ಸಂಘದ ಕಾರ್ಯಕರ್ತ ರಾಜು ಹತ್ಯೆ ಆರೋಪಿ ಹಬೀಬ್ ಪಾಷಾ ಗಡಿಪಾರು ಆದೇಶ
ಮೈಸೂರು: ಮತಾಂದರ ಅಟ್ಟಹಾಸಕ್ಕೆ ಬಲಿಯಾಗಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ರಾಜು ಹತ್ಯೆಯಾಗಿ ಇತ್ತೀಚೆಗೆ ಎರಡು ವರ್ಷಗಳಾಗಿದೆ. ನಿಷ್ಠಾವಂತ ಕಾರ್ಯಕರ್ತರನ್ನು ಕಳೆದುಕೊಂಡ ದುಖಃದ ಮಧ್ಯೆ ಪ್ರಕರಣದ ಆರೋಪಿ ಹಬೀಬ್ ಪಾಷಾಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ವಿಷ್ಣುವರ್ಧನ ಹೇಳಿದ್ದಾರೆ.
ಆರೋಪಿ ಹಬೀಬ್ ಪಾಷಾನಿಗೆ ಆರು ತಿಂಗಳು ಮೈಸೂರು, ಮಂಡ್ಯ, ಹುಣಸೂರು, ಮಂಗಳೂರು ಹಾಗೂ ಚಾಮರಾಜ ನಗರ ಪ್ರವೇಶಕ್ಕೆ ನಿರ್ಬಂಧ ಹೇರಿ ಆದೇಶ ಹೊರಡಿಸಲಾಗಿದೆ. ಎಸ್‌ಡಿಪಿಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಹುಣಸೂರು ಮೂಲದ ಹಬೀಬ್, ಸುಮಾರು ಎಂಟು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.
ಆರೋಪಿಯನ್ನು ಗಡೀಪಾರು ಮಾಡಿ ಆದೇಶ ಹೊರಡಿಸಿದ ಬಳಿಕ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.
ಅದ್ದೂರಿ ಸ್ವಾಗತ ಮಾಡಲಾಗಿತ್ತು: ಗಡಿಪಾರಾಗಿರುವ ಹಬೀಬ್ ಪಾಶಾ ವಿರುದ್ದ ಹಲವು ಪ್ರಕರಣಗಳಿದ್ದು, ಆರ್.ಎಸ್.ಎಸ್.ಹಾಗು ಬಿಜೆಪಿ ಮುಖಂಡನ ಹತ್ಯೆ ಪ್ತಕರಣದಲ್ಲಿ ಇತ್ತೀಚೆಗಷ್ಟೆ ಜಾಮೀನು ಪಡೆದು ಬಿಡುಗಡೆಯಾಗಿದ್ದ. ಈ ವೇಳೆ ಈತನಿಗೆ ಅದ್ದೂರಿ ಸ್ವಾಗತ ದೊರೆತಿತ್ತು. ಅದ್ದೂರಿ ಸ್ವಾಗತ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
Leave A Reply