ಮೋದಿ ಆರ್ಥಿಕ ನೀತಿ ವಿರೋಧಿಗಳೇ ಕೇಳಿ ಉಬರ್ ಸಿಇಒ ಹೇಳಿದ ಶ್ಲಾಘನೀಯ ಮಾತುಗಳು..!
ದೆಹಲಿ: ಪ್ರಧಾನಿ ನರೇಂದ್ರ ಮೋದಿ.. ಈ ಹೆಸರು ಇದೀಗ ವಿಶ್ವಮಟ್ಟದಲ್ಲಿ ಭಾರತದ ತಾಕತನ್ನು ವಿಶ್ವಕ್ಕೆ ತೋರಿಸಿದ್ದು. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಆಡಳಿತ ವ್ಯವಸ್ಥೆಗೆ ಹೊಸ ದಿಕ್ಕನ್ನು ತೋರಿಸಿದವರು. ನೋಟ್ಯಂತರ, ಏಕರೂಪ ತೆರಿಗೆ (ಜಿಎಸ್ಟಿ) ಸೇರಿ ಹಲವು ಕ್ರಾಂತಿಕಾರಕ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಭಾರತದ ಅರ್ಥ ವ್ಯವಸ್ಥೆಗೆ ನವ ಚೈತನ್ಯ ನೀಡಿದವರು. ನರೇಂದ್ರ ಮೋದಿ ಅವರ ಬಲಿಷ್ಠ ಆರ್ಥಿಕ ನಿರ್ಧಾರಗಳನ್ನು ವಿಶ್ವದ ಹಲವು ಆರ್ಥಿಕ ತಜ್ಞರು, ಸಂಸ್ಥೆಗಳು ಶ್ಲಾಘಿಸಿವೆ. ಇದೀಗ ಮೋದಿ ಅವರನ್ನು ಮತ್ತು ಅವರ ಆರ್ಥಿಕ ನೀತಿಗಳನ್ನು ಹೊಗಳುವವರ ಸಾಲಿಗೆ ಖ್ಯಾತ ಸಂಸ್ಥೆ ಉಬರ್ ಕಂಪನಿ ಸಿಇಒ ದಾರಾ ಖೋಸ್ರೋಶಾಹಿ ಸೇರಿದ್ದಾರೆ.
ಭಾರತದ ಆರ್ಥಿಕ ಸುಧಾರಣೆ ಬದಲಾವಣೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೈಗೊಂಡ ದಿಟ್ಟ ನಿರ್ಧಾರಗಳ ಬಗ್ಗೆ ದಾರಾ ಖೊಸ್ರೋಶಾಹಿ, ಪ್ರಧಾನಿ ನರೇಂದ್ರ ಮೋದಿ ತಮ್ಮ ಫೇವರಿಟ್ ಆಡಳಿತಗಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇಶದ ಆರ್ಥಿಕ ಪ್ರಗತಿ ದಿಸೆಯಲ್ಲಿ ಮೋದಿಯವರು ತೋರುತ್ತಿರುವ ಬದ್ಧತೆ ಮತ್ತು ಔದ್ಯಮಿಕ ಕೌಶಲದ ನಿರ್ಧಾರಗಳು, ಪ್ರೋತ್ಸಾಹ ದೇಶಕ್ಕೆ ನವ ಚೈತನ್ಯ ನೀಡಲಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸಣ್ಣ ಉದ್ಯಮಿಗಳಿಗೆ ಅವಕಾಶ ಸೃಷ್ಟಿಸುವ ಮಾರ್ಗಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಚರ್ಚೆ ನಡೆಸಿರುವ ಖೊಸ್ರೋಶಾಹಿ, 2025ರ ವೇಳೆಗೆ ಭಾರತದ ಆರ್ಥಿಕತೆಯನ್ನು 5 ಲಕ್ಷ ಕೋಟಿ ಡಾಲರ್‌ಗೆ ವಿಸ್ತರಿಸುವ ಕನಸಿಗೆ ಪೂರಕ ಸಲಹೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಭಾರತದ ಪ್ರಧಾನಿ ಮೋದಿಯವರು ಕೈಗೊಂಡಿರುವ ಕಠಿಣ ಆರ್ಥಿಕ ಸುಧಾರಣೆಗಳು ಜಾಗತಿಕ ಮಟ್ಟದಲ್ಲಿ ದೇಶವನ್ನು ಬದಲಾವಣೆಗೆ ಮುನ್ನುಡಿ ಬರೆಸಲು ಸಹಕಾರಿಯಾಗಿವೆ. ನರೇಂದ್ರ ಮೋದಿ ಅವರ ದೂರದೃಷ್ಟಿ ಮೆಚ್ಚುವಂತಾದ್ದು ಎಂದು ಹೇಳಿದ್ದಾರೆ.
Leave A Reply