ಕಮ್ಯುನಿಸ್ಟರ ನಾಡಿನಲ್ಲಿ ಬಲವಾಗುತ್ತಿದೆ ಆರೆಸ್ಸೆಸ್, ವರ್ಷದಲ್ಲೇ 7000 ಸದಸ್ಯರ ಸೇರ್ಪಡೆ
ತಿರುವನಂತಪುರ: ದೇಶಾದ್ಯಂತ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಬಲವಾಗುತ್ತಿರುವ ಬೆನ್ನಲ್ಲೇ, ಕಮ್ಯುನಿಸ್ಟರ ನಾಡಾದ ಕೇರಳದಲ್ಲೂ ಆರೆಸ್ಸೆಸ್ ತನ್ನ ಸಂಘಟನೆಯ ವ್ಯಾಪ್ತಿಯನ್ನು ವಿಸ್ತರಿಸಿದೆ.
ಹೌದು, ಕೇರಳದಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರ ಮೇಲೆ ಕಮ್ಯುನಿಸ್ಟರು ಹಲ್ಲೆ, ಹತ್ಯೆ ನಡೆಸುತ್ತಿರುವ ನಡುವೆಯೂ ಆರೆಸ್ಸೆಸ್ ಬಲ ವ್ಯಾಪಿಸಿದೆ ಎಂದು ತಿಳಿದುಬಂದಿದ್ದು, ಒಂದೇ ವರ್ಷದಲ್ಲಿ ರಾಜ್ಯದಲ್ಲಿ 7000 ಸದಸ್ಯರ ನೋಂದಣಿಯಾಗಿದೆ.
ಈ ಕುರಿತು ಆರೆಸ್ಸೆಸ್ ಪ್ರಾಂತ ಕಾರ್ಯವಾಹ ಪಿ.ಗೋಪಾಲಕುಟ್ಟಿ ಮಾಹಿತಿ ನೀಡಿದ್ದು, ಕಳೆದ ಒಂದು ವರ್ಷದಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಸೇರ್ಪಡೆ ಸಂಖ್ಯೆಯಲ್ಲಿ ಶೇ.7ರಷ್ಟು ಜಾಸ್ತಿಯಾಗಿದ್ದು, ಸುಮಾರು 7 ಸಾವಿರಕ್ಕೂ ಅಧಿಕ ಸದಸ್ಯರ ನೋಂದಣಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ದಿನೇದಿನೆ ಆರೆಸ್ಸೆಸ್ ಬಲಗೊಳುತ್ತಿದ್ದು, ಪ್ರತಿದಿನ 3000 ಸಾವಿರ ಸ್ಥಳಗಳಲ್ಲಿ ಸುಮಾರು 4,105 ಶಾಖೆಗಳನ್ನು ನಡೆಸುತ್ತಿದೆ. “ಆರೆಸ್ಸೆಸ್ ಸೇರಿ” ಅಭಿಯಾನ ನಡೆಸುತ್ತಿದ್ದು, ತುಂಬ ಜನ ಬೆಂಬಲ ಸೂಚಿಸುತ್ತಿದ್ದಾರೆ. ಆಸಕ್ತಿ ಇರುವ ಎಲ್ಲರನ್ನೂ ಸಂಘಟನೆಗೆ ಸ್ವಾಗತಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಕಣ್ಣೂರಿನಂತಹ ಹಲವು ಸಿಪಿಎಂ ಪ್ರಾಬಲ್ಯವಿರುವ ಪ್ರದೇಶಗಳಲ್ಲೇ ನಮ್ಮ ಸಂಘಟನೆಯನ್ನು ಬಲಪಡಿಸಲಾಗುತ್ತಿದೆ. ಹಿಂದಿನಿಂದಲೂ ಸಿಪಿಎಂ ಕಾರ್ಯಕರ್ತರು ನಮ್ಮ ಮೇಲೆ ಹಲ್ಲೆ ಮಾಡಿದ್ದು, ಅದನ್ನು ತಡೆಯಲು ನಮ್ಮ ಸಂಘಟನೆ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
Leave A Reply