ಕರ್ನಾಟಕದ ಕೆಳಸಮುದಾಯದ ಮಹಿಳೆಯೊಬ್ಬರು ಜಿಪಂ ಅಧ್ಯಕ್ಷೆಯಾಗಿದ್ದಕ್ಕೆ ಪ್ರಧಾನಿ ಕಚೇರಿಯಿಂದ ಕರೆ!
ದೆಹಲಿ/ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಅವರೆಂದರೇನೆ ಹಾಗೆ. ಅವರು ಯಾರೇ ಅಭಿವೃದ್ಧಿ ಪರ ಇರಲಿ, ಕೆಳಮಟ್ಟದಿಂದ ಉನ್ನತ ಹುದ್ದೆವರೆಗೆ ಏಳಿಗೆ ಸಾಧಿಸಲಿ, ಅವರನ್ನು ಮುಕ್ತ ಕಂಠದಿಂದ ಶ್ಲಾಘಿಸುವುದು ಮೋದಿ ಅವರ ದೊಡ್ಡ ಗುಣವಾಗಿದೆ.
ಈಗ ಈ ಮಾತಿಗೆ ಪುಷ್ಟಿ ನೀಡುವಂತೆಯೇ ಪ್ರಧಾನಿ ಕಚೇರಿ ನಡೆದುಕೊಂಡಿದ್ದು, ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಸದಸ್ಯೆ ಚೈತ್ರಶ್ರೀ ಅವರಿಗೆ ಕರೆ ಬಂದಿದ್ದು, ಚೈತ್ರಶ್ರೀ ಅವರಿಗೆ ಅಪಾರ ಸಂತಸವಾಗಿದೆ.
ಹೌದು, ಚೈತ್ರಶ್ರೀ ಅವರು ಕೆಳಸಮುದಾಯದ ಕುಟುಂಬದಲ್ಲಿ ಜನಿಸಿ, ಉನ್ನತ ಶಿಕ್ಷಣ ಪಡೆದು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿರುವುದನ್ನು ಮೆಚ್ಚಿ ಪ್ರಧಾನಮಂತ್ರಿ ಕಚೇರಿಯಿಂದ ಬುಲಾವ್ ಬಂದಿರುವುದು, ಮೋದಿ ಅವರ ಪ್ರತಿಭೆ ಗುರುತಿಸುವಿಕೆಗೆ ಸಾಕ್ಷಿಯಾಗಿದೆ.
ಅಲೆಮಾರಿ ಜನಾಂಗದವಾರದ ಚೈತ್ರಶ್ರೀ ಅವರು ಗ್ರಾಮ ವಾಸ್ತವ್ಯ ಮಾಡಿ ಜನರ ಕಷ್ಟ ಆಲಿಸುವುದು, ಜಿಲ್ಲೆಯ ಅಭಿವೃದ್ಧಿ ಕೆಲಸದಲ್ಲಿ ತೊಡಗಿರುವುದು ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಪ್ರಧಾನಿ ಮೋದಿ ಅವರ ಖಾಸಗಿ ಆಪ್ತ ಸಹಾಯಕರು ಪತ್ರ ಬರೆದಿದ್ದಾರೆ.
ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರು ಬಿಡುವಿಲ್ಲದ ಕೆಲಸದಲ್ಲಿ ತೊಡಗಿದ್ದು, ಶೀಘ್ರವೇ ಅವರ ಜತೆ ಮಾತುಕತೆ ನಡೆಸಲು ದಿನಾಂಕ ನಿಗದಿಪಡಿಸಲಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
Leave A Reply