ಭಟ್ಕಳ ಆಯ್ತು! ಈಗ ಬಂಟ್ವಾಳದ ಸರದಿ. ಇಲ್ಲಿನ ಕೋಮುಗಲಭೆಗೆ ಕಾರಣವಾಗುತ್ತಿರುವ ಆ “ಭಯಾನಕ” ಅಂಶಗಳೇನು?
ಡಿಸೆಂಬರ್ 11, 2016. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಪತ್ತುಮುಡಿ ಎಂಬಲ್ಲಿ ಹೋಂಡಾ ಆಕ್ಟಿವಾದಲ್ಲಿ ಬರುತ್ತಿದ್ದ ಇಬ್ಬರನ್ನು ಪೊಲೀಸರು ತಡೆದು ತಪಾಸಣೆ ನಡೆಸಿದಾಗ ಅವರ ಬಳಿ ಪತ್ತೆಯಾದದ್ದು 1.1 ಕೆಜಿ ಗಾಂಜಾ. ತಾವು ಕೇರಳದಿಂದ ಗಾಂಜಾ ತಂದು ಬಂಟ್ವಾಳ, ಪುತ್ತೂರು, ಸುಳ್ಯ ಪರಿಸರದಲ್ಲಿ ಕಾರ್ಯನಿರ್ವಹಿಸುತ್ತಿರುವ ಏಜೆಂಟರಿಗೆ ತಲುಪಿಸುವ ಕೆಲಸ ಮಾಡುತ್ತಿರುವುದಾಗಿ; ಮತ್ತು ಆ ಕೆಲಸವನ್ನು ಒಂದೆರಡು ವರ್ಷಗಳಿಂದಲೂ ನಿರಂತರವಾಗಿ ಮಾಡುತ್ತ ಬಂದಿರುವುದಾಗಿ ಆರೋಪಿಗಳು ಒಪ್ಪಿಕೊಂಡರು. ಆರೋಪಿಗಳ ಹೆಸರು: ಜಲಾಲುದ್ದೀನ್ (28 ವರ್ಷ), ಇಮ್ರಾನ್ (28). ಅಂದ ಹಾಗೆ, ಹೆಸರು ಮತ್ತು ಧರ್ಮವನ್ನು ಇಲ್ಲಿ ಬದಲಿಸಿಲ್ಲ.
ಡಿಸೆಂಬರ್ 30, 2016. ಹೊಸ ವರ್ಷದ ಸಂಭ್ರಮ ಗರಿಗೆದರುತ್ತಿದ್ದ ಹೊತ್ತು. ಮಾದಕ ವಸ್ತುಗಳಿಗೆ ಈ ಸಮಯದಲ್ಲಿ ಬೇಡಿಕೆ ದುಪ್ಪಟ್ಟಾಗುತ್ತದೆಂಬುದು ಲೋಕಜ್ಞಾನ. ಇಂಥ ಸುಮುಹೂರ್ತದಲ್ಲೇ ತಮ್ಮ ದಂಧೆ ಖುಲಾಯಿಸಿ ಕಾಸು ಮಾಡಿಕೊಳ್ಳಲೆಂದು ಇಬ್ಬರು ಖದೀಮರು 13 ಕೆಜಿ ಗಾಂಜಾದೊಂದಿಗೆ ವಿಟ್ಲದಲ್ಲಿ ಅಂಗಡಿ ಬಿಚ್ಚಿದ್ದರು; ನಂತರ ಅಳಿಕೆಯ ಕಾಂತಡ್ಕದಲ್ಲಿ ಪೊಲೀಸರ ಬಲೆಗೆ ಬಿದ್ದರು. ಅವರ ಹೆಸರು: ಖಲಂದರ್ ಶಾಫಿ (22) ಮತ್ತು ಅರ್ಮಾನ್ (25). ಈ ಜಾಲದ ಮತ್ತೋರ್ವ ಸದಸ್ಯ ಮುಹಮ್ಮದ್ ಹ್ಯಾರಿಸ್ ಅಲಿಯಾಸ್ ಆಹುಲ್ ಹ್ಯಾರಿಸ್, 2017ರ ಮಾರ್ಚ್ 9ರಂದು ಉರಿಮಜಲುವಿನಲ್ಲಿ ಗಾಂಜಾ ಮಾರುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದ.
ಜನವರಿ 5, 2017. ಕತ್ತರಿ ಸಾಣೆ ಮಾಡುವ ನೆಪದಲ್ಲಿ ಮನೆಯಿಂದ ಮನೆಗೆ ಹೋಗುತ್ತ ಬಂಟ್ವಾಳದ ಕೈರಂಗಳ ಗ್ರಾಮದ ಪುಂಚಮೆಯಲ್ಲಿ ಗಾಂಜಾ ಮಾರಲು ಯತ್ನಿಸುತ್ತಿದ್ದ ತೆಲುಗನನ್ನು ಪೊಲೀಸರು ಬಂಧಿಸಿದರು. ಅವನ ಹೆಸರು: ಅಬ್ದುಲ್ ಲತೀಫ್ (22).
ಜನವರಿ 15, 2017. ಬಂಟ್ವಾಳದ ವಿಟ್ಲ ಸರಕಾರೀ ಪ್ರಥಮ ದರ್ಜೆ ಕಾಲೇಜಿನ ಆಸುಪಾಸಿನಲ್ಲಿ ಗಾಂಜಾ ಪ್ಯಾಕೇಟುಗಳನ್ನು ಮೈಯ ಸಂಧಿಸಂಧಿಗಳಲ್ಲಿ ಸಿಕ್ಕಿಸಿಕೊಂಡು ಗಿರಾಕಿಗಳ ಪ್ರತೀಕ್ಷೆಯಲ್ಲಿದ್ದ ಇಬ್ಬರು ಪೊಲೀಸರ ಅತಿಥಿಗಳಾದರು. ಆ ಆರೋಪಿಗಳ ಹೆಸರು: ಮುಹಮ್ಮದ್ ಅಶ್ರಫ್ (22) ಮತ್ತು ಹನೀಫ್ ಅಲಿಯಾಸ್ ಜೋಗಿ ಹನೀಫ್ (35).
ಜುಲೈ 21, 2017. ಕೇರಳದಿಂದ ಮಂಗಳೂರಿಗೆ ಬಂದಿದ್ದ ಗಾಂಜಾ ವ್ಯಾಪಾರಿಯೊಬ್ಬ ಮಂಗಳೂರಿನ ಸಿಸಿಬಿ ಪೊಲೀಸರ ಬಲೆಗೆ ಬಿದ್ದ. ಅವನಿಂದ ವಶಪಡಿಸಿಕೊಂಡ ಗಾಂಜಾ 2 ಕೆಜಿಯಷ್ಟು. ಆರೋಪಿಯ ಹೆಸರು: ಜಮಾಲ್ (35).
ಸೆಪ್ಟೆಂಬರ್ 26, 2017. ಬಂಟ್ವಾಳ ತಾಲೂಕಿನ ಫರಂಗಿಪೇಟೆ ಪೊಲೀಸ್ ಔಟ್‍ಪೋಸ್ಟ್ ಬಳಿ, ರಾಷ್ಟ್ರೀಯ ಹೆದ್ದಾರಿಯಲ್ಲೇ ಒಂದು ಮಾರಾಮಾರಿಯಾಯಿತು. ಐದು ಮಂದಿ ಯುವಕರು ದೊಡ್ಡ ಮಚ್ಚು, ಲಾಂಗುಗಳನ್ನು ಝಳಪಿಸುತ್ತ ನಡುರಸ್ತೆಯಲ್ಲೇ ಹೊಡೆದಾಡಿಕೊಂಡರು. ರಸ್ತೆಯಲ್ಲಿ ಹೋಳಿಬಣ್ಣದಂತೆ ನೆತ್ತರ ಹೊಳೆ ಹರಿಯಿತು. ಇಬ್ಬರು ಸ್ಥಳದಲ್ಲೇ ಸಾವಿಗೀಡಾದರೆ ಇನ್ನು ಮೂವರು ಮಾರಣಾಂತಿಕ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದರು. ನಂತರ ತಿಳಿದುಬಂದ ವಿಷಯವೇನೆಂದರೆ ಅದು ಡ್ರಗ್ಸ್ ಮಾರುವ ಎರಡು ತಂಡಗಳ ನಡುವಿನ ದ್ವೇಷ-ವೈಷಮ್ಯಗಳ ಜಿದ್ದಾಜಿದ್ದಿಯ ಪ್ರದರ್ಶನ. ಆ ಎರಡು ತಂಡಗಳ ನಡುವೆ ಹಿಂದೆಯೂ ಹಲವು ಕಿತ್ತಾಟಗಳಾಗಿದ್ದು ಮೂರ್ನಾಲ್ಕು ಹೆಣಗಳೂ ಬಿದ್ದಿದ್ದವು. ಫರಂಗಿಪೇಟೆಯ ಆ ಗಲಾಟೆಯಲ್ಲಿ ಸತ್ತುಬಿದ್ದವರು: ಝಿಯಾ ಮತ್ತು ಫಯಾಜ್. ಗಾಯಗೊಂಡವರು: ಅನೀಸ್, ಮುಶ್ತಾಕ್ ಮತ್ತು ಫಜಲ್.
ಅಕ್ಟೋಬರ್ 27, 2017. ಬಂಟ್ವಾಳ ತಾಲೂಕಿನ ಕಾವಳಪಡೂರು ಎಂಬ ಕುಗ್ರಾಮದಲ್ಲಿ ಇಬ್ಬರು ಬಂಧನಕ್ಕೊಳಗಾದರು. ಕಾರಣ? ಮತ್ತದೇ ಗಾಂಜಾ ಮಾರಾಟ. ಬಂಧಿತರ ಹೆಸರು: ನಾಸಿರ್ ಅಹಮದ್ (32), ಮುಹಮ್ಮದ್ ಅಮ್ರಾಜ್ (29).
ಜನವರಿ 4, 2018. ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಬಳಿ ಅನುಮಾನಾಸ್ಪದವಾಗಿ ಸುಳಿದಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದಾಗ, ಆತ ಅಲ್ಲಿ ಬರುವ ಕಾಲೇಜು ಹುಡುಗರಿಗೆ ಡ್ರಗ್ಸ್ ಮಾರಲು ಬಂದಿದ್ದವನೆಂಬುದು ತಿಳಿಯಿತು. ಅವನಿಂದ ವಶಪಡಿಸಿಕೊಂಡದ್ದು 1.170 ಕೆಜಿ ಗಾಂಜಾ. ಆರೋಪಿಯ ಹೆಸರು: ಅಬ್ದುಲ್ ರಹೀಂ (45).
ಜನವರಿ 17, 2018. ಕೇರಳ-ಕರ್ನಾಟಕಗಳ ಗಡಿಪ್ರದೇಶವಾದ ನೆತ್ತಲಪದವು ಎಂಬ ಊರಿನ ಕಲ್ಲರಕೋಡಿ ಎಂಬ ಜಾಗದಲ್ಲಿ ಇಬ್ಬರು ಡ್ರಗ್ ಡೀಲರುಗಳು ಪೊಲೀಸರ ಕಣ್ಣಿಗೆ ಬಿದ್ದರು. ಪೊಲೀಸರು ತಮ್ಮನ್ನು ಬೆನ್ನು ಹತ್ತಿದ ಸಂಗತಿ ತಿಳಿಯುತ್ತಲೇ ಆರೋಪಿಗಳಿಬ್ಬರೂ ಪರಾರಿಯಾದರು. ಅವರು ಮಾರಲೆಂದು ತಂದಿದ್ದುದರಲ್ಲಿ ಮಾರಿ ಉಳಿದಿದ್ದ 10.25 ಕೆಜಿ ಗಾಂಜಾ ಪೊಲೀಸರಿಗೆ ಸಿಕ್ಕಿತು. ಓಡಿಹೋಗಿ ತಲೆಮರೆಸಿಕೊಂಡ ಇಮ್ತಿಯಾಜ್ ಪೊಲೀಸರಿಗೆ ಸಿಗಲಿಲ್ಲ; ಆದರೆ ಮುಹಮ್ಮದ್ ಆಜೀಜ್ ಕೆಲವೇ ದಿನಗಳಲ್ಲಿ ಪೊಲೀಸ್ ಬಲೆಗೆ ಬಿದ್ದ.
ಫೆಬ್ರವರಿ 11, 2018. ಕೇರಳದ ಉಪ್ಪಳ ಮತ್ತು ಮಂಜೇಶ್ವರದಲ್ಲಿ ಮಾರಾಟ ಮಾಡಲೆಂದು ಮಂಗಳೂರಿಂದ 2 ಕೆಜಿ ಗಾಂಜಾ ಹೊತ್ತೊಯ್ಯುತ್ತಿದ್ದವನೊಬ್ಬ ಕೊಣಾಜೆ ಬಳಿ ಪೊಲೀಸರ ಅತಿಥಿಯಾದ. ಅವನ ಹೆಸರು: ಅಬ್ದುಲ್ ನಿಸಾರ್.
ಹೇಳುತ್ತ ಹೋದರೆ ಇನ್ನು ಹತ್ತು ಪುಟಗಳನ್ನು ಇಂಥ ಅಪರಾಧ ಸುದ್ದಿಗಳಿಂದ ತುಂಬಿಸಬಹುದು. ಗಾಂಜಾ ಮಾರಲುಹೋಗಿ ಸಿಕ್ಕಿಬಿದ್ದವರು, ಇಲ್ಲವೇ ತಲೆಮರೆಸಿಕೊಂಡವರು, ಅಥವಾ ತಮ್ಮತಮ್ಮೊಳಗಿನ ಜಿದ್ದಾಜಿದ್ದಿನ ಯುದ್ಧಗಳಲ್ಲಿ ಗಾಯಗೊಂಡವರು, ಕೊನೆಗೆ ಹೆಣವಾದವರು ಎಲ್ಲರೂ ಅವರೇ – ಅಜೀಜ್, ಅಬ್ದುಲ್ಲ, ತೌಫೀಕ್, ಖಾದರ್, ಮಸ್ತಾನಾ, ಬಾಷಾ, ಹ್ಯಾರಿಸ್, ರಾಹಿಲ್, ರಫಿ ಮುಂತಾದ ನಮ್ಮ-ನಿಮ್ಮ ಪ್ರೀತಿಯ ಬಾಂಧವರೇ. ಭಯೋತ್ಪಾದಕ ಕೃತ್ಯಗಳಲ್ಲಿ ನಿಮ್ಮವರು ಯಾಕೆ ತೊಡಗಿಸಿಕೊಂಡಿದ್ದಾರೆ ಎಂದು ಯಾವುದೇ ಮೌಲ್ವಿಯ ಬಳಿ ಹೋಗಿಕೇಳಿ. ಭಯೋತ್ಪಾದನೆಗೂ ನಮಗೂ ಸಂಬಂಧ ಇಲ್ಲ; ನಮ್ಮ ಪವಿತ್ರಗ್ರಂಥ ಅಂಥಾದ್ದನ್ನು ಬೆಂಬಲಿಸುವುದಿಲ್ಲ ಎಂದು ಹತ್ತಾರು ಸಾಲುಗಳನ್ನು ಈ ಮೌಲ್ವಿಗಳು ಉದ್ಧರಿಸುತ್ತಾರೆ. ಡ್ರಗ್ಸ್ ಜಾಲದಲ್ಲಿ ನಿಮ್ಮವರು ಯಾಕೆ ಇಷ್ಟೊಂದು ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಈ ಮೌಲ್ವಿಗಳಲ್ಲಿ ಕೇಳಿನೋಡಿ. ಡ್ರಗ್ಸ್ ಮಾರುವುದೂ, ಸೇವಿಸುವುದೂ ಹರಾಮ್ ಎಂದು ಮತ್ತೆ ಅದೇ ಪವಿತ್ರಗ್ರಂಥದಿಂದ ಮತ್ತಷ್ಟು ಸಾಲುಗಳನ್ನು ಹೆಕ್ಕಿ ನಮ್ಮ ಮುಂದೆ ಹಿಡಿಯುತ್ತಾರೆ. ಹಾಗಾದರೆ ಈ ಹರಾಮ್ ಕೆಲಸ ಮಾಡಿದ ಹರಾಮಕೋರರ ಮೇಲೆ ನೀವೇಕೆ ಫತ್ವಾ ಹೊರಡಿಸುವುದಿಲ್ಲ ಸ್ವಾಮಿ? ಎನ್ನಿ! ಉತ್ತರವಿಲ್ಲ! ಯಾವಳೋ ಹುಬ್ಬು ಎತ್ತರಿಸಿದ್ದರಿಂದ ಪ್ರಾರ್ಥನೆಗೆ ಏಕಾಗ್ರತೆ ನಿಲ್ಲಲಿಲ್ಲ ಎಂದು ಫತ್ವಾ ಹೊರಡಿಸಿ ಆ ನಿಷ್ಪಾಪಿಯನ್ನು ಗೋಳುಹುಯ್ದುಕೊಂಡವರು, ಅಲ್ಲಾಹು ಅಕ್ಬರ್ ಎಂದು ನಿಮ್ಮದೇ ದೇವರ ಹೆಸರು ಹೇಳಿಕೊಂಡು ನೂರಾರು ಜನರ ಜೀವ ತೆಗೆವ ಭಯೋತ್ಪಾದಕರ ವಿರುದ್ಧ ಯಾಕೆ ಇದುವರೆಗೆ ಒಂದೇ ಒಂದು ಫತ್ವಾ ಹೊರಡಿಸಿಲ್ಲ? ಮಂಗಳೂರು, ಬಂಟ್ವಾಳಗಳ ಪರಿಸರದಲ್ಲಿ ಇದುವರೆಗೆ ಸಿಕ್ಕಿಬಿದ್ದಿರುವ ನೂರಾರು – ಅಲ್ಲ, ಸಾವಿರಾರು ಮಾದಕ ದ್ರವ್ಯ ವ್ಯಸನಿಗಳ ವಿರುದ್ಧ, ಮಾದಕ ವಸ್ತು ಮಾರಾಟಗಾರ ಮುಸ್ಲಿಮರ ವಿರುದ್ಧ ಯಾಕೆ ಇದುವರೆಗೆ ಯಾವುದೇ ಮೌಲ್ವಿಯ ಫತ್ವಾ ಬಂದಿಲ್ಲ?
ಇದನ್ನು ಬಹಳ ನೇರವಾಗಿ, ಸ್ಪಷ್ಟವಾಗಿ ಕೇಳಬೇಕಾಗಿದೆ. ಯಾಕೆಂದರೆ, ಈ ಮುಸ್ಲಿಮ್ ಬಾಂಧವರ ಡ್ರಗ್ಸ್ ಮಾಫಿಯಾಕ್ಕೆ ಬಲಿಯಾಗುತ್ತಿರುವುದು ಕೇವಲ ಮುಸ್ಲಿಮರಲ್ಲ; ಬದಲಿಗೆ ಹಿಂದೂಗಳು. ಜೈನರು. ಕ್ರಿಶ್ಚಿಯನ್ನರು. ದಲಿತರು. ಜಾತಿ-ಧರ್ಮಗಳ ಭೇದವಿಲ್ಲದೆ, ಹುಡುಗಿಯರು ಕೂಡ! ಇಂದು ಹೇಗೆ ಭಟ್ಕಳ ಎಂದರೆ ಸಾಕು, ಇಡೀ ದೇಶ ಅಲರ್ಟ್ ಆಗಿಬಿಡುತ್ತದೋ, ಹೇಗೆ ನಮ್ಮ ರಾಷ್ಟ್ರೀಯ ತನಿಖಾ ದಳ ಕೂಡ ಒಮ್ಮೆ ಮೈಮುರಿದೆದ್ದು ಕೂತುಬಿಡುತ್ತದೋ, ಅಂಥ ದೊಡ್ಡ ಹೆಸರನ್ನು ಬಂಟ್ವಾಳ ಡ್ರಗ್ಸ್ ಮಾಫಿಯಾದಲ್ಲಿ ಪಡೆಯಲು ಹೊರಟಿದೆ. ಕೇರಳ, ತಮಿಳುನಾಡು, ಆಂಧ್ರ ಮಾತ್ರವಲ್ಲ ದೂರದ ಕರಾಚಿಯಿಂದ ಕೂಡ ಇಲ್ಲಿಗೆ ಗಾಂಜಾ ಸಪ್ಲೈ ಆಗುತ್ತಿದೆ ಎಂಬುದನ್ನು ಇಲ್ಲಿಯ ಇಂಟೆಲಿಜೆನ್ಸ್‍ನವರು ಹೇಳುತ್ತಿದ್ದಾರೆ. ದೂರದ ಊರುಗಳಿಂದ ರೈಲುಬಂಡಿಗಳಲ್ಲಿ, ಕಾರು-ಟ್ರಕ್ಕಿನಂಥ ವಾಹನಗಳಲ್ಲಿ, ಹಡಗಿನಲ್ಲಿ ಕೂಡ ಬಂದ ಮಾಲು ಕೇರಳ ಮೂಲಕ ಭಾರತಕ್ಕೆ ಬಂದಿಳಿದು ನಂತರ ಕರ್ನಾಟಕ, ತಮಿಳುನಾಡು ಸೇರುತ್ತಿದೆ. ಹಾಗೆ ಕೇರಳದಿಂದ ಹೊರಟ ಮಾಲು ಕರ್ನಾಟಕಕ್ಕೆ ಪ್ರವೇಶವಾಗಬೇಕಾದ್ದೇ ಬಂಟ್ವಾಳದ ಮೂಲಕ. ಕೇರಳದ ಉಪ್ಪಳದಿಂದ ಬಾಯಾರು ಮಾರ್ಗವಾಗಿ ಗಡಿದಾಟಿ ಈಚೆ ಬಂದ ಗಾಂಜಾ ನಂತರ ಬಂಟ್ವಾಳದಿಂದ ನೇರವಾಗಿ ಮಂಗಳೂರಿಗೆ ಬರುತ್ತದೆ. ಅಲ್ಲಿಂದ ಮಣಿಪಾಲ, ಕಾರವಾರ, ಚಿಕ್ಕಮಗಳೂರು, ಶಿವಮೊಗ್ಗ ಎನ್ನುತ್ತ ಹರಡಿಕೊಂಡುಹೋಗಿ ಕೊನೆಗೆ ಗೋವೆಯವರೆಗೂ ತನ್ನ ಕಬಂಧಬಾಹುಗಳನ್ನು ಚಾಚಿಕೊಳ್ಳುತ್ತದೆ. ಈ ಇಡೀ ಜಾಲದ ದಿಡ್ಡಿಬಾಗಿಲಿನಂತೆ ಕೆಲಸ ಮಾಡುತ್ತಿರುವುದು ಬಂಟ್ವಾಳ. ಇಲ್ಲಿನ ವಿಟ್ಲ, ಕನ್ಯಾನದ ಠಾಣೆಗಳ ಪೊಲೀಸರಿಗೆ ದಿನಬೆಳಗಾದರೆ ಡ್ರಗ್ಸ್ ಮಾಫಿಯಾದ ಜಾಲ ಭೇದಿಸುವುದೇ ನಿತ್ಯಕೆಲಸವಾಗಿಬಿಟ್ಟಿದೆ. ಕಾಲೇಜು ಕಟ್ಟೆಗಳು, ರಿಕ್ಷಾ ಸ್ಟ್ಯಾಂಡುಗಳು, ವಿದ್ಯಾಸಂಸ್ಥೆಗಳ ಆಸುಪಾಸಿನಲ್ಲಿರುವ ಸಿಗರೇಟಿನ ಪೆಟ್ಟಿಯಂಗಡಿಗಳು ಎಲ್ಲವೂ ಡ್ರಗ್ಸ್ ಮಾರುವ, ಕೊಳ್ಳುವ ಅಡ್ಡೆಗಳಾಗಿ ರೂಪುಗೊಳ್ಳುತ್ತಿವೆ. ಸಿಕ್ಕಿಬಿದ್ದ ಒಬ್ಬೊಬ್ಬನ ಕೈಯಲ್ಲೂ ಸಿಗುತ್ತಿರುವುದು ಗ್ರಾಮ್‍ಗಳ ಲೆಕ್ಕದಲ್ಲಲ್ಲ, ಕೆಜಿಗಟ್ಟಲೆ ಗಾಂಜಾ! ಹಾಲು ಕೊಡುವ ಹಸುವಿಗೆ ಬೈಹುಲ್ಲು ಕಟ್ಟಿಕೊಂಡು ಹೊರಟಂತೆ, ಗಾಂಜಾ ವ್ಯಾಪಾರಿಗಳು ಹತ್ತಾರು – ನೂರಾರು ಪ್ಯಾಕೆಟ್ಟುಗಳಲ್ಲಿ ಗಾಂಜಾ ಎಲೆಗಳನ್ನು ತುಂಬಿಕೊಂಡು ಗಿರಾಕಿಗಳ ನಿರೀಕ್ಷೆಯಲ್ಲಿ ಕೂರುತ್ತಿದ್ದಾರೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯವರು ಸ್ವಲ್ಪ ಪ್ರಚಾರ ಕೊಟ್ಟರೆ, ಬಹುಶಃ ಇದುವರೆಗೆ ಮಾದಕ ದ್ರವ್ಯವನ್ನು ಹುಡುಕಿಕೊಂಡು ದೂರದ ಕುಲು-ಮನಾಲಿ, ಗೋವೆಗೆ ಹೋಗುತ್ತಿದ್ದ ವಿದೇಶೀಯರು ಇನ್ನು ಮುಂದೆ ತಮ್ಮ ಪ್ರವಾಸದ ನಕ್ಷೆಯಲ್ಲಿ ಬಂಟ್ವಾಳವನ್ನೇ ದೊಡ್ಡ ಗುರುತು ಮಾಡಿಟ್ಟುಕೊಳ್ಳಬಹುದು! ಬಂಟ್ವಾಳದ ಶಾಸಕ – ಸಚಿವ ರಮಾನಾಥ ರೈ ಏನು ಮಾಡುತ್ತಿದ್ದಾರೆ ಎಂಬುದು ಮಾತ್ರ ಯಕ್ಷಪ್ರಶ್ನೆ!
ನಿಮಗೆ ನೆನಪಿರಬಹುದು, ಕಳೆದ ವರ್ಷ ಮೇ 26ರಂದು ಕಲ್ಲಡ್ಕದಲ್ಲಿ ದೊಡ್ಡದೊಂದು ಕೋಮುಸಂಘರ್ಷ ಹುಟ್ಟಿ ಹಬ್ಬಿತು. ಎರಡೂ ಕೋಮಿನವರು ಎದುರಾ ಎದುರು ಎದೆಗೆದೆ ಗುದ್ದಿಕೊಂಡು ಬಡಿದಾಡಿದರು. ಎಂದಿನಂತೆ ಪ್ರಗತಿಪರ ಜೀವಪರ ಗಂಜಿಪಡೆ ಇದು ಕಲ್ಲಡ್ಕ ಪ್ರಭಾಕರ ಭಟ್ಟರ ಕುಮ್ಮಕ್ಕು, ಕೋಮುಸೌಹಾರ್ದ ಹಾಳು ಮಾಡುವುದಕ್ಕೆಂದೇ ನಡೆಸಿದ ಪಿತೂರಿ, ಕೇಸರಿಪಡೆಯ ಶಕ್ತಿಪ್ರದರ್ಶನ ಎಂದೆಲ್ಲ ಬೊಬ್ಬೆ ಹೊಡೆದದ್ದಾಯಿತು. ರಾಷ್ಟ್ರೀಯ ಮಟ್ಟದ ಸುದ್ದಿಮಾಧ್ಯಮದಲ್ಲೂ ಕಲ್ಲಡ್ಕ ಮಿಂಚಿತು. ಆ ಗಲಭೆಯೇನೋ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಸುದ್ದಿಯಾಯಿತು, ಸರಿ! ಆದರೆ, ಅದಾಗಿ ಮೂರು ವಾರಗಳಾಗುವಷ್ಟರಲ್ಲಿ, ಸರಿಯಾಗಿ ಹೇಳಬೇಕೆಂದರೆ ಜೂನ್ 18ನೇ ತಾರೀಖು, ದಕ್ಷಿಣ ಕನ್ನಡ ಜಿಲ್ಲೆಯ ಎಸ್‍ಪಿ ಭೂಷಣ್ ಗುಲಾಬ್‍ರಾವ್ ಬೊರಾಸೆಯವರು ಒಂದು ಹೇಳಿಕೆ ಕೊಟ್ಟರು. ಅದೇನೆಂದರೆ, ಕಲ್ಲಡ್ಕದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿದವರು ಬೇರಾರೂ ಅಲ್ಲ, ಮಾದಕದ್ರವ್ಯ ವ್ಯಸನಿಗಳು! ಆ ಗಲಭೆಯಲ್ಲಿ ಪೊಲೀಸರು ಹಿಡಿದ ಅಷ್ಟೂ ಮಂದಿಯೂ ಮಾದಕ ವಸ್ತುಗಳ ನಶೆಯಲ್ಲಿದ್ದರು. ಹೆಚ್ಚಿನವರಿಗೆ ತಾವೆಲ್ಲಿದ್ದೇವೆ, ಏನು ಮಾಡುತ್ತಿದ್ದೇವೆಂಬುದರ ಪರಿವೆಯೇ ಇರಲಿಲ್ಲ. ಬಂಟ್ವಾಳದ ಫರಂಗಿಪೇಟೆ ಮತ್ತು ಮಾರಿಪಳ್ಳದಲ್ಲಿ ವ್ಯಾಪಕವಾಗಿ ಗಾಂಜಾ ಮಾರಾಟವಾಗುತ್ತಿದೆ; ನೂರಾರು ಯುವಕರು ಇದರ ವ್ಯಸನಕ್ಕೆ ಬಿದ್ದಿದ್ದಾರೆ; ಜಾಲವನ್ನು ಬಗ್ಗುಬಡಿಯಲು ಸಾಧ್ಯವಾದ ಮಟ್ಟಿಗೆ ಪ್ರಯತ್ನಿಸುತ್ತಿದ್ದೇವೆ ಎಂದರು ಸ್ವತಃ ಪೊಲೀಸ್ ಅಧಿಕಾರಿಗಳೇ! ಜೊತೆಗೆ, ದಕ್ಷಿಣ ಕನ್ನಡದಲ್ಲಿ ಸುರತ್ಕಲ್, ಕಾವೂರು, ಪಣಂಬೂರು, ಬಜ್ಪೆಗಳಲ್ಲಿ ಕೂಡ ಡ್ರಗ್ಸ್ ಮಾಫಿಯಾ ದೊಡ್ಡ ಮಟ್ಟದಲ್ಲಿ ಕೆಲಸಮಾಡುತ್ತಿದೆ. ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಂದ ಈ ಜಾಗಗಳಿಗೆ ಗಾಂಜಾ ಸಪ್ಲೈ ಆಗುತ್ತಿದೆ ಎಂಬ ಸಂಗತಿಯನ್ನೂ ಪೊಲೀಸರು ಬಿಚ್ಚಿಟ್ಟರು.
2016ರ ಏಪ್ರಿಲ್ ತಿಂಗಳಲ್ಲಿ ಉಳ್ಳಾಲದ ಮೊಗವೀರ ಪಟ್ನ ಎಂಬಲ್ಲಿ ಮೊಗವೀರ ಸಮುದಾಯಕ್ಕೆ ಸೇರಿದ ಬೆಸ್ತನೊಬ್ಬನನ್ನು ಮೂರ್ನಾಲ್ಕು ಯುವಕರ ತಂಡ ಮುತ್ತಿಗೆ ಹಾಕಿ ಕೊಂದ ಪ್ರಕರಣವೊಂದು ದಾಖಲಾಗಿತ್ತು. ಆ ಹುಡುಗರು ಆತನನ್ನು ಕೊಲೆ ಮಾಡುವ ಸಮಯದಲ್ಲಿ ಮಾದಕ ದ್ರವ್ಯದಿಂದ ಉನ್ಮತ್ತ ಸ್ಥಿತಿಯಲ್ಲಿದ್ದರು ಎಂಬುದು ನಂತರ ಪೊಲೀಸ್ ತನಿಖೆಯಲ್ಲಿ ತಿಳಿದುಬಂತು. ಹಾಗೆಯೇ 2016ರ ಆಗಸ್ಟ್ 19ರಂದು ವಾಮಂಜೂರಿನಲ್ಲಿ ಒಬ್ಬ ರೌಡಿಶೀಟರ್‍ನನ್ನು ಆತನ ಹೆಂಡತಿ ಮತ್ತು ಎರಡು ವರ್ಷದ ಮಗುವಿನ ಎದುರಲ್ಲೇ ಬರ್ಬರವಾಗಿ ಕೊಚ್ಚಿ ಕೊಲ್ಲಲಾಗಿತ್ತು. ಕೊಂದ ಅಷ್ಟೂ ಪಾತಕಿಗಳು ಗಾಂಜಾದ ಉನ್ನತ ನಶೆಯಲ್ಲಿದ್ದವರು. ಫೆಬ್ರವರಿ 2017ರಲ್ಲಿ, ಇದೇ ಮಂಗಳೂರಲ್ಲಿ ಹಲವು ಯುವಕರು ತಮ್ಮದೇ ನಡುವಿನ ಹುಡುಗನೊಬ್ಬನನ್ನು ಬಲಾತ್ಕಾರವಾಗಿ ಬೆತ್ತಲೆಗೊಳಿಸಿ ವಿಡಿಯೋ ಚಿತ್ರೀಕರಿಸಿ ನಂತರ ಆ ಚಿತ್ರಿಕೆ ಬಳಸಿಕೊಂಡು ಬ್ಲ್ಯಾಕ್‍ಮೇಲ್ ಮಾಡುತ್ತ ದುಡ್ಡು ಪೀಕಲು ಪ್ರಾರಂಭಿಸಿದ್ದರು. ಅವರು ಹಾಗೆ ಪಡೆಯುತ್ತಿದ್ದ ದುಡ್ಡೆಲ್ಲವೂ ಹೋಗುತ್ತಿದ್ದದ್ದು ಗಾಂಜಾದ ಅಮಲಿಗೆ; ಮಾರಿವಾನ ಮಾರುವ ಏಜೆಂಟನಿಗೆ. ಗಾಂಜದ ರಕ್ತಸಿಕ್ತ ಇತಿಹಾಸದಲ್ಲಿ ತೀರ ಇತ್ತೀಚಿನ ಪುಟ ಝುಬೇರ್‍ನದ್ದು. ಕಳೆದ ವರ್ಷದ ಅಕ್ಟೋಬರ್ 4ರ ರಾತ್ರಿ ಉಳ್ಳಾಲದ ಮುಕ್ಕಚೇರಿಯಲ್ಲಿ ಹೆಣವಾಗಿ ಮಲಗಿದ ಝುಬೇರ್‍ನ ಮೇಲೆ ಇದ್ದ ರಕ್ತದ ಕೈಗಳು ಅದೇ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಇಲ್ಯಾಸ್‍ನದ್ದು. ಈತ ಸಚಿವ ಖಾದರ್‍ರ ಖಾಸಾದೋಸ್ತನೂ ಹೌದು. ತನ್ನ ಗಾಂಜಾಸಾಮ್ರಾಜ್ಯದ ಗುಟ್ಟುಗಳನ್ನೆಲ್ಲ ಝುಬೇರ್ ಯಾವಾಗ ಖುಲ್ಲಂಖುಲ್ಲಾ ಬಯಲುಗೊಳಿಸಿ ತನ್ನ ಅಸ್ತಿತ್ವವನ್ನೇ ಅಲುಗಾಡಿಸುವ ಬೆದರಿಕೆ ಒಡ್ಡಿದನೋ ಅಂದೇ ಅವನನ್ನು ಮುಗಿಸಲು ಟಾರ್ಗೆಟ್ ಗ್ರೂಪ್ ಕಟ್ಟಿಕೊಂಡಿದ್ದ ಇಲ್ಯಾಸ್ ಸ್ಕೆಚ್ ಹಾಕಿದ. ತನ್ನ ಗಾಂಜಾ ವ್ಯವಹಾರಗಳನ್ನು ನಿರಾತಂಕದಿಂದ ನಡೆಸಿಕೊಂಡುಹೋಗುವ ಉದ್ದೇಶದಿಂದ ತನ್ನದೇ ಕುಲಬಾಂಧವನ ಕತ್ತಿಗೆ ಕತ್ತಿಯಾಡಿಸಿಬಿಟ್ಟ.
ಸ್ವಾರಸ್ಯವೆಂದರೆ ಬಂಟ್ವಾಳದಲ್ಲಿ ಚಿಗುರಿಹಬ್ಬುತ್ತಿರುವ ಗಾಂಜಾ ಜಾಲ ಒಂದು ಸಮಸ್ಯೆ ಎಂದು ಇನ್ನೂ ಯಾವ ರಾಜಕೀಯ ನಾಯಕನಿಗೂ ಅನ್ನಿಸಿಯೇ ಇಲ್ಲ! ಪೊಲೀಸ್ ಇಲಾಖೆಯಲ್ಲಿರುವ ಕೆಲವು ವರದಿಗಳನ್ನು ನೋಡಿದ್ದರೂ ಸಾಕಿತ್ತು, ಈ ರಾಜಕಾರಣಿಗಳಿಗೆ ಸಮಸ್ಯೆಯ ಬೃಹದ್ರೂಪ ಅನುಭವಕ್ಕೆ ಬರುತ್ತಿತ್ತು. 2014ರಲ್ಲಿ ಕರಾವಳಿ ಪ್ರದೇಶದಲ್ಲಿ ಮಾದಕ ದ್ರವ್ಯ ಜಾಲ/ಮಾರಾಟ/ಸೇವನೆ ವಿಷಯದಲ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳು 21. ಬಂಧನಕ್ಕೊಳಗಾದವರು 12 ಮಂದಿ. ಆ ವರ್ಷ ಪೊಲೀಸರು ವಶಪಡಿಸಿಕೊಂಡದ್ದು 11.9 ಕೆಜಿ ಗಾಂಜ. ಅದರ ಮರುವರ್ಷ, 2015ರಲ್ಲಿ, ಪ್ರಕರಣಗಳ ಸಂಖ್ಯೆ 49ಕ್ಕೆ ಏರಿತು. ಬಂಧನಕ್ಕೊಳಗಾದವರ ಸಂಖ್ಯೆ 43 ಆಯಿತು. ವಶ ಸಿಕ್ಕಿದ ಗಾಂಜ 16.12 ಕೆಜಿ. ಅದೇ ವರ್ಷದಲ್ಲಿ, ಪೊಲೀಸರು ಗಾಂಜದ ಜೊತೆ ಎಲ್‍ಎಸ್‍ಡಿ ಎಂಬ ಇನ್ನೊಂದು ರಾಸಾಯನಿಕ ಮಾದಕದ್ರವ್ಯದ ಬೇಟೆಗೂ ಇಳಿದರು. 10 ಲಕ್ಷ ರುಪಾಯಿ ಮೌಲ್ಯದ ಎಲ್‍ಎಸ್‍ಡಿಯನ್ನು ಪೊಲೀಸರು ಕರಾವಳಿಯಲ್ಲಿ ಒಂದೇ ವರ್ಷದಲ್ಲಿ ಪತ್ತೆಹಚ್ಚಿದರು! 2016ರ ಮೊದಲ ಆರು ತಿಂಗಳಲ್ಲಿ, ಕರಾವಳಿಯಲ್ಲಿ ಪೊಲೀಸರು ಮಾದಕ ದ್ರವ್ಯದ ವಿಷಯದಲ್ಲಿ ದಾಖಲಿಸಿಕೊಂಡ ಪ್ರಕರಣಗಳ ಸಂಖ್ಯೆ ಇದ್ದಕ್ಕಿದ್ದಂತೆ 136ಕ್ಕೆ ಏರಿತು! ಬಂಧಿಸಲ್ಪಟ್ಟವರ ಸಂಖ್ಯೆ 173! ವಶಪಡಿಸಿಕೊಂಡ ಗಾಂಜದ ಪ್ರಮಾಣ ಬರೋಬ್ಬರಿ 84.6 ಕೆಜಿ! ನೆನಪಿಡಿ: ಇದು ಕೇವಲ ಅರ್ಧ ವರ್ಷದ ಲೆಕ್ಕ! ಅಂದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲಿನ ನಾಲ್ಕು ವರ್ಷಗಳಲ್ಲಿ ಡ್ರಗ್ಸ್‍ಗೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ 700% ವೇಗದಲ್ಲಿ ಬೆಳೆದಿದೆ! ಬಂಟ್ವಾಳ, ಮಂಗಳೂರು ಪ್ರದೇಶಗಳು ದಿನಹೋದಂತೆ ಸೂಕ್ಷ್ಮವಾಗುತ್ತಿವೆ. ಡ್ರಗ್ಸ್ ಮಾಫಿಯಾದ ಕೇಂದ್ರಬಿಂದುಗಳಾಗುತ್ತಿವೆ. ಕೋಮುಸೌಹಾರ್ದವನ್ನು ಕದಡಿಸುವ ಎಲ್ಲ ಗಲಭೆ-ಗಲಾಟೆಗಳಿಗೂ ಹಿನ್ನೆಲೆಯಾಗಿ ಕೆಲಸ ಮಾಡುತ್ತಿವೆ. ಇದನ್ನು ಹೇಳುತ್ತಿರುವುದು ನಮ್ಮ ನಿಮ್ಮಂಥ ಜನಸಾಮಾನ್ಯರಲ್ಲ, ಪೊಲೀಸ್ ಇಲಾಖೆಯ ವರದಿಗಳು!
ಲವ್ ಜೆಹಾದ್‍ಗಿಂತ ಹತ್ತುಪಟ್ಟು ವೇಗದಲ್ಲಿ – ಕರಾವಳಿ ಮತ್ತು ಮಲೆನಾಡಲ್ಲಿ ಹಬ್ಬುತ್ತಿದೆ – ಲ್ಯಾಂಡ್ ಜೆಹಾದ್. ಅಂದರೆ ಒಂದು ದೊಡ್ಡ ಭೂಪ್ರದೇಶವನ್ನು ದೊಡ್ಡ ಮೊತ್ತ ಕೊಟ್ಟು ಖರೀದಿಸಿ, ಅಲ್ಲಿ ನಾಲ್ಕೂ ಕಡೆ ಬೇಲಿ ಹಾಕಿ, ಒಳಗೆ ಬಾಂಗ್ಲಾ ಮುಸ್ಲಿಮರನ್ನೂ ಕೇರಳದ ಮಾಪಿಳ್ಳೆಗಳನ್ನೂ ಬಿಟ್ಟುಕೊಂಡು ಹೊರಜಗತ್ತಿಗೆ ಅಲ್ಲೇನು ನಡೆಯುತ್ತಿದೆ ಎಂಬುದೇ ತಿಳಿಯದಂತೆ ನಡೆಸುವ ವ್ಯವಹಾರ. ಬಾಂಗ್ಲಾ ಮುಸ್ಲಿಮರಂತೂ ಕರಾವಳಿಯಲ್ಲಿ ಅಪಾಯಕಾರೀ ಮಟ್ಟದಲ್ಲಿ ಏರುತ್ತಿದ್ದಾರೆ. ಆಳೆತ್ತರ ಬೇಲಿ ಎಬ್ಬಿಸಿದ ಈ ಎಕರೆಗಟ್ಟಲೆ ಜಮೀನುಗಳಲ್ಲಿ ಏನು ಮಾಡುತ್ತಾರೆ, ಏನು ಬೆಳೆಯುತ್ತಾರೆ ಎಂಬುದೆಲ್ಲ ಹೊರಗಿನ ಜಗತ್ತಿಗೆ ಅಸ್ಪಷ್ಟ. ಬೆಳ್ತಂಗಡಿಯ ಚಾರ್ಮಾಡಿ ಘಾಟಿ ಭಾಗ, ಸೂಜಿಗುಡ್ಡೆ, ಜೇನುಕಲ್ಲು, ಬಿದಿರುತಳ, ಆನೆಗುಂಡಿ, ಕೋಡೆಕಲ್ಲು ಮುಂತಾದ ಜಾಗಗಳಲ್ಲಿ ಲ್ಯಾಂಡ್ ಜೆಹಾದ್ ಅಣಬೆಯಂತೆ ಹರಡುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ. ಇಲ್ಲೆಲ್ಲ ಗಾಂಜ ಬೆಳೆ ಹುಲುಸಾಗಿ ಬೆಳೆಯುತ್ತದೆ ಎಂಬ ಗುಮಾನಿಯೂ ಇದೆ. ನಕ್ಸಲರನ್ನು ಹಿಡಿಯಲು ಕೂಂಬಿಂಗ್ ಮಾಡಿದಂತೆ ಗಾಂಜಾ ಬೆಳೆ ಪತ್ತೆಹಚ್ಚಲು ಕಾರ್ಯಾಚರಣೆ ಮಾಡಲು ಪೊಲೀಸರೇ ಹೆದರುವಂಥ ಸ್ಥಿತಿ ಕೆಲವು ಭಾಗಗಳಲ್ಲಿದೆ ಎಂಬುದೂ ಆ ಪ್ರದೇಶದ ಎಲ್ಲರಿಗೆ ಗೊತ್ತಿರುವ ಸತ್ಯ.
ಒಂದಾನೊಂದು ಕಾಲದಲ್ಲಿ ಭಾರತ-ಪಾಕ್ ಗಡಿರೇಖೆಯ ಆಚೆ ನಿಂತ ಪಾಕ್ ಸೈನಿಕರು ಮಾದಕ ದ್ರವ್ಯಗಳ ಪೊಟ್ಟಣಗಳನ್ನು ಬೊಗಸೆ ತುಂಬ ಹಿಡಿದು ಈಚೆ – ಭಾರತದ ನೆಲದಲ್ಲಿ ಎಸೆಯುತ್ತಿದ್ದರಂತೆ. ಅದರ ಪರಿಣಾಮವೇ ಇಂದು ಪಂಜಾಬ್, ದೇಶದ ವ್ಯಸನ ರಾಜ್ಯವಾಗಿ ಮಾರ್ಪಟ್ಟಿದೆ. ಅದೇ ತಂತ್ರದ ಮುಂದುವರಿಕೆಯಂತೆ ಇಂದು, ಶಿಕ್ಷಣ ಕಾಶಿಯೆಂದು ಕರೆಸಿಕೊಂಡ ಕರಾವಳಿಯುದ್ದಕ್ಕೂ ಡ್ರಗ್ಸ್ ಮಾಫಿಯಾ ಕೊಡೆಬಿಚ್ಚಿದೆ. ಎಚ್ಚೆತ್ತುಕೊಳ್ಳದೆ ಹೋದರೆ ಇದರ ಉಗ್ರಪರಿಣಾಮವನ್ನು ಇನ್ನೊಂದು ದಶಕದಲ್ಲಿ ನಾವು ನೋಡಲಿದ್ದೇವೆ, ಅನುಭವಿಸಲಿದ್ದೇವೆ ಕೂಡ. ಮಾದಕ ಜಾಲದ ವಿಷಯದಲ್ಲಿ ಈಗ ಶಿಕ್ಷಣ ಸಂಸ್ಥೆಗಳೂ ಪೋಷಕರೂ ಸಂಘಟಿತರಾಗಿ ಜಾಗೃತರಾಗಬೇಕಾದ ಸಮಯ.
Leave A Reply