ಸಿದ್ದರಾಮಯ್ಯನವರೇ ಏನನ್ನು ನೆಟ್ಟಗೆ ಕೊಡಲಿಲ್ಲ, ಸ್ವಾತಂತ್ರ್ಯವಾಗಿ ಜೀವಿಸುವ ವಾತಾವರಣವಾದರೂ ನಿರ್ಮಿಸಿ
ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಪ್ರೇಮ ವಂದನೆಗಳು
ನಾನು ರಾಜ್ಯದ ಸಾಮಾನ್ಯ ಪ್ರಜೆಯಾಗಿ ನಿಮ್ಮಿಂದ ಬಯಸಿದ್ದು ಬೆಟ್ಟದಷ್ಟು, ಆದರೆ ನೀವು ನೀಡಿದ್ದು ತೃಣದಷ್ಟು. ಇರಲಿ ನಿಮ್ಮ ಶಕ್ತಾನುಸಾರ, ಹೈ ಕಮಾಂಡ್ ಹೇಳಿದಂತೆ, ನಿಮ್ಮ ಚೇಲಾಗಳ ಆಜ್ಞಾನುಸಾರ, ಮತ ತುಷ್ಟೀಕರಣಕ್ಕಾಗಿ ನೀವೊಂದಿಷ್ಟು ಬಕೆಟ್ ಹಿಡಿಯುವಂತೆ ಯೋಜನೆಗಳನ್ನು ಜಾರಿಗೆ ತಂದಿದ್ದೀರಿ. ಆದರೆ ಸಾಮಾನ್ಯ ಪ್ರಜೆಯಾಗಿ ನಿಮ್ಮಲ್ಲಿ ಕೇಳಿಕೊಳ್ಳುವದೆನೆಂದರೇ ನನಗೆ ರಕ್ಷಣೆ ಕೊಡಿ. ಅದೊಮ್ಮೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದಾಗ ಸ್ವಘೋಷಿತ ಬುದ್ಧಿಜೀವಿಗಳಿಗೆ ಪೊಲೀಸ್ ಭದ್ರತೆ ಒದಗಿಸಿದ್ದೀರಿ. ಆದರೆ ಈ ರಾಜ್ಯದಲ್ಲಿ ಸಾಮಾನ್ಯರಿಗೆ ರಕ್ಷಣೆ ಇಲ್ಲವೆಂಬುದು ನಿಮ್ಮ ಕಣ್ಣೆದುರೆ ನಡೆದ ಹಲವು ಘಟನೆಗಳು ಸಾಕ್ಷಿಯಾಗಿವೆ.
ಬೈಕ್ ಮೇಲೆ ಮನೆಗೆ ಹೊರಟ ದೀಪಕ್ ನನ್ನು ನಡು ಬೀದಿಯಲ್ಲಿ ಮತಾಂಧರು ಮಸಣ ಸೇರಿಸಿದರು. ಹಿಂದೂಗಳ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಪರೇಶ್ ಮೇಸ್ತಾನನ್ನು ಕೆರೆ ಪಾಲು ಮಾಡಿದರು. ಬಿಜೆಪಿ ಬ್ಯಾನರ್ ಕಟ್ಟುತ್ತಿದ್ದ ಕಾರ್ಯಕರ್ತ ಸಂತೋಷ ನನ್ನು ಇರಿದು ಕೊಲ್ಲಲಾಯಿತು, ನೀವು ಪೊಲೀಸ್ ಸಿಬ್ಬಂದಿ ಮೇಲೆ ಮನಸೋ ಇಚ್ಛೆ ಕೈ ಮಾಡುತ್ತೀರಿ, ನಿಮ್ಮ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮಹಮದ್ ಅಮಾಯಕ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ, ಕೋರ್ಟ್ ಗೆ ಹಾಜರಾಗುವಾಗ ವರದಿ ಮಾಡುವ ಮಾಧ್ಯಮದವರ ಮೇಲೆ ಶಾಸಕರ ಗುಂಡಾ ಬೆಂಬಲಿಗರು ಕೈ ಮಾಡುತ್ತಾರೆ, ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿಬಿಎಂಪಿ ಕಚೇರಿಯಲ್ಲಿ ಪೆಟ್ರೋಲ್ ಹಾಕಿ ಸುಡುತ್ತೇನೆ ಎಂದು ಅಧಿಕಾರಿಗೆ ಜೀವ ಬೆದರಿಕೆ ಒಡುತ್ತಾನೆ, ಸಚಿವರ ಬೆಂಬಲಿಗರು ಸಾಮಾನ್ಯರ ಮೇಲೆ ಹಲ್ಲೆ ಮಾಡುತ್ತಾರೆ… ಹೀಗೆ ರಾಜ್ಯದಲ್ಲಿ ನಿಮ್ಮ ಕಾಂಗ್ರೆಸ್ ಕಾರ್ಯರ್ತರು ಮತ್ತು ನಿಮ್ಮ ಕೃಪಾಪೋಷಿತ, ನೀವು ಸರ್ಟಿಫಿಕೆಟ್ ನೀಡಿರುವ ಮುಗ್ದರ ದುರಂಹಕಾರ ಮಿತಿ ಮೀರುತ್ತಿದೆ.
ಸಾಲು ಸಾಲು ಹೆಣ ಬೀಳುತ್ತಿದ್ದರೂ, ಹಲ್ಲೆಗಳಾಗುತ್ತಿದ್ದರೂ, ಅತ್ಯಾಚಾರಗಳಾಗುತ್ತಿದ್ದರೂ ನೀವು ಮುಗ್ಗುಂಮಾಗಿದ್ದೀರಿ. ಇನ್ನು ನಿಮ್ಮ ಗೃಹ ಸಚಿವರು ಕೊಲೆ ಹೇಗಾಗಿದೆ ಎಂದು ತಮ್ಮ ಮನೆಯಲ್ಲಿ ಕುಳಿತೇ ಘೋಷಣೆ ಮಾಡುತ್ತಾರೆ. ಹೀಗೆ ನಿಮ್ಮ ಮಗನ ಸಾವಿನ ಬಗ್ಗೆಯೂ ಒಮ್ಮೆ ಯೋಚಿಸಿ. ಅಂದು ನೀವು ಕಣ್ಣೀರಿಡುತ್ತಿದ್ದರೇ ಇಡೀ ರಾಜ್ಯ ನೊಂದಿತ್ತು. ರಾಜ್ಯದ ದೊರೆಯ ಮಗನ ಅಗಲಿಕೆಗೆ ಇಡೀ ರಾಜ್ಯ ಶೋಕಾಚರಣೆ ಮಾಡಿತು. ಅಂದು ಕಣ್ಣೀರು ಹಾಕಿದವರಲ್ಲಿ ನಾನು ಒಬ್ಬ. ನೀವು ಹೆತ್ತ ಮಗನನ್ನು ಕಳೆದುಕೊಂಡಿದ್ದೀರಿ. ಆ ದುಖಃ ಯಾರಿಗೂ ಬರಬಾರದಲ್ಲವೇ..?
ವಿದ್ವತ್, ದೀಪಕ್, ಪರೇಶ್ ಯಾರೇ ಇರಲಿ ಅವರ ಮನೆಯಲ್ಲಿ ಅವರನ್ನೇ ನಂಬಿಕೊಂಡ ಕೆಲವು ಜೀವಗಳಿರುತ್ತವೆ. ಆ ಜೀವಗಳಿಗೆ ರಾಜ್ಯದಲ್ಲಿ ಶಾಂತಿ ಸುವವ್ಯಸ್ಥೆ ಹಾಳಾಗಿದೆ ಎಂಬ ಅರಿವು ಇರುವುದಿಲ್ಲ. ಮಕ್ಕಳನ್ನು ಹೊರಗೆ ಬಿಡುತ್ತಾರೆ. ಅದಕ್ಕೆ ಕಾರಣ ನಮ್ಮ ಸರ್ಕಾರವಿದೆ, ಬಲಿಷ್ಠ ಪೊಲೀಸ್ ವ್ಯವಸ್ಥೆ ಇದೆ ರಕ್ಷಣೆ ನೀಡುತ್ತೆ ಎಂದು. ಆದರೆ ನಮ್ಮ ರಾಜ್ಯದಲ್ಲಿ ಹೊರಗೆ ಹೊದ ಮಕ್ಕಳು ಮರಳಿ ಬರುತ್ತಾರೆ ಎಂಬ ಭರವಸೆಯನ್ನೆ ಪಾಲಕರು ಕಳೆದುಕೊಂಡಿದ್ದಾರೆ. ಅದಕ್ಕೆ ಕಾರಣ ನಿಮ್ಮ ಆಡಳಿತದಲ್ಲಿ ಮರೆತಿರುವ ಭದ್ರತೆ. ಇನ್ನು ನಿಮ್ಮ ನಿರ್ದೇಶನದ ಪೊಲೀಸ್ ವ್ಯವಸ್ಥೆ ನಿರಂತರವಾಗಿ ನೀಡುತ್ತಿರುವ ಕ್ಲೀನ್ ಚೀಟ್ ಗಳು.
ಅಪರಾಧಿಗಳನ್ನು ಹಿಡಿದು ಮಣ್ಣು ಮುಕ್ಕಿಸಬೇಕಾದ ಪೊಲೀಸ್ ವ್ಯವಸ್ಥೆ ಕ್ಲೀನ್ ಚೀಟ್ ಕೊಡುವಂತಾಗಿದೆ. ಹೀಗಾದರೆ ನಿಮ್ಮ ಮೇಲೆ ಹೇಗೆ ಭರವಸೆ ಮೂಡಬೇಕು, ಹೆತ್ತು ಹೊತ್ತು ಸಾಕಿ ಸಲುಹಿದ ಪೋಷಕರು ಮಗನನ್ನು ಹೊರಗೆ ಹೇಗೆ ಬಿಡಬೇಕು. ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೇನೆ ದಯವಿಟ್ಟು ನೀವು ರಸ್ತೆ, ನೀರು, ಆಹಾರ ಏನನ್ನು ಕೊಡಲಿಲ್ಲ, ಅದೆಲ್ಲವನ್ನೂ ಕೊಡದಿದ್ದರೂ ಪರವಾಗಿಲ್ಲ. ಹೇಗಾದರೂ ಜೀವನ ಸಾಗಿಸುತ್ತೇನೆ. ನನಗೆ ಸ್ವಾತಂತ್ರ್ಯವಾಗಿ ಓಡಾಡಲು, ಕೆಲಸ ಮಾಡಲು ಅವಕಾಶ ಮಾಡಿಕೊಡಿ ಅಷ್ಟೇ ಸಾಕು…
ನಿಮ್ಮ ಸರ್ಕಾರದ ಭದ್ರತೆಯ ನಿರೀಕ್ಷೆಯಲ್ಲಿ..
ಸಾಮಾನ್ಯ ನಾಗರೀಕ.
Leave A Reply