ಸ್ತ್ರೀ ಶಕ್ತಿಯ ಅನಾವರಣ, ವಿಶ್ವದಲ್ಲೇ ಹೆಚ್ಚು ಮಹಿಳಾ ಪೈಲೆಟ್ ಗಳಿರುವುದು ಭಾರತೀಯ ವಾಯುಪಡೆಯಲ್ಲಿ
ದೆಹಲಿ: ಭಾರತದಲ್ಲಿ ಮಹಿಳೆಯರು ವಿಶ್ವಕ್ಕೆ ಮಾದರಿಯಾಗುವಂತ ಕಾರ್ಯಗಳನ್ನು ಮಾಡುವಂತ ಕ್ಷಮತೆ ಹೊಂದಿರುವವರು. ಅವರಿಗೆ ಸೂಕ್ತ ಪ್ರೋತ್ಸಾಹ ಬೆಂಬಲ ದೊರೆತರೇ ಎಂತಹದ್ದೇ ಸಂದರ್ಭವನ್ನು ಸೂಕ್ತ ರೀತಿಯಲ್ಲಿ ಎದುರಿಸಿ, ವಿಜಯಶಾಲಿಗಳಾಗಬಹುದು ಎಂಬುದನ್ನೆ ಪದೇ ಪದೆ ಸಾಬೀತು ಪಡೆಸುತ್ತಿದ್ದಾರೆ. ಇದೀಗ ಭಾರತೀಯ ವಾಯುಪಡೆಯಲ್ಲಿ ಭಾರತೀಯರ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದು, ಭಾರತೀಯ ವಾಯು ಪಡೆಯಲ್ಲಿ ಅತಿ ಹೆಚ್ಚು ಮಹಿಳಾ ಪೈಲಟ್ ಗಳು ಕಾರ್ಯ ನಿರ್ವಹಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಭಾರತೀಯ ರಕ್ಷಣಾ ಕ್ಷೇತ್ರದಲ್ಲಿ ಮಹಿಳೆಯರು ಸಕ್ರೀಯವಾಗಿದ್ದು, ಹೆಚ್ಚು ಮಹಿಳೆಯರೂ ಸೈನ್ಯದಲ್ಲಿ ಸಕ್ರಿಯವಾಗಿದ್ದಾರೆ. ವಾಯುಪಡೆಯಲ್ಲಿ ಅತಿ ಹೆಚ್ಚು ಮಹಿಳೆಯರು ಕಾರ್ಯ ನಿರ್ವಹಿಸುವ ದೇಶಗಳಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದ್ದು, ಈ ಮೂಲಕ ವಿಶ್ವದ ಗಮನ ಸೆಳೆದಿದೆ ಎಂದು ಕೇಂದ್ರ ಸಚಿವ ಜಯಂತ್ ಸಿನ್ಹಾ ತಿಳಿಸಿದ್ದಾರೆ.
ಭಾರತೀಯ ವಾಯುಪಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಶಕ್ತಿ ಸಾಮರ್ಥ್ಯ ಉಪಯೋಗಿಸಿ ದೇಶದ ರಕ್ಷಣಾ ವ್ಯವಸ್ಥೆಗೆ ಬಲ ನೀಡಿದ್ದಾರೆ. ಅವರ ರಕ್ಷಣೆಯನ್ನು ದೇಶ ಮಾಡಲಿದೆ ಎಂದು ಸಿನ್ಹಾ ಹೇಳಿದ್ದಾರೆ.
ವಾಯುಪಡೆಯಲ್ಲಿ ಅತಿ ಹೆಚ್ಚು ಮಹಿಳೆಯರು ಕಾರ್ಯನಿರ್ವಹಿಸುತ್ತಿರುವುದು ವಾಯುಪಡೆಯ ಕಾರ್ಯಕ್ಷಮತೆಯೂ ಹೆಚ್ಚಿದೆ ಎಂದು ಮಹಿಳಾ ಪೈಲಟ್ ಗಳ ಸಂಘದ ಸುವರ್ಣ ಮಹೋತ್ಸದಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದಲ್ಲದೇ, ಇತ್ತೀಚೆಗೆ ಮಿಗ್ 21 ವಿಮಾನವನ್ನು ಚಲಿಸುವ ಮೂಲಕ ವಿಶ್ವದ ಗಮನ ಸೆಳೆದ ಅವನಿ ಚತುರ್ವೇಧಿ ಅವರ ಕಾರ್ಯವನ್ನು ಸ್ಮರಿಸಿದರು.
Leave A Reply