ಅರಸೊತ್ತಿಗೆ ಅಳಿದರೂ ಅಮರರಾದ ಮೈಸೂರು ಅರಸರೆಲ್ಲಿ, ಅಧಿಕಾರದಲ್ಲಿರುವಾಗಲೇ ಬೇಸರ ತಂದ ಸಿದ್ದರಾಮಯ್ಯ ಎಲ್ಲಿ?
ಮೈಸೂರು ಅರಸರ ಕೊಡುಗೆ…
ಮೈಸೂರು ಅರಮನೆ ನಿರ್ಮಾಣ
ಮೈಸೂರು ವಿಶ್ವವಿದ್ಯಾಲಯ
ಕೃಷ್ಣರಾಜ ಸಾಗರ ಅಣೆಕಟ್ಟು
ಮೈಸೂರು ಬ್ಯಾಂಕ್
ಕನ್ನಡದ ಏಳಿಗೆಗೆ ಕನ್ನಡ ಸಾಹಿತ್ಯ ಪರಿಷತ್
ಮೈಸೂರು ಸ್ಯಾಂಡಲ್ ಸಾಬೂನು ಫ್ಯಾಕ್ಟರಿ
ಕೋಲಾರ ಚಿನ್ನದ ಗಣಿ ಆರಂಭ
ಬೆಂಗಳೂರು ಸೆಂಟ್ರಲ್ ಕಾಲೇಜು
ಮಹಾರಾಜಾ ಕಾಲೇಜು…
ಸಿದ್ದರಾಮಯ್ಯನವರ ಸಾಧನೆ
3500 ರೈತರ ಆತ್ಮಹತ್ಯೆ
22ಕ್ಕೂ ಅಧಿಕ ಹಿಂದೂಗಳ ಹತ್ಯೆ
ಗೌರಿಲಂಕೇಶ್, ಎಂ.ಎಂ.ಕಲಬುರ್ಗಿ ಹತ್ಯೆ
ಲೋಕಾಯುಕ್ತ ನಿರ್ನಾಮ
ಹದಗೆಟ್ಟ ಕಾನೂನು ಸುವ್ಯವಸ್ಥೆ
ಅಪರಾಧ ಪ್ರಕರಣದಲ್ಲಿ ರಾಜ್ಯದ ಶ್ರೇಯಾಂಕ 2 (ದಕ್ಷಿಣ ಭಾರತ)
ದಕ್ಷ ಅಧಿಕಾರಿಗಳಿಗೆ ವರ್ಗಾವಣೆಯ ಶಿಕ್ಷೆ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತೊಂದು ಪ್ರಮಾದ, ಅಜ್ಞಾನದ ಘೋಷಣೆಯೊಂದನ್ನು ಮಾಡಿಕೊಳ್ಳುವ ಮೂಲಕ ರಾಜ್ಯದ ಜನರಿಂದ ಟೀಕೆಗೊಳಗಾಗುತ್ತಿದ್ದಾರೆ. ಅಷ್ಟೇ ಏಕೆ, ಮೈಸೂರು ಅರಸ ಯದುವೀರರೇ ಮೈಸೂರು ಅರಸರ ಸಾಧನೆ ಜನರಿಗೆ ಗೊತ್ತು ಎನ್ನುವ ಮೂಲಕ ಸಿದ್ದರಾಮಯ್ಯನವರಿಗೆ ಸರಿಯಾಗಿಯೇ ಛಾಟಿ ಬೀಸಿದ್ದಾರೆ.
ಖಂಡಿತವಾಗಿಯೂ ಒಬ್ಬ ನಾಯಕ ಇನ್ನೊಬ್ಬ ನಾಯಕನಿಗೆ ಹೋಲಿಸಿಕೊಳ್ಳುವುದು ತಪ್ಪಲ್ಲ. ಆದರೆ ಹಾಗೆ ಹೋಲಿಸಿಕೊಳ್ಳುವ ಮುನ್ನ ಅವರ ಸಮಾನರು ನಾವೇ? ನಾವು ರಾಜ್ಯಕ್ಕೆ ಮಾಡಿರುವುದು ಏನು? ನಾವು ಕಡಿದು ಕಟ್ಟೆ ಹಾಕಿರುವುದು ಏನು? ಇದಕ್ಕೆ ನಾವೆಷ್ಟು ಯೋಗ್ಯರು ಎಂದು ಯೋಚಿಸುವುದು ಬೇಡವೇ?
ಹೀಗೆ ಹಿಂದೆ ಮುಂದೆ ಯೋಚಿಸಿದೆ ನಾಲಿಗೆ ಹರಿಬಿಟ್ಟರೆ ಏನಾಗುತ್ತದೆ ಎಂದರೆ, ಅದಕ್ಕೆ ಸಿದ್ದರಾಮಯ್ಯನವರೇ ಸಾಕ್ಷಿ. ಹೌದು. ಮಾತಿನ ಭರದಲ್ಲಿ ಅಥವಾ ಉದ್ದೇಶಪೂರ್ವಕವಾಗಿಯೋ, ಮುಖ್ಯಮಂತ್ರಿ ಸಿದ್ದರಾಮಯ್ಯನವರು, ನಾನೂ ಮೈಸೂರು ಅರಸರಂತೆಯೇ ಉತ್ತಮವಾಗಿ ಆಡಳಿತ ನಡೆಸಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.
ಹಾಗಾದರೆ ಕರ್ನಾಕಟಕ್ಕೆ ಮೈಸೂರು ಅರಸರು ಎಷ್ಟು ಕೊಡುಗೆ ನೀಡಿದ್ದಾರೋ, ಅದರಷ್ಟೇ ಸಿದ್ದರಾಮಯ್ಯನವರು ನೀಡಿದ್ದಾರೆಯೇ? ಸಿದ್ದರಾಮಯ್ಯನವರ ಆಡಳಿತದಲ್ಲಿ ಶತಮಾನದಷ್ಟು ಆಡಳಿತ ನಡೆಸಿದ ಮೈಸೂರು ಅರಸರಷ್ಟು ಸುಧಾರಣೆಯಾಗಿದೆಯೇ? ಸಿದ್ದರಾಮಯ್ಯನವರು ಮಾಡಿಕೊಂಡ ಹೋಲಿಕೆ ಸರಿಯಾಗಿದೆಯೇ? ಹಾಗಾದರೆ ಯದುವೀರರೇಕೆ ಪರೋಕ್ಷವಾಗಿ ಸಿದ್ದರಾಮಯ್ಯರಿಗೆ ಟಾಂಗ್ ನೀಡಿದರು?
ನೀವೇ ಯೋಚನೆ ಮಾಡಿ, ಕೆಆರ್ ಎಸ್ ಅಣೆಕಟ್ಟು ಕಟ್ಟಿ ಲಕ್ಷಾಂತರ ರೈತರಿಗೆ ಬೆಳಕಾದ ಮೈಸೂರು ಅರಸರು ಎಲ್ಲಿ, 3500 ರೈತರು ಆತ್ಮಹತ್ಯೆ ಮಾಡಿಕೊಂಡರೂ ಕೇಂದ್ರ ಸರ್ಕಾರದತ್ತ ಬೆರಳು ತೋರಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿ?’
ಹಾಗೆ ಸುಮ್ಮನೆ ಯೋಚಿಸಿ, ಕನ್ನಡದ ಅಭಿವೃದ್ಧಿಗಾಗಿ ಕನ್ನಡ ಶಾಲೆ ತೆರೆದ, ಕನ್ನಡ ಸಾಹಿತ್ಯ ಪರಿಷತ್ ರಚಿಸಿ ಕನ್ನಡದ ಏಳಿಗೆಗೆ ನಿಂತ ಮೈಸೂರು ಅರಸರು ಎಲ್ಲಿ, ಕನ್ನಡ ಶಾಲೆ ಮುಚ್ಚಿಸಲು ಆದೇಶಿಸಿದ ಸಿಎಂ ಸಿದ್ದರಾಮಯ್ಯ ಎಲ್ಲಿ?
ಒಂದು ಸಲ ಯೋಚನೆ ಮಾಡಿ ನೋಡಿ, ವೈಜ್ಞಾನಿಕವಾಗಿ ಮೈಸೂರನ್ನು ನಿರ್ಮಿಸಿದ ಅರಸರು ಎಲ್ಲಿ, ಬೆಂಗಳೂರು ತುಂಬ ಕಸ ತುಂಬಿದರೂ ವಿಲೇವಾರಿ ಮಾಡಿಸದ, ರಸ್ತೆಗಳೆಲ್ಲ ಗುಂಡಿಗಳಿಂದ ತುಂಬಿದರೂ ಇತ್ತ ತಲೆ ಹಾಕದ ಸಿದ್ದರಾಮಯ್ಯ ಯಾವ ಸೀಮೆಯವರು?
ರಾಜ್ಯದ ನಾಗರಿಕನೇ ಯೋಚಿಸು, ಗಲ್ಲಿಗೊಂದು ಕೆರೆ, ಜಲಮೂಲಗಳ ಸಂರಕ್ಷಣೆ ಮಾಡಿದ ಮೈಸೂರು ಅರಸರಿಗೂ, ಬೆಳ್ಳಂದೂರು ಕೆರೆ ಹೊತ್ತಿ ಉರಿದ ಮೇಲೆ ಕೆರೆ ರಕ್ಷಣೆ ಮಾತನಾಡುವ ಸಿದ್ದರಾಮಯ್ಯನವರಿಗೂ ತಾಳಮೇಳ ಜೋಡಿಯಾಗುತ್ತದೆಯೇ?
ಪ್ರಬುದ್ಧ ನಾಗರಿಕರೇ ಒಮ್ಮೆ ಮಿದುಳಿಗೆ ಸಾಣೆ ಹಿಡಿಯಿರಿ, ಸರ್.ಎಂ.ವಿಶ್ವೇಶ್ವರಯ್ಯ, ದಿವಾನ್ ಪೂರ್ಣಯ್ಯ ಅವರಂತಹ ದಕ್ಷ ಆಡಳಿತಗಾರರನ್ನು ಪೋಷಣೆ ಮಾಡಿದ ಮೈಸೂರಿನ ಹೆಮ್ಮೆಯ ಅರಸು ಎಲ್ಲಿ, ದಕ್ಷ ಅಧಿಕಾರಿಗಳಿಗೆ ವರ್ಗಾವಣೆಯ ಶಿಕ್ಷೆ ನೀಡುವ ದರ್ಪದ ಸಿದ್ದರಾಮಯ್ಯನವರು ಎಲ್ಲಿ?
ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ, ದೇವಸ್ಥಾನ ನಿರ್ಮಾಣ, ಕೃತಿ ರಚನೆ, ಕಲೆ ಪೋಷಣೆಯಲ್ಲಿ ತೊಡಗಿದ್ದ ಮೈಸೂರು ಅರಸರು ಆಕಾಶದ ಸಮಾನ, ಮತಾಂಧ ಟಿಪ್ಪು ಜಯಂತಿ ಆಚರಿಸಿದ, ಲಿಂಗಾಯತ ಪ್ರತ್ಯೇಕ ಧರ್ಮದ ಪರ ಬ್ಯಾಟಿಂಗ್ ಮಾಡಿದ, ಒಂದೇ ಸಮುದಾಯದ ಪರ ಯೋಜನೆ ತಂದು ಒಡಕುಂಟು ಮಾಡಿದ, ಕಲ್ಲಡ್ಕದಲ್ಲಿ ಓದುತ್ತಿದ್ದ ಹಿಂದೂ ಮಕ್ಕಳ ಅನ್ನ ಕಿತ್ತುಕೊಂಡ ಸಿದ್ದರಾಮಯ್ಯ ಅರಸರ ಆಡಳಿತಕ್ಕೆ ಹೋಲಿಸಿದರೆ ತೃಣಸಮಾನ.
ಶತಮಾನದವರೆಗೆ ಒಂದು ಸಾಮ್ರಾಜ್ಯವನ್ನು ದಕ್ಷತೆಯಿಂದ ಆಳಿದ ಅರಸರಿಗೆ ಸರಿಸಮಾನರಾಗಿ, ಮೂರು ಮತ್ತೊಂದು ಭಾಗ್ಯ ಜಾರಿಗೊಳಿಸಿದ ಸಿದ್ದರಾಮಯ್ಯನವರು ಹೋಲಿಸಿಕೊಳ್ಳುತ್ತಾರೆಂದರೆ ಇವರ ಮನಸ್ಸಲ್ಲಿ ಎಷ್ಟು ದರ್ಪವಿರಬೇಕು? ಯದುವೀರರೇಕೆ ಸಿದ್ದರಾಮಯ್ಯರಿಗೆ ಪರೋಕ್ಷ ಛಾಟಿ ಬೀಸಿದ್ದಾರೆಂದು ಈಗ ಅರ್ಥವಾಯಿತಲ್ಲವೇ?
Leave A Reply