ಕಾಂಗ್ರೆಸ್ ಗೆ ಬಿತ್ತು ದೊಡ್ಡ ಹೊಡೆತ, ಕೈ ಕೊಡಲಿದ್ದಾರೆ ಸಿದ್ದು ಆಪ್ತ
ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯರ ಬಗ್ಗೆ ಮೃಧು ಧೋರಣೆ ಹೊಂದಿರುವ, ತನ್ನ ಜಿಲ್ಲೆಯಲ್ಲಿ ತನಗೆ ಸೂಕ್ತ ಸ್ಥಾನ ಸಿಗದಿದ್ದರೂ, ಅನುಭವ, ಅವಕಾಶವಿದ್ದರೂ ಸಚಿವ ಸ್ಥಾನದಿಂದ ವಂಚಿತರಾಗಿದ್ದರೂ, ಆಕ್ರೋಶದ ಮಧ್ಯೆ ಸಿದ್ದರಾಮಯ್ಯ ಸರ್ಕಾರಕ್ಕೆ ಸಾಥ್ ನೀಡಿದ ಅಫಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರ ಇದೀಗ ಕಾಂಗ್ರೆಸ್ ಗೆ ಕೈ ಕೊಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಹೈದ್ರಾಬಾದ್ ಕರ್ನಾಟಕದಲ್ಲಿ ಖರ್ಗೆ ನಂತರ ಕಾಂಗ್ರೆಸ್ ನಲ್ಲಿ ಹಿರಿಯರಾದ ಮಾಲೀಕಯ್ಯ ಗುತ್ತೇದಾರ ಇದೀಗ ಕಾಂಗ್ರೆಸ್ ಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ತಮ್ಮ ಹಿರಿತನಕ್ಕೆ ಕಾಂಗ್ರೆಸ್ ನಲ್ಲಿ ಬೆಲೆ ನೀಡುತ್ತಿಲ್ಲ, ಖರ್ಗೆ ಮಾತಿಗೆ ಕಟುಬಿದ್ದು, ಸಚಿವ ಸ್ಥಾನದಿಂದ ವಂಚಿಸಲಾಗಿದೆ. ಹಿರಿಯರಾದರೂ ಸಚಿವ ಸ್ಥಾನ ನೀಡದೇ ಮೋಸ ಮಾಡಲಾಗಿದೆ ಎಂಬುದು ಮಾಲೀಕಯ್ಯ ಗುತ್ತೇದಾರ ಆರೋಪ. ಖರ್ಗೆ ಮಾಲೀಕಯ್ಯ ಮಧ್ಯೆ ಇರುವ ವೈಮನಸ್ಸು ಮತ್ತು ಸದಾ ತುಳಿತಕ್ಕೆ ಒಳ ಮಾಡುತ್ತಿರುವುದಕ್ಕೆ ಬೇಸತ್ತು ಮಾಲೀಕಯ್ಯ ಕಾಂಗ್ರೆಸ್ ಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ.
ಸಿದ್ದರಾಮಯ್ಯಗೆ ತೀವ್ರ ಆಪ್ತರಾಗಿರುವ ಮಾಲೀಕಯ್ಯ ಸಿಎಂ ಮಾತಿಗೆ ಕಟುಬಿದ್ದು, ರಾಜೀನಾಮೆ ನೀಡದೇ ಇದುವರೆಗೆ ಯತಾಸ್ಥಿತಿ ಕಾದು ಕೊಂಡು ಬಂದಿದ್ದರು. ಸೂಕ್ತ ಸ್ಥಾನ ನೀಡಿದ್ದರೂ ಸಿಎಂ ಮಾತಿನಿಂದ ಸುಮ್ಮನ್ನಿದ್ದ ಗುತ್ತೇದಾರ ಇದೀಗ ಅಮಿತ್ ಷಾ ಜಾಲಕ್ಕೆ ಬಿದ್ದಿದ್ದು, ಬಿಜೆಪಿ ಸೇರುವ ಅನುಮಾನಗಳು ದಟ್ಟವಾಗಿವೆ.
ಮಾಲೀಕಯ್ಯ ಕಾಂಗ್ರೆಸ್ ಗೆ ರಾಜೀನಾಮೆ ನೀಡುವುದರಿಂದ ಹೈಕ ಭಾಗದಲ್ಲಿ ಕೆಲವು ಕ್ಷೇತ್ರಗಳಲ್ಲಿ ನಿರ್ಣಾಯಕರಾಗಿರುವ ಮತ್ತು ಆರ್ಥಿಕವಾಗಿ ಬಲಿಷ್ಠರಾಗಿರುವ ಈಡೀಗ ಸಮಾಜದ ಮತಗಳು ಕಾಂಗ್ರೆಸ್ ಕೈ ತಪ್ಪುವುದು ನಿಶ್ಚಿತ. ಅಲ್ಲದೇ ಕಲಬುರಗಿಯ ನಾಲ್ಕೈದು ಕ್ಷೇತ್ರದ ಫಲಿತಾಂಶವನ್ನು ಬದಲಾಯಿಸುವ ತಾಕತ್ತು ಇರುವ ಗುತ್ತೇದಾರ ಕಾಂಗ್ರೆಸ್ ಗೆ ಭಾರಿ ಹೊಡೆತ ನೀಡುವ ಎಲ್ಲ ಲಕ್ಷಣಗಳು ಗೋಚರಿಸಿವೆ.
ಕಲಬುರಗಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಹಿರಿಯರಾದ ಮಾಲೀಕಯ್ಯ ಗುತ್ತೇದಾರ ಅವರಿಗೆ ಅವರದ್ದೇ ಜಿಲ್ಲೆಯ ಮಲ್ಲಿಕಾರ್ಜುನ ಖರ್ಗೆ ಅವರೇ ಕಂಟಕ ಎಂಬುದು ಪ್ರಿಯಾಂಕ್ ಖರ್ಗೆಗೆ ಸಚಿವ ಸ್ಥಾನ ನೀಡಿದ್ದಾಗಲೇ ಸಾಬೀತಾಗಿದೆ. ಸಿದ್ದರಾಮಯ್ಯ ಪ್ರಿಯಾಂಕ್ ಗೆ ಸಚಿವ ಸ್ಥಾನ ನೀಡಿ, ಮಲ್ಲಿಕಾರ್ಜುನ ಖರ್ಗೆ ಅವರ ಬಾಯಿ ಮುಚ್ಚಿಸಿದ್ದಾರೆ. ಆದರೆ ಖರ್ಗೆ ಅವರು ಗುತ್ತೇದಾರ ಅವರನ್ನು ಯಶಸ್ವಿಯಾಗಿ ಹತ್ತಿಕ್ಕುವ ಪ್ರಯತ್ನ ಮುಂದುವರಿಸಿದ್ದಾರೆ. ಅಲ್ಲದೇ ಇತ್ತೀಚೆಗೆ ನಡೆದ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲೂ ಮಾಲೀಕಯ್ಯ ಸೂಕ್ತ ಸ್ಪಂದನೆ ದೊರೆಯದಿರುವುದರಿಂದ ಗುತ್ತೇದಾರ ಕಾಂಗ್ರೆಸ್ ವಿರುದ್ಧ ತೀವ್ರ ಬೇಸರಕ್ಕೆ ಒಳಗಾಗಿದ್ದಾರೆ.
Leave A Reply