ವಿಧಾನ ಸಭೆ ಚುನಾವಣೆ ಡಿಸೆಂಬರ್ ಗೆ ಮುಂದೂಡಿಕೆ -ಐವನ್
Posted On February 16, 2018
ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಬಿ ಜೆ ಪಿ ರಾಜಕೀಯ ದಾಳವನ್ನು ಉಪಯೋಗಿಸಿ ರಾಷ್ಟ್ರಪತಿಯವರ ಅನುಮೋದನೆ ಪಡೆದು ಸಂವಿಧಾನ ತಿದ್ದುಪಡಿ ಮಾಡಿ ಚುನಾವಣೆ ಡಿಸೆಂಬರ್ ನಲ್ಲಿ ನಡೆಯುವಂತೆ ಪ್ರಯತ್ನಿಸುತ್ತದೆ ಎಂದು ತಿಳಿಸಿದರು.ಲೋಕ ಸಭೆ ಚುನಾವಣೆಯೊಂದಿಗೆ 9 ರಾಜ್ಯಗಳ ಚುನಾವಣೆಯನ್ನು ಏಕಾಕಾಲದಲ್ಲಿ ನಡೆಸುವುದು ಕೇಂದ್ರ ಸರಕಾರದ ಉದ್ದೇಶ ಎಂದು ಹೇಳಿದರು.
*ಗೊಂದಲದ ಹೇಳಿಕೆಗಳು*
ಒಂದು ಕಡೆ ಮಾರ್ಚ್ 1 ತಾರೀಕಿಗೆ ಚುನಾವಣೆ ದಿನಾಂಕ ಘೋಷಣೆಯಾಗಲಿದೆ ಎಂದು ಐವನ್ ಹೇಳಿದ್ದು, ಅದರ ಬೆನ್ನಲ್ಲೇ ಡಿಸೆಂಬರ್ ನಲ್ಲಿ ಚುನಾವಣೆ ನಡೆಯಬಹುದು ಎಂದು ಹೇಳಿದ್ದಾರೆ.ಮತ್ತೊಂದು ಕಡೆ ಲೋಕ ಸಭಾ ಚುನಾವಣೆ ಬಹುತೇಕ ಮುಂದಿನ ವರ್ಷ ಮೇ ತಿಂಗಳಲ್ಲಿ ನಡೆಯಲಿದ್ದು ವಿಧಾನಸಭೆ ಚುನಾವಣೆ ಏಕಾಕಾಲದಲ್ಲಿ ನಡೆಯುವುದಾದರೆ ಡಿಸೆಂಬರ್ ನಲ್ಲಿ ಅದು ಹೇಗೆ ಸಾಧ್ಯ ಎಂಬುವುದು ಜನ ಸಾಮಾನ್ಯರ ಪ್ರಶ್ನೆಯಾಗಿದೆ.
*ಈ ಬಾರಿ MLA ನಾನೇ*
ಮುಖ್ಯ ಮಂತ್ರಿ ಸಿದ್ಧರಾಮಯ್ಯ ಈ ಹಿಂದೆ ಹಾಲಿ ಶಾಸಕರಿಗೆ ಮುಂದಿನ ಟಿಕೆಟ್ ಎಂದು ಕೆಲವು ಕಡೆ ಹೇಳಿಕೊಂಡು ಬಂದಿದ್ದಾರೆ ಆದರೆ ಐವನ್ ಅವರು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ಹೇಳಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ.
*ಸೋಲಿನ ಭೀತಿಯಿಂದ ಗೊಂದಲದ ಹೇಳಿಕೆ?*
ಕೆಲವೊಂದು ಸಮೀಕ್ಷೆಗಳ ಮೂಲಕ ಈ ಬಾರಿ ಮುಲ್ಕಿ ಮೂಡಬಿದರೆ ಕ್ಷೇತ್ರದಲ್ಲಿ ಕಮಲ ಅರಳಲಿದೆ ಎಂದು ಹೇಳಲಾಗಿದ್ದು ಕಾಂಗ್ರೆಸ್ ನಾಯಕರಲ್ಲಿ ಭೀತಿ ಸೃಷ್ಟಿಸಿದೆ.ಈಗಾಗಲೇ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗೆ ಕಣ್ಣಿಟ್ಟಿರುವ ಮಿಥುನ್, ಐವನ್, ಅಭಯ ಚಂದ್ರರಿಗೆ ಟಿಕೆಟ್ ದೊರೆತರೆ ಸಮೀಕ್ಷೆಗಳನ್ನು ನಿಜ ಮಾಡಲು ಪ್ರಯತ್ನಿಸಬಹುದು ಎಂಬ ಮಾತು. ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
- Advertisement -
Leave A Reply