2007 ಗಲಭೆಯಲ್ಲಿ ಯೋಗಿ ಆದಿತ್ಯನಾಥರ ಕೈವಾಡ ಆರೋಪ, ಸಿಬಿಐ ತನಿಖೆ ಬೇಡ ಎಂದ ಕೋರ್ಟ್
ಲಖನೌ: 2007 ರಲ್ಲಿ ಗೋರಖಪುರದಲ್ಲಿ ನಡೆದ ಗಲಭೆಗೆ ಯೋಗಿ ಆದಿತ್ಯನಾಥರ ಪ್ರಚೋದನಕಾರಿ ಭಾಷಣ ಕಾರಣವಾಗಿದ್ದು, ಈ ಕುರಿತು ಸಿಬಿಐ ತನಿಖೆ ಮಾಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಮುನ್ನಡೆ ಸಿಕ್ಕಿದೆ.
ನ್ಯಾ.ಕೃಷ್ಣ ಮುರಾರಿ ಹಾಗೂ ಅಖಿಲೇಶ್ ಚಂದ್ರ ಅವರನ್ನೊಳಗೊಂಡ ನ್ಯಾಯಪೀಠ, ಪೊಲೀಸರು ನಡೆಸಿರುವ ತನಿಖೆ ಸಮರ್ಪಕವಾಗಿ ಹಾಗೂ ಆರೋಪಕ್ಕೆ ಹತ್ತಿರವಾಗಿಲ್ಲ. ಹಾಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಲು ಆಗಲ್ಲ ಎಂದು ಸ್ಪಷ್ಟಪಡಿಸಿದೆ.
ಇದರಿಂದ ಸಿಬಿಐನಂತಹ ಸ್ವತಂತ್ರ ಸಂಸ್ಥೆಗಳಿಗೆ ಪ್ರಕರಣದ ತನಿಖಾ ಉಸ್ತುವಾರಿಯನ್ನು ವಹಿಸಬೇಕು ಎಂದು ಅರ್ಜಿ ಸಲ್ಲಿಸಿದ್ದ ಪರ್ವೇಜ್ ಪರ್ವಾಜ್ ಹಾಗೂ ಅಸಾದ್ ಹಯಾತ್ ಅವರಿಗೆ ಹಿನ್ನಡೆಯಾಗಿದೆ. ಅತ್ತ ಯೋಗಿ ಆದಿತ್ಯನಾಥರು ನಿರಾಳರಾಗಿದ್ದಾರೆ.
2007ರಲ್ಲಿ ಉತ್ತರ ಪ್ರದೇಶದ ಗೋರಖಪುರದಲ್ಲಿ ಎರಡು ಸಮುದಾಯಗಳ ನಡುವೆ ಗಲಭೆಯಾಗಿತ್ತು. ಈ ವೇಳೆ ಒಬ್ಬ ಹಿಂದೂ ವ್ಯಕ್ತಿ ಮೃತಪಟ್ಟಿದ್ದ. ಇದಕ್ಕೆ ಯೋಗಿ ಆದಿತ್ಯನಾಥರ ಪ್ರಚೋದನಾತ್ಮಕ ಭಾಷಣವೇ ಕಾರಣ ಎಂದು ಆರೋಪಿಸಲಾಗಿತ್ತು. ಈಗ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಕೋರ್ಟ್ ನಿರಾಕರಿಸಿದೆ.
Leave A Reply