ನರೇಂದ್ರ ಮೋದಿ ಅವರಿಗೇ ಪಾಠ ಮಾಡುವ ಕಾಂಗ್ರೆಸ್ಸಿನ ಭ್ರಷ್ಟಾಚಾರದ ಕತೆ ಹೇಳಲೇ?
ಆಗಿದ್ದಿಷ್ಟೇ. ಫೆ.4ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸುತ್ತಾರೆ, ಲಕ್ಷಾಂತರ ಜನರನ್ನುದ್ದೇಶಿಸಿ ಮಾತನಾಡುತ್ತಾರೆ ಎಂದಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎದೆ ಧಸಕ್ ಎಂದಿತ್ತು. ಅದಕ್ಕಾಗಿಯೇ ಕನ್ನಡಪರ ಸಂಘಟನೆಗಳ ಮುಂದೆ ಬಿಟ್ಟು ದೇಶದ ಇತಿಹಾಸದಲ್ಲೇ ಭಾನುವಾರ, ಅಂದರೆ ಮೋದಿ ಆಗಮಿಸುವ ದಿನವೇ ಕರ್ನಾಟಕ ಬಂದ್ ಗೆ ಕರೆ ನೀಡುವಂತೆ ಮಾಡಿದ್ದರು. ಕೊನೆಗೆ ಅಲ್ಲಿ ವಿಫಲವೂ ಆದರು.
ಕರ್ನಾಟಕಕ್ಕೆ ಬಂದ ಮೋದಿ ಅವರು ಲಕ್ಷಾಂತರ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಕಾಂಗ್ರೆಸ್ಸಿನ ಭ್ರಷ್ಟಾಚಾರದ ಎಳೆಎಳೆಯನ್ನು ಬಿಚ್ಚಿಟ್ಟರು. ಇದು ಶೇ.10ರಷ್ಟು (ಕಮಿಷನ್ ಹೊಡೆಯುವ) ಸರ್ಕಾರ ಎಂದು ಜರಿದರು.
ಇದರಿಂದ ಅರೆ ಏಟು ತಿಂದ ನಾಗರ ಹಾವಿನಂತಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ಮೋದಿ ಅವರಿಗೇ ಭ್ರಷ್ಟಾಚಾರದ ಪಾಠ ಹೇಳಿದ್ದಾರೆ. ಆದರೆ ದೇಶದ ಇತಿಹಾಸದಲ್ಲಿ ಭ್ರಷ್ಟಾಚಾರ ಹುಟ್ಟುಹಾಕಿದ್ದೇ ಕಾಂಗ್ರೆಸ್ ಎಂಬುದನ್ನು ಸಿದ್ದರಾಮಯ್ಯನವರು ಮರೆತುಬಿಟ್ಟರು.
ಹಾಗಾದರೆ ದೇಶದ ಇತಿಹಾಸದಲ್ಲಿ ಭ್ರಷ್ಟಾಚಾರಕ್ಕೂ, ಕಾಂಗ್ರೆಸ್ಸಿಗೂ ಇರುವ ನಂಟು ಏನು? ದೇಶದಲ್ಲಿ ಭ್ರಷ್ಟಾಚಾರಕ್ಕೆ ಮುನ್ನುಡಿ ಬರೆದವರು ಯಾರು? ಕಾಂಗ್ರೆಸ್ ಅಂತಹ ಸುಬಗ ಪಕ್ಷವೇ? ಭ್ರಷ್ಟಾಚಾರದ ಲವಲೇಷವೂ ಕಾಂಗ್ರೆಸ್ಸಿಗೆ ಗೊತ್ತಿಲ್ಲವೇ? ಹಾಗೊಂದು ವೇಳೆ ಕಾಂಗ್ರೆಸ್ಸಿಗೂ ಭ್ರಷ್ಟಾಚಾರಕ್ಕೂ ಸಂಬಂಧ ಇಲ್ಲ ಎಂದರೆ ಕರಾಳ ಇತಿಹಾಸದ ಪುಟ ತೆರೆದುಕೊಳ್ಳುತ್ತವೆ.
ಅದು ಜೀಪ್ ಹಗರಣ
ಹೌದು, ದೇಶದ ಮೊತ್ತಮೊದಲ ಹಗರಣ ಎಂದರೆ ಜೀಪ್. ಅದರ ಜನಕ ಜವಾಹರ್ ಲಾಲ್ ನೆಹರು. ನೆಹರೂ ಪ್ರಧಾನಿಯಾಗಿದ್ದಾಗಲೇ ದೇಶದ ಮೊದಲ ಹಗರಣ ಹೊರಬಂದಿದ್ದು. ಅಂದು ಗೃಹಸಚಿವರಾಗಿದ್ದ ಕೃಷ್ಣ ಮೆನನ್ ನಿಯಮ ಗಾಳಿಗೆ ತೂರಿ 1948ರಲ್ಲಿ ಬರೋಬ್ಬರಿ 80 ಲಕ್ಷ ರು. ಮೌಲ್ಯದ ಜೀಪ್ ಖರೀದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆ ಮೂಲಕ ದೇಶಕ್ಕೆ ಭ್ರಷ್ಟಾಚಾರವನ್ನು ಪರಿಚಯಿಸಿದ ಕೀರ್ತಿ ಕಾಂಗ್ರೆಸ್ಸಿಗೇ ಸಲ್ಲಬೇಕು.
ರಾಜೀವ್ ಗಾಂಧಿ ಪರಿಚಯಿಸಿದ ಬೋಫೋರ್ಸ್
ದೇಶದ ಮೊದಲ ಹಗರಣ ನೆಹರೂ ಅವಧಿಯಲ್ಲಿ ಸುದ್ದಿಯಾದರೆ, ದೇಶದ ಪ್ರಧಾನಿಯೊಬ್ಬರ ಹೆಸರೇ ಭ್ರಷ್ಟಾಚಾರದ ಜತೆ ತಳಕು ಹಾಕಿಕೊಂಡಿದ್ದು ರಾಜೀವ್ ಗಾಂಧಿ ಅವಧಿಯಲ್ಲಿ. ಸ್ವೀಡನ್ ನ ಬೋಫೋರ್ಸ್ ಕಂಪನಿ ಜತೆ ಯುದ್ಧ ಶಸ್ತ್ರಾಸ್ತ್ರಕ್ಕಾಗಿ ಮಾಡಿಕೊಂಡ ಒಪ್ಪಂದದಲ್ಲಿ ಭ್ರಷ್ಟಾಚಾರ ಎಸಗಿ, ಭಾರತದ ಬೊಕ್ಕಸಕ್ಕೆ ಅಂದಿನ ಕಾಲದಲ್ಲೇ 1.4 ಶತಕೋಟಿ ಡಾಲರ್ ನಷ್ಟವಾಗಿದೆ ಎಂದು ಅಂದಾಜಿಸಲಾಯಿತು. ರಾಜೀವ್ ಗಾಂಧಿ ಹೆಸರು ಕೇಳಿಬಂದು ಕಾಂಗ್ರೆಸ್ ತೀವ್ರ ಮುಜುಗರ ಅನುಭವಿಸಿತು. ಗಲಿ ಗಲಿ ಮೇ ಶೋರ್ ಹೈ, ರಾಜೀವ್ ಗಾಂಧಿ ಚೋರ್ ಹೈ ಎಂಬ ಮಾತು ಹುಟ್ಟಿದ್ದೇ ಆಗ.
ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದು ಯಾರು?
ಇನ್ನು ಮಾತೆತ್ತಿದ್ದರೆ ಪ್ರಜಾಪ್ರಭುತ್ವ ಎನ್ನುತ್ತದೆ ಕಾಂಗ್ರೆಸ್. ಆದರೆ 1975ರಲ್ಲಿ ದೇಶದ ಪ್ರಜಾಪ್ರಭುತ್ವವನ್ನೇ ಮಣ್ಣು ಪಾಲು ಮಾಡಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದರು ಎಂಬುದನ್ನು ಮರೆತು ಕಾಂಗ್ರೆಸ್ ಪ್ರಜಾಪ್ರಭುತ್ವದ ಪಾಠ ಮಾಡುತ್ತದೆ ಎಂದರೆ ಪರಿಸ್ಥಿತಿಯ ಎಂಥ ಘೋರ ಅಣಕವಲ್ಲವೇ?
ಮನಮೋಹನ್ ಸಿಂಗ್ 10 ವರ್ಷದ ಕತೆ ಕೇಳಿ
ಇದುವರೆಗಿನದು ದೇಶದ ಇತಿಹಾಸವಾಯಿತು. ತೀರಾ ಇತ್ತೀಚೆಗೆ ಅಂದರೆ, 2004 ಈಚೆಗೆ ಆಡಳಿತಕ್ಕೆ ಬಂದ ಮನಮೋಹನ್ ಸಿಂಗ್ ನೇತೃತ್ವದ (ಸೋನಿಯಾ ಗಾಂಧಿ ನೇತೃತ್ವ ಎಂದರೂ ತಪ್ಪಿಲ್ಲ) ಯುಪಿಎ ಸರ್ಕಾರದ ಭ್ರಷ್ಟಾಚಾರ ಹಗರಣಗಳನ್ನು ನೋಡಿದರೆ ಇಂದಿಗೂ ಕಾಂಗ್ರೆಸ್ ಮೇಲೆ ಹೇಸಿಗೆ ಹುಟ್ಟುತ್ತದೆ. 2009ರಲ್ಲಿ ಬೆಳಕಿಗೆ ಬಂದ ಸತ್ಯಂ ಕಂಪ್ಯೂಟರ್ಸ್ ಹಗರಣ, 2010ರಲ್ಲಿ ದೇಶದ ಮಾನ ಹರಾಜು ಹಾಕಿದ ಕಾಮನ್ ವೆಲ್ತ್ ಗೇಮ್ಸ್ ಆಯೋಜನೆಯಲ್ಲಾದ ಭ್ರಷ್ಟಾಚಾರ, 2012ರಲ್ಲಿ ಹೊರಬಂದ ಕಲ್ಲಿದ್ದಿಲು ಖರೀದಿ ಹಗರಣ, ಆದರ್ಶ ಹಗರಣ, ಹೆಲಿಕಾಪ್ಟರ್ ಖರೀದಿ ಹಗರಣ… ಒಂದೇ ಎರಡೇ. ಕಾಂಗ್ರೆಸ್ಸಿನ ಭ್ರಷ್ಟಾಚಾರದ ಫಲವಾಗಿಯೇ ಇಂದಿಗೂ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಹವಾಲ ದಂಧೆ ಹಗರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ಇಂತಹ ಹಿನ್ನೆಲೆಯುಳ್ಳ ಕಾಂಗ್ರೆಸ್ ದೇಶದ ಪ್ರಧಾನಿಯಾದ ಬಳಿ ಒಂದೇ ಒಂದು ರಜೆ ತೆಗೆದುಕೊಳ್ಳದ, ಆಸ್ತಿ ಮಾಡದ, ಕುಟುಂಬಸ್ಥರನ್ನು ರಾಜಕೀಯ ಪಡಸಾಲೆಯತ್ತಲೂ ಸುಳಿಯದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿದ್ದರಾಮಯ್ಯನವರು ಭ್ರಷ್ಟಾಚಾರದ ಪಾಠ ಹೇಳುವ ಮೊದಲು ಕಾಂಗ್ರೆಸ್ಸಿನ ಇತಿಹಾಸ ಅರಿಯಲಿ.
Leave A Reply