ಈ ತಾಯಿಯ ಬೇಗುದಿ, ಉಗ್ರರ ಗುಂಪು ಸೇರಿರುವ ಆ ಮಗನಿಗೆ ಕೇಳುವುದೇ? ವಾಪಸ್ ಬರುವನೇ?
ಶ್ರೀನಗರ: ಜಮ್ಮು-ಕಾಶ್ಮೀರ ಎಂದರೇನೆ ಹಾಗೆ. ಹೆಸರಿಗೆ ಅದು ಭೂಮಿಯ ಮೇಲಿನ ಸ್ವರ್ಗ ಎಂದಾದರೂ, ಅಲ್ಲಿ ಯಾವಾಗ ಗುಂಡಿನ ಮೊರೆತ ಆರಂಭವಾಗುತ್ತದೆಯೋ, ಯಾವ ಮನೆಯಿಂದ ಹೊರಗೆ ಹೋದ ವ್ಯಕ್ತಿ ಯಾವ ಉಗ್ರರ ಗುಂಪು ಸೇರುತ್ತಾನೋ ಎಂಬ ದುಗುಡ ಕಾಡುತ್ತದೆ.
ಈಗ ಇಂಥಾದ್ದೇ ಒಂದು ದುಗುಡ, ಭಯ, ಯಾತನೆ ಕಾಶ್ಮೀರದ ತಾಯಿಯೊಬ್ಬರಿಗೆ ಕಾಡುತ್ತಿದೆ. ಹೌದು, ಹತ್ತನೇ ಕ್ಲಾಸ ಓದುತ್ತಿದ್ದ ಮುದ್ದಿನ ಮಗ, ಪ್ರಾರ್ಥನೆಗೆಂದು ತೆರಳಿ ಮನೆಗೇ ಬಂದಿಲ್ಲ. ಅಲ್ಲದೆ ಈಗ ಆತ ಉಗ್ರರ ಗುಂಪು ಸೇರಿದ್ದಾನೆ ಎಂದು ತಿಳಿದ ಆ ತಾಯಿ, ದಯಮಾಡಿ ಮನೆಗೆ ಬಾ ಮಗನೆ ಎಂದು ವಿಜ್ಞಾಪಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತನ್ನ ಮಗ ಉಗ್ರರ ಗುಂಪು ಸೇರಿದ್ದಾಗಿಯೂ, ಆತನ ಫೋಟೋ ನೋಡಿದ್ದಾಗಿಯೂ ಮಾಹಿತಿ ನೀಡಿರುವ ಮೈಮೂನಾ, ಫೋಟೋದಲ್ಲಿ ಕಾಣುತ್ತಿರುವ ಆತ ನನ್ನ ಮಗನೇ ಆಗಿದ್ದು, ಉಗ್ರ ಸಂಘಟನೆ ತೊರೆದು ಮನೆಗೆ ಬಾ ಎಂದು ಮನವಿ ಮಾಡಿದ್ದಾರೆ.
ಶ್ರೀನಗರದ ಖನ್ಯಾರ್ ಎಂಬ ಪ್ರದೇಶದ ವಾಸಿಯಾಗಿರುವ ಇವರ ಮಗ ಹಲವು ತಿಂಗಳಿನಿಂದ ಕಾಣೆಯಾಗಿದ್ದಾನೆ. ಗುಪ್ತಚರ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕರಣ, ಈಕೆಯ ಮಗ 2016ರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಹತ್ಯೆ ಮಾಡಿದ ಬಳಿಕ ಇದೇ ಸಂಘಟನೆ ಸೇರಿದ್ದಾನೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ, ಜಮ್ಮು-ಕಾಶ್ಮೀರದಲ್ಲಿ ಕೆಲವು ಮೂಲಭೂತವಾದಿಗಳ ಉಪಟಳದಿಂದ ಹಲವು ಉಗ್ರರು ಉಗ್ರಸಂಘಟನೆ ಸೇರುತ್ತಿದ್ದು, ಹೀಗೆ ಸೇರುವ ಮುನ್ನ ಈ ತಾಯಿಯ ಮನವಿ, ಅಭಿಲಾಷೆ, ದುಃಖ ನೋಡುವುದು ಒಳಿತು.
Leave A Reply