• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪಾಕಿಸ್ತಾನ ಗಡಿಯಲ್ಲಿ ವಾಯುನೆಲೆ ಸ್ಥಾಪನೆಗೆ ಕೇಂದ್ರದ ಗ್ರೀನ್ ಸಿಗ್ನಲ್

TNN Correspondent Posted On March 23, 2018
0


0
Shares
  • Share On Facebook
  • Tweet It

ದೆಹಲಿ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತೀಯ ಸೈನ್ಯಕ್ಕೆ ಹೊಸ ಚೈತನ್ಯ ತುಂಬುವ ಕಾರ್ಯ ಮಾಡುತ್ತಿದ್ದು, ಇದೀಗ ಪಾಕಿಸ್ತಾನದ ಗಡಿಯಲ್ಲಿ ವಾಯುನೆಲೆ ಸ್ಥಾಪಿಸುವ ಮಹತ್ವದ ತೀರ್ಮಾವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಈ ಮೂಲಕ ಪಾಕಿಸ್ತಾನದ ಗಡಿಯಲ್ಲಿ ಸೈನ್ಯಕ್ಕೆ ಮತ್ತಷ್ಟು ಬಲ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಗುಜರಾತ್​ನ ಪಾಕ್​ ಗಡಿಯಲ್ಲಿ ಭಾರತೀಯ ವಾಯುಪಡೆಯ ವಾಯುನೆಲೆ ಸ್ಥಾಪಿಸಲು ಕ್ಯಾಬಿನೆಟ್​ ಕಮಿಟಿ ಆನ್​ ಸೆಕ್ಯುರಿಟಿ (ಸಿಸಿಎಸ್​) ಒಪ್ಪಿಗೆ ಸೂಚಿಸಿದೆ.

ಪ್ರಸ್ತುತ 1000 ಮೀಟರ್​ ರನ್​ ವೇ ಇರುವ ವಿಮಾನ ನಿಲ್ದಾಣವನ್ನು ಹೆಲಿಕ್ಯಾಪ್ಟರ್​ ಇಳಿಸಲು ಮತ್ತು ವಿವಿಐಪಿಗಳ ಓಡಾಡಕ್ಕೆ ಮಾತ್ರ ಬಳಸಲಾಗುತ್ತಿತ್ತು. ಆದ್ದರಿಂದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಈ ವಿಮಾನ ನಿಲ್ದಾಣವನ್ನು ವಾಯುನೆಲೆಯಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಸಲ್ಲಿಸಿದ್ದರು ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ಧಾರೆ.

ಗುಜರಾತ್​ನ ಬನಸ್ಕಾಂತಾ ಜಿಲ್ಲೆಯ ದೀಸಾದಲ್ಲಿರುವ ಚಿಕ್ಕ ವಿಮಾನ ನಿಲ್ದಾಣವನ್ನು ಸುಮಾರು 1000 ಕೋಟಿ ರೂ. ವೆಚ್ಚದಲ್ಲಿ ವಾಯುನೆಲೆಯಾಗಿ ಮಾರ್ಪಡಿಸಲು ಒಪ್ಪಿಗೆ ಸೂಚಿಸಲಾಗಿದೆ. ಬರ್ಮೀರ್​ ಮತ್ತು ಭುಜ್​ ವಾಯು ನೆಲೆಗಳಗಳ ನಡುವೆ ಇರುವ ದೀಸಾ ವಿಮಾನ ನಿಲ್ದಾಣ ಗಡಿ ರಕ್ಷಣೆಯ ದೃಷ್ಟಿಯಿಂದ ಪ್ರಮುಖ ಸ್ಥಾನ ಹೊಂದಿದೆ. ಭಾರತೀಯ ವಾಯುಪಡೆ ಹಲವು ವರ್ಷದಿಂದ ದೀಸಾ ವಾಯುನೆಲೆಗಾಗಿ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ನಿವೃತ್ತ ಏರ್​ ಮಾರ್ಷಲ್​ ವಿನೋದ್ ಪಟ್ನಿ ಸ್ವಾಗತಿಸಿದ್ದಾರೆ.

0
Shares
  • Share On Facebook
  • Tweet It




Trending Now
ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
Tulunadu News September 16, 2025
ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
Tulunadu News September 16, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
  • Popular Posts

    • 1
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 2
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 3
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 4
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 5
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search