ಮಣಿಶಂಕರ್ ಅಯ್ಯರ್, ಕಮಲ್ ಹಾಸನ್ ಮುಸ್ಲಿಮರ ಅಡಿಯಾಳುಗಳು ಎಂದು ಹೇಳಿದ್ದು ಯಾರು ಗೊತ್ತಾ?
ದೆಹಲಿ: ಪ್ರಕಾಶ್ ರೈಗೆ ಕಾವೇರಿ ವಿಚಾರದ ಬಗ್ಗೆ ಮಾತನಾಡಿ ಎಂದರೆ, ಟಿವಿ ಚಾನಲ್ ಮೈಕ್ ಎಸೆದು ಓಡುತ್ತಾರೆ. ಕಮಲ್ ಹಾಸನ್ ಸಹ ರಾಜಕೀಯ ಬೇಳೆ ಬೇಯಿಸಿಕೊಳ್ಳು ಈಗ ಕಾವೇರಿ ವಿಚಾರದಲ್ಲಿ ಮಾತನಾಡಿದ್ದಾರೆ. ಕಾಂಗ್ರೆಸ್ ಉಚ್ಚಾಟಿತ ನಾಯಕ ಮಣಿಶಂಕರ್ ಅಯ್ಯರ್ ಅವರಂತೂ “ಐ ಲವ್ ಪಾಕಿಸ್ತಾನ” ಎಂದು ಹೇಳಿದ್ದಾರೆ.
ಇವರ ಈ ಇಬ್ಬಂದಿತನಕ್ಕೆ ಬಿಜೆಪಿ ನಾಯಕ, ಫೈರ್ ಬ್ರ್ಯಾಂಡ್ ಎಂದೇ ಖ್ಯಾತಿಯಾದ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಸರಿಯಾಗಿಯೇ ಟಾಂಗ್ ನೀಡಿದ್ದು, “ಕಮಲ್ ಹಾಸನ್ ಹಾಗೂ ಮಣಿಶಂಕರ್ ಅಯ್ಯರ್ ಅವರು ಮುಸ್ಲಿಮರ ಅಡಿಯಾಳುಗಳು” ಎಂದಿದ್ದಾರೆ.
ಇವರಿಬ್ಬರು ಹೆಸರಿಗಷ್ಟೇ ಹಿಂದೂಗಳು, ಅವರ ಹೆಸರಲ್ಲಿ ಮಾತ್ರ ಹಿಂದುತ್ವವಿದೆ. ಆದರೆ ಅವರ್ಯಾರೂ ಹಿಂದೂಗಳಲ್ಲ, ಇಬ್ಬರೂ ಮುಸ್ಲಿಮರ ಜೀತದಾಳುಗಳು ಎಂದು ಸುಬ್ರಮಣಿಯನ್ ಸ್ವಾಮಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ರಾಹುಲ್ ಗಾಂಧಿಗೆ ಹಿಂದುತ್ವದ ನುಡಿಗಟ್ಟು ಸಹ ಗೊತ್ತಿಲ್ಲ
ರಾಹುಲ್ ಗಾಂಧಿಯವರು ಚುನಾವಣೆ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದಾರೆ. ಹಾಗಾಗಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಹಿಂದುತ್ವದ ಸಿದ್ಧಾಂತ ಬಿಡಿ, ಅವರಿಗೆ ಹಿಂದುತ್ವದ ನುಡಿಗಟ್ಟು ಸಹ ಗೊತ್ತಿಲ್ಲ. ಹಾಗಾಂಗಿ ಕಾಂಗ್ರೆಸ್ ದೇಶಿ ನಾಯಕನನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸುಬ್ರಮಣಿಯನ್ ಸಲಹೆ ಸಹ ನೀಡಿದ್ದಾರೆ.
ಮುಸ್ಲಿಮರ ವೋಟು ಬಿಜೆಪಿಗೆ
ಮುಸ್ಲಿಮರು ಹಿಂದೂಗಳು ಎಂದು ಒಡೆದಿದ್ದೇ ಕಾಂಗ್ರೆಸ್. ಆದರೆ ಬಿಜೆಪಿ ಎಂದಿಗೂ ಹಾಗೆ ಸಮುದಾಯ ಒಡೆಯುವ ಕೆಲಸ ಮಾಡಿಲ್ಲ. ಇದೇ ದಿಸೆಯಲ್ಲಿಯೇ ತ್ರಿವಳಿ ತಲಾಖ್ ವಿರುದ್ಧ ಕಾನೂನು ರಚಿಸಲು ಹೊರಟಿದ್ದೇವೆ. ಆ ಮೂಲಕ ಮಹಿಳೆಯರಿಗೆ ನೆಮ್ಮದಿಯ ಜೀವನ ಸಾಗಿಸಲು ಅನುವು ಮಾಡಿಕೊಡುತ್ತಿದ್ದೇವೆ. ಮುಂದಿನ ದಿನಗಳಲ್ಲೂ ಹಲವು ಸುಧಾರಣೆಗಳಾಗಲಿದ್ದು, ಮುಸ್ಲಿಮರು ದೀರ್ಘಕಾಲದವರೆಗೆ ಬಿಜೆಪಿಗೆ ಮತ ಹಾಕುತ್ತಾರೆ ಎಂದು ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Leave A Reply