ಮುಸ್ಲಿಮರು ನಮಗೆ ಓಟ್ ಹಾಕಲ್ಲ ಎಂದು ಒಪ್ಪಿಕೊಂಡ ಎಐಸಿಸಿ ಸದಸ್ಯೆ ಕವಿತಾ ಸನಿಲ್!
ನಿಧಾನವಾಗಿ ಕಾಂಗ್ರೆಸ್ಸಿಗೆ ಸತ್ಯ ಅರಿವಾಗುತ್ತಿದೆ. ಮುಸ್ಲಿಮರು ನಮಗೆ ಓಟು ಕೊಡುವುದಿಲ್ಲ ಎಂದು ಕಾಂಗ್ರೆಸ್ಸಿಗೆ ಅನಿಸಲು ಶುರುವಾಗಿದೆ. ಅದನ್ನು ಬಹಿರಂಗವಾಗಿ ಮಂಗಳೂರು ಮಹಾನಗರ ಪಾಲಿಕೆಯ ನಿರ್ಗಮಿತ ಮೇಯರ್ ಕವಿತಾ ಸನಿಲ್ ಹೊರಗೆ ಹಾಕಿದ್ದಾರೆ. ಮೊನ್ನೆ ರಾಹುಲ್ ಗಾಂಧಿಯವರು ಮಂಗಳೂರಿಗೆ ಬಂದ ದಿನ ಕಾಂಗ್ರೆಸ್ಸ್ ಮುಖಂಡರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಒಂದು ಟೇಬಲ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ, ಅವರ ಎದುರಿಗೆ ಕವಿತಾ ಸನಿಲ್, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ ಎಸ್ ಮೊಹಮ್ಮದ್, ಉದ್ಯಮಿ ಮೋನು ಮತ್ತು ಇತರರು ಊಟ ಮಾಡುತ್ತಿದ್ದರು. ಆ ಸಂದರ್ಭದಲ್ಲಿಯೇ ಕವಿತಾ ಸನಿಲ್ ಮೊಹಮ್ಮದ್ ಅವರನ್ನು ನೋಡುತ್ತಾ ತುಳುವಿನಲ್ಲಿ ಹೇಳಿದ ಸಂಗತಿ ವಿಡಿಯೋ ಮೂಲಕ ವೈರಲ್ ಆಗಿದೆ. ಅವರು ಹೇಳಿದ್ದೆನೆಂದರೆ ” ನಿಮ್ಮವರನ್ನು ನಂಬಲು ಆಗುವುದಿಲ್ಲ, ನಿಮ್ಮವರಲ್ಲಿ ಹೆಚ್ಚಿನವರು ವೋಟ್ ಹಾಕುವುದು ಎಸ್ ಡಿಪಿಐಗೆ” ಎಂದಿದ್ದಾರೆ. ಅದಕ್ಕೆ ರಮಾನಾಥ್ ರೈ ಸಣ್ಣ ಸ್ಮೈಲ್ ಕೊಟ್ಟು ತಲೆ ಅಲ್ಲಾಡಿಸಿದ್ದು ಬಿಟ್ಟರೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಆದರೆ ಮೊಹಮ್ಮದ್ ಅವರಿಗೆ ಇದು ಇರಿಸುಮುರುಸಾಗಿದೆ. ಬಹುಶ: ರಮಾನಾಥ್ ರೈ ಅವರು ಪಕ್ಕದಲ್ಲಿ ಇದ್ದ ಕಾರಣ ಆ ವಿಷಯ ಗಲಾಟೆಯಾಗಿ ಪರಿಣಮಿಸಲಿಲ್ಲ. ಇಲ್ಲದೇ ಹೋದರೆ ನಮ್ಮವರು ಕೊಡುವುದಿಲ್ಲ ಎಂದು ಹೇಳುತ್ತೀರಲ್ಲ, ನಿಮ್ಮವರು ಭಾರಿ ನಮಗೆ ವೋಟ್ ಕೊಡುತ್ತಾರಾ ಎಂದು ಮೊಹಮ್ಮದ್ ಅವರು ಹೇಳುತ್ತಿದ್ದರೋ ಏನೋ. ಒಟ್ಟಿನಲ್ಲಿ ನೆಹರೂ ಮೈದಾನದಲ್ಲಿ ಮೊನ್ನೆ ರಾಹುಲ್ ಗಾಂಧಿಯವರ ಭಾಷಣ ಕೇಳಲು ಬಂದ ಜನರಲ್ಲಿ ಹೆಚ್ಚಿನವರು ಮುಸ್ಲಿಮರಾಗಿರುವುದು ಮತ್ತು ಕಾಂಗ್ರೆಸ್ಸಿಗರು ಎದುರಿಗೆ ಮುಸ್ಲಿಮರನ್ನು ಹೊಗಳುತ್ತಾ, ಹಿಂದಿನಿಂದ ಅವರನ್ನು ನಂಬದೇ ಇರುವ ಮಾತನಾಡುವುದು ಕವಿತಾ ಸನಿಲ್ ಅವರ ಬಾಯಿಂದ ಜಗಜ್ಜಾಹೀರವಾಗಿದೆ.
ಮುಸ್ಲಿಮರು ಕಾಂಗ್ರೆಸ್ಸನ್ನು ನಂಬುವ ಸ್ಥಿತಿಯಲ್ಲಿಲ್ಲ.
ಹಾಗಾದರೆ ಕಾಂಗ್ರೆಸ್ ನ ಮುಖಂಡರು ಸದ್ಯ ಮುಸ್ಲಿಮರನ್ನು ನಂಬುವ ಸ್ಥಿತಿಯಲ್ಲಿ ಇಲ್ವಾ? ಹೆಚ್ಚುತ್ತಿರುವ ಎಸ್ ಡಿಪಿಐ ಪ್ರಭಾವ ಮತ್ತು ಕಾಂಗ್ರೆಸ್ ನ ನಾಯಕರು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಮುಸ್ಲಿಮರನ್ನು ಒಲೈಸಲು ಮಾಡುವ ಭಾಷಣದಿಂದ ಮುಸ್ಲಿಮರು ಸಹಜವಾಗಿ ಕಾಂಗ್ರೆಸ್ ನಿಂದ ಬೇಸರವಾಗಿದ್ದಾರೆ. ಅದನ್ನು ಎಸ್ ಡಿಪಿಐ ಸರಿಯಾಗಿ ಬಳಸಿಕೊಳ್ಳುತ್ತಿದೆ. ಹಿಂದೆ ಮುಸ್ಲಿಮರಿಗೆ ಕಾಂಗ್ರೆಸ್ ಬಿಟ್ಟರೆ ಇದ್ದ ಆಯ್ಕೆ ಎಂದರೆ ಅದು ಜಾತ್ಯಾತೀತ ಜನತಾದಳ ಮಾತ್ರ. ಆದರೆ ಜೆಡಿಎಸ್ ಅತ್ತ ಹಿಂದೂತ್ವಕ್ಕೂ ವಾಲಲು ಆಗದೇ ಇತ್ತ ಮುಸ್ಲಿಮರನ್ನು ಸಂಪೂರ್ಣ ತೃಪ್ತಿ ಪಡಿಸಲು ಆಗದೇ ತೂಗುಯ್ಯಾಲೆಯಲ್ಲಿದೆ. ನೀವು ಜೆಡಿಎಸ್ ಗೆ ಮತ ಹಾಕಿದರೆ ಕಾಂಗ್ರೆಸ್ ಸೋತು ಭಾರತೀಯ ಜನತಾ ಪಾರ್ಟಿ ಗೆಲ್ಲುತ್ತದೆ ಎಂದು ಪ್ರತಿ ಬಾರಿ ಮುಸ್ಲಿಮರನ್ನು ಹೆದರಿಸಿ ಕಾಂಗ್ರೆಸ್ ಮುಸ್ಲಿಮರ ಮತ ಬೇರೆಡೆ ಹೋಗದಂತೆ ತಡೆಯುತ್ತಿತ್ತು. ಆದರೆ ಗೆದ್ದ ಬಳಿಕ ಕಾಂಗ್ರೆಸ್ ಜನಪ್ರತಿನಿಧಿಗಳು ಮುಸ್ಲಿಮರಿಗೆ ಮಾಡಿದ ಉಪಕಾರ ಅಷ್ಟಕಷ್ಟೆ. ಅದರ ಬದಲಿಗೆ ಎಲ್ಲೋ ಒಂದು ಕಡೆ ನರೇಂದ್ರ ಮೋದಿಯೇ ಪರವಾಗಿಲ್ಲ ಎಂದು ಮುಸ್ಲಿಮರಿಗೆ ಅನಿಸಿದೆ. ಮೋದಿ ನಮ್ಮ ಮಸೀದಿಗೆ ಬಂದು ತೋರಿಕೆಗೆ ನಮ್ಮ ಟೋಪಿಯನ್ನು ತಲೆಗೆ ಹಾಕಿ ಫೋಟೋಗೆ ಫೋಸ್ ಕೊಡದೇ ಇರಬಹುದು ಆದರೆ ನಾವು ಕೂಡ ಭಾರತದ ಗೌರವಾನ್ವಿತ ಪ್ರಜೆಗಳು ಎಂದು ಯೋಜನೆಗಳ ಮೂಲಕ ಸಾರುತ್ತಿದ್ದಾರೆ ಎಂದು ಮುಸ್ಲಿಮರಿಗೆ ಅನಿಸಿದೆ. ಮುಸ್ಲಿಂ ಮಹಿಳೆಯರು ಇಲ್ಲಿಯ ತನಕ ಕೇವಲ ಮದುವೆಯಾಗಿ ಪುರುಷನಿಗೆ ಸುಖ ಕೊಡಲು ಇರುವ ವಸ್ತುಗಳು ಅಲ್ಲ, ಬೇಡಾ ಎಂದಾಗ ಮೂರು ಸಲ ತಲಾಖ್ ಹೇಳಿ ಬಿಡುವುದಕ್ಕೆ ನಾವು ಗುಲಾಮರಲ್ಲ ಎಂದು ಮೋದಿ ತೋರಿಸಿಕೊಟ್ಟಿದ್ದಾರೆ ಎಂದು ಮುಸ್ಲಿಂ ಮಹಿಳೆಯರಿಗೆ ಅನಿಸಿದೆ.
ಸಬ್ ಕಾ ಸಾತ್, ಕಾಂಗ್ರೆಸ್ ಕಾ ಊಪರ್ ನಹಿ ಹೇ ಆತ್…
ಎಷ್ಟೋ ಮನೆಗಳಲ್ಲಿ ಗಂಡ ಬೈದರೆ, ಹೊಡೆದರೆ ಮೋದಿಗೆ ಹೇಳ್ತಿನಿ ಎಂದು ಹೆದರಿಸುವ ಮುಸ್ಲಿಂ ಮಹಿಳೆಯರೂ ಇದ್ದಾರೆ ಎನ್ನುವುದು ಸುಳ್ಳೋ, ನಿಜವೋ ಒಟ್ಟಿನಲ್ಲಿ ಅಂತಹ ವಾತಾವರಣವೊಂದು ಸೃಷ್ಟಿಯಾಗುತ್ತಿದೆ. ಹಜ್ ಸಬ್ಸಿಡಿ ರದ್ದು ಮಾಡಿ ಆ ಹಣವನ್ನು ಮುಸ್ಲಿಂ ಮಕ್ಕಳ ಶಿಕ್ಷಣಕ್ಕೆ ಬಳಸುವ ಐಡಿಯಾ ಅನಿಷ್ಟಾನಕ್ಕೆ ತರುವ ಕ್ಯಾಪೆಸಿಟಿ ಒಬ್ಬ ಪ್ರಧಾನ ಮಂತ್ರಿ ತೋರಿಸುತ್ತಾರೆ ಎಂದರೆ ಅದು ಮೋದಿ ಮಾತ್ರ. ಇನ್ನು ಬಹುಪತ್ನಿತ್ವ ಕೂಡ ರದ್ದಾದರೆ ಬಹುಶ: ಇಷ್ಟು ಧೈರ್ಯ ಇರುವ ಮತ್ತೊಬ್ಬ ಪ್ರಧಾನಿ ಇಡೀ ಪ್ರಪಂಚದಲ್ಲಿ ಇಲ್ಲ ಎನ್ನುವುದು ಕೂಡ ಸಾಬೀತಾಗುತ್ತದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವುದು ಘೋಷಣೆ ಮಾತ್ರವಲ್ಲ, ಅನುಷ್ಟಾನಕ್ಕೂ ಬರುತ್ತದೆ ಎಂದು ಮೋದಿ ತೋರಿಸಿಕೊಡುತ್ತಿದ್ದಾರೆ.
ಆದ್ದರಿಂದ ಮುಸ್ಲಿಮರು ಕಾಂಗ್ರೆಸ್ಸಿನ ವೋಟ್ ಬ್ಯಾಂಕ್ ಎನ್ನುವುದು ಸುಳ್ಳಾಗುವ ಕಾಲ ಬಂದಿದೆ. ನಮಗೆ ಏನೂ ಕಾಂಗ್ರೆಸ್ ನ ಹಂಗಿಲ್ಲ. ನಾವು ನಮಗೆ ಯಾರು ಒಳ್ಳೆಯದು ಮಾಡುತ್ತಾರಲ್ಲ, ಅವರಿಗೆ ವೋಟ್ ಹಾಕುವುದು ಎಂದು ಮುಸ್ಲಿಮರು ಹೇಳಲು ಶುರು ಮಾಡಿದ್ದಾರೆ. ಅದೇ ಕವಿತಾ ಸನಿಲ್ ಅಂತವರ ಬಾಯಿಯಲ್ಲಿ ” ನಿಮ್ಮವರು ನಮಗೆ ಓಟ್ ಹಾಕಲ್ಲ….” ಎನ್ನುವುದು ಸರಿಯಾದ ಸಮಯಕ್ಕೆ ಬಂದಿದೆ. ಸತ್ಯ ಮೈಕ್ ಹಿಡಿದಾಗ ಬರದಿರಬಹುದು. ಆದರೆ ಹೀಗೆ ಊಟಕ್ಕೆ ಕೂತಾಗ ಬಂದೇ ಬರುತ್ತದೆ. ಇತ್ತೀಚೆಗೆ ಯಾಕೋ ರೈಗಳ ಆಸುಪಾಸಿನಲ್ಲಿ ಇರುವವರು ಮೊಬೈಲ್ ಕ್ಯಾಮೆರಾ ಬಳಸಿ ಏನೋ ಸಾಧಿಸಲು ಹೊರಟಂತೆ ಕಾಣುತ್ತದೆ, ಅಂತಿಮವಾಗಿ ಅದು ವಿವಾದದಲ್ಲಿ ಮುಗಿಯುತ್ತಿದೆ!
Leave A Reply