ಆಸ್ಪತ್ರೆ ಯಲ್ಲಿ ಕುಡುಕ ಡಾಕ್ಟರ್ ರಂಪಾಟ : ರೋಗಿಗಳು ಕಂಗಾಲ.
ಪುತ್ತೂರಿನ ಪ್ರಸಿದ್ದ ಮಾಹಾವೀರ ಆಸ್ಪತ್ರೆ ಯಲ್ಲಿ ಶನಿವಾರ ಸಾಯಂಕಾಲ ಕುಡುಕ ಡಾಕ್ಟರ್ ರೋಗಿಗಳ ಜೊತೆ ರಂಪಾಟ ಮಾಡಿ ಸೂಕ್ತ ಚಿಕಿತ್ಸೆಯೂ ನೀಡದೆ ಇರುವ ಸುದ್ದಿ ವರದಿಯಾಗಿದೆ.
ಘಟನೆಯ ವಿವರ: ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯ ಕೃಷ್ಣ ಎಲೆಕ್ಟ್ರಿಕ್ ಗುತ್ತಿಗೆದಾರ ಅಭಿಲಾಷ್ ಎನ್ನುವವರು ತನ್ನ ತಾಯಿ ತಾಯಿ ಅನಿತಾರವರನು ಕಾಲುನೊವಿನ ಕಾರಣಕ್ಕಾಗಿ ಮಧ್ಯಾಹ್ನ 2.30ಕ್ಕೆ ಮಹಾವೀರ ಆಸ್ಪತ್ರೆಗೆ ಕರೆಕೊಂಡು ಹೋಗಿದ್ದರು. ಆಸ್ಪತ್ರೆ ಯವರು ಮಧ್ಯಾನ 2:30 ರಿಂದ ಸಾಯಂಕಾಲ 5:30ರ ತನಕ ಕಾಯಿಸಿ ಡಾ.ಪ್ರದೀಪ್ಇ ರುವ ಕಡೆ ಕಳುಹಿಸಿದರು. ಈ ಡಾಕ್ಟರ್ ಕಂಠಪೂರ್ತಿ ಕುಡಿದು ತೂಕಡಿಸುತ್ತಾ ಬಂದಿರುವುದನ್ನು ಗಮನಿಸಿದ ಅಭಿಲಾಷ್ ಆಶ್ಚರ್ಯ ಗೊಂಡರು. ಅದೇ ಸಮಯದಲ್ಲಿ ಆಸ್ಪತ್ರೆಯ ಡೈರೆಕ್ಟರ್ ನಂಬರ್ ಕೇಳಿದರೆ ಅಲ್ಲಿಯ ದಾದಿಯರು ನಂಬರ್ ಕೊಡಲು ಹಿಂಜರಿದಿದ್ದಾರೆ. ಜನಸಾಮಾನ್ಯರ ಜೀವ ರಕ್ಷಣೆಯನ್ನು ಮಾಡಬೇಕಾದ ಡಾ.ಪದೀಪ್ ವಿವೇಚನೆ ಇಲ್ಲದೆ ಬಾಯಿಗೆ ಬಂದಂತೆ ಮಾತನಾಡಿದ್ದರು. ಆಸ್ಪತ್ರೆಯ ಅವ್ಯವಸ್ಥೆಯನ್ನು ನೋಡಿ ಅಭಿಲಾಷ್ ತನ್ನ ತಾಯಿಯನ್ನು ಮತ್ತೆ ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೆರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಿಗಿಂತ ಖಾಸಗಿ ವಲಯದ ಆಸ್ಪತ್ರೆಗಳು ಹೆಚ್ಚು ಸೇವೆ ನೀಡುವುದನ್ನು ಸುಳ್ಳು ಮಾಡಿದೆ ಈ ಡಾಕ್ಟರ್ ವರ್ತನೆ.
ಜನ ಸಾಮಾನ್ಯರ ಜೀವನದ ಬಗ್ಗೆ ಕಾಳಜಿ ವಹಿಸದ ಮಹಾವೀರ್ ಆಸ್ಪತ್ರೆ ಮತ್ತು ಡಾಕ್ಟರ ವಿರುದ್ಧ ಆರೋಗ್ಯ ಇಲಾಖೆ ತಕ್ಷಣವೇ ಸೂಕ್ತ ಕ್ರಮಕೈಗೊಳ್ಳಬೇಕು. ಇದ್ದಲ್ಲಿ ಮುಂದೆ ಕಾನೂನು ರೀತಿಯಲ್ಲಿ ಹೋರಾಟ ನಡೆಸಲು ಸಿದ್ದತೆ ಮಾಡಲಾಗುವುದು -ಅಭಿಲಾಷ್ (ಅನಿತಾ ಅವರ ಮಗ)
ನಮ್ಮ ಮಹಾ ವೀರ ಮೆಡಿಕಲ್ ಸೆಂಟರ್ ನಲ್ಲಿ ಡಾ.ಪ್ರದೀಪ್ ಸಲಹೆಗಾರರಾಗಿ ಬರುತ್ತಿದ್ದಾರೆ .ಅವರು ಪುತ್ತೂರಿನ ಪ್ರಸಿದ್ದ ಡಾಕ್ಟರ್ ನಲ್ಲಿ ಒಬ್ಬರು. ಜನ ಅವ್ರನ್ನು ಕೇಳಿಕೊಂಡು ಬರುತ್ತಾರೆ. ಅವರು ನಮ್ಮ ಸಂಸ್ಥೆಯ ಉದ್ಯೋಗಿಯಲ್ಲ. ಕುಡಿದು ಬಂದಿರುವ ವಿಷಯ ನನಗೆ ತಡವಾಗಿ ಗೊತ್ತಿದೆ ಈ ಬಗ್ಗೆ ಗಮನ ಹರಿಸಲಾಗುವುದು.
-ಡಾ ಅಶೋಕ್ ಪಡಿವಾಳ್ ಮಹಾವೀರ ಮೆಡಿಕಲ್ ಸೆಂಟರ್ ಮುಖ್ಯಸ್ಥರು
ಡಾ.ಪ್ರದೀಪ್ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ತಡ ರಾತ್ರಿ ಕುಡಿದು ಬಂದು ರೋಗಿ ಮೇಲೆ ಕೈ ಮಾಡಿದ್ದರು. ಇದು ಪೊಲೀಸ್ ಇಲಾಖೆಗೂ ಗೊತ್ತಿದೆ. ಆದರೆ ಅದು ಪತ್ರಿಕೆಯಲ್ಲಿ ಬರಲೇ ಇಲ್ಲ. ಜನಸಾಮಾನ್ಯರಿಗೆ ಒಂದು ಕಾನೂನು ಸಿರಿವಂತರಿಗೆ ಇನ್ನೊಂದು ಕಾನೂನು ಆಗಿದೆ.
ಧರ್ಮಪಾಲ ಓರ್ವ ನಾಗರೀಕ.