ಇರಾನ್ ಅಧ್ಯಕ್ಷ ಭಾರತಕ್ಕೆ ಭೇಟಿ, ಮೋದಿ ವಿದೇಶಕ್ಕೆ ತೆರಳುವ ಜತೆಗೆ ಅವರನ್ನೂ ದೇಶಕ್ಕೆ ಕರೆಸುವ ನೈಪುಣ್ಯ ಹೊಂದಿರುವುದು ಸಾಬೀತು!
ದೆಹಲಿ: ಜನವರಿ 26ರ ಗಣರಾಜ್ಯೋತ್ಸವದ ವೈಭವವನ್ನು ಭಾರತ ಬಿಡಿ ವಿಶ್ವವೇ ಬೆರಗಾಗಿ ನೋಡಿತು. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಆಸಿಯಾನ್ ರಾಷ್ಟ್ರಗಳ ನಾಯಕರನ್ನು ಭಾರತಕ್ಕೆ ಕರೆಸಿದ ಮೋದಿ ಅವರು ವಿಶ್ವವನ್ನೇ ನಿಬ್ಬೆರಗಾಗಿಸಿದರು. ದೇಶದ ಶಕ್ತಿ ತೋರಿಸಿದರು.
ಮೊದಲಿನಿಂದಲೂ ಮೋದಿ ಅವರು ವಿದೇಶಕ್ಕೆ ತೆರಳುತ್ತಾರೆ, ವಿದೇಶದಲ್ಲೇ ಜಾಸ್ತಿ ಇರುತ್ತಾರೆ ಎಂದು ಕಾಂಗ್ರೆಸ್ ಸೇರಿ ಹಲವು ಪ್ರತಿಪಕ್ಷಗಳು ಟೀಕಿಸುತ್ತವೆ. ಆದರೆ ವಿದೇಶಕ್ಕೆ ತೆರಳಿ ಭಾರತವನ್ನು ಹೇಗೆ ಅಭಿವೃದ್ಧಿಗೊಳಿಸುತ್ತಿದ್ದಾರೆ, ಭಾರತದಲ್ಲಿ ಹೇಗೆ ವಿದೇಶಿ ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ ಎಂಬುದನ್ನು ತಮ್ಮ ವೈಯಕ್ತಿಕಕ್ಕೋಸ್ಕರ ಈ ವಿರೋಧ ಪಕ್ಷದವರು ಹೇಳಲ್ಲ.
ಹಾಗಂತ ಮೋದಿ ಅವರು ಬರೀ ವಿದೇಶ ಪ್ರವಾಸ ಮಾಡುತ್ತಿಲ್ಲ, ಅವರನ್ನೂ ನಮ್ಮ ದೇಶಕ್ಕೆ ಕರೆಸುತ್ತಿದ್ದಾರೆ ಎಂಬುದಕ್ಕೆ ಗಣರಾಜ್ಯೋತ್ಸವವೇ ಸಾಕ್ಷಿ. ಅದರ ಮುಂದುವರೆದ ಭಾಗ ಎಂಬಂತೆ ಈ ಮೋದಿ ಅವರು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.
ಹೌದು, ಫೆ.15ರಂದು ಇರಾನ್ ಅಧ್ಯಕ್ಷ ಹಸನ್ ರೌಹಾನಿಯವರು ಭಾರತಕ್ಕೆ ಆಗಮಿಸಲಿದ್ದು, ಪ್ರಧಾನಿ ಮೋದಿ ಅವರ ಜತೆ ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿ, ದ್ವಿಪಕ್ಷೀಯ ಮಾತುಕತೆ, ಒಪ್ಪಂದ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.
ಅಷ್ಟೇ ಅಲ್ಲ, ಕಳೆದ ವರ್ಷ ಇರಾನ್ ಚಬಹಾರ್ ಬಂದರು ಆರಂಭಿಸುವ ಮೂಲಕ ಭಾರತಕ್ಕೆ ತಾಂತ್ರಿಕತೆ ಹಾಗೂ ಆರ್ಥಿಕವಾಗಿ ಅನುಕೂಲ ಮಾಡಿಕೊಟ್ಟಿದ್ದು ಹಾಗೂ ಅದರ ಮರುವರ್ಷವೇ ಇರಾನ್ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡುತ್ತಿರುವುದು ಭಾರತದ ನಿರೀಕ್ಷೆ ಹೆಚ್ಚಿದೆ ಹಾಗೂ ಈ ಭೇಟಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ.
Leave A Reply