ತಾನದ ವಿರುದ್ಧ ಸರ್ಕಾರ ಸೇಡು ತೀರಿಸಿಕೊಳ್ಳಬೇಕು. ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಂತಹ ಕಾರ್ಯಾಚರಣೆಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರತೀಕಾರ ತೀರಿಸಿಕೊಳ್ಳಬೇಕು. ಈ ಮೂಲಕ ಹುತಾತ್ಮ ಸೈನಿಕರ ಆತ್ಮಕ್ಕೆ ಗೌರವ ಸಲ್ಲಿಸಬೇಕು. ನನ್ನ ಮಗ ಇನ್ನು 15-20 ವರ್ಷವಿದ್ದರೇ ದೇಶಕ್ಕೆ ಅವನು ಹೆಚ್ಚಿನ ಕೊಡುಗೆ ನೀಡುತ್ತಿದ್ದ ಎಂದು ಹೇಳುವ ಮೂಲಕ ಸುನಿತಾ ಖಂಡು ಮಾದರಿಯಾಗಿದ್ದಾರೆ. ಹರ್ಯಾಣದ ಗುರುಗ್ರಾಮ್ ನಿಂದ ಪಟೌಡಿ ಸಮೀಪದ ರನ್ಸಿಕಾ ಗ್ರಾಮದಲ್ಲಿ ಕ್ಯಾಪ್ಟನ್ ಕಪಿಲ್ ಖಂಡು ಕುಟುಂಬ ಜೀವನ ಸಾಗಿಸುತ್ತಿದೆ.
ಫೆ.10ಕ್ಕೆ ಜನ್ಮದಿನ
ಕಪಿಲ್ ಖಂಡು ಫೆ.10ರಂದು 23ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುವ ಸಂಭ್ರಮದಲ್ಲಿದ್ದರು. ಇತ್ತೀಚೆಗೆ ಮನಗೆ ಫೋನ್ ಮಾಡಿದಾಗ ‘ಶೀಘ್ರದಲ್ಲಿ ಮನೆಗೆ ಬರುವೆ. ಇಲ್ಲಿ ಎಲ್ಲವೂ ಚೆನ್ನಾಗಿದೆ. ನನ್ನ ಜನ್ಮದಿನದಂದು ಭೇಟಿ ನೀಡಿ ತಾಯಿಗೆ ಅಚ್ಚರಿ ಮೂಡಿಸುವೆ ಎಂದು ಹೇಳಿದ್ದರು ಎಂದು ಕಪಿಲ್ ಸಹೋದರಿ ಸೊನಿಯಾ ಹೇಳಿದ್ದಾರೆ.
Leave A Reply