ರೈಲ್ವೆಗೆ ಮೋದಿ ಕೊಟ್ಟರು ಬೂಸ್ಟ್, ಇದೇ ಮೊದಲ ಬಾರಿಗೆ ಅತೀ ಹೆಚ್ಚು ಸರಕು ಸಾಗಣೆ!
ದೆಹಲಿ: ಕಳೆದ 2017ರ ಬಜೆಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈಲ್ವೆ ಅಭಿವೃದ್ಧಿ, ನಿಲ್ದಾಣಗಳ ಮೇಲ್ದರ್ಜೆಗೆ ಏರಿಸಲು ಅಪಾರ ಹಣ ಮೀಸಲು ಇಟ್ಟ ಬಳಿಕ ಭಾರತೀಯ ರೈಲುಗಳಲ್ಲಿ ಅಪಾರ ಸುಧಾರಣೆಯಾಗಿದೆ.
ಹೌದು, 2017-18ರಲ್ಲಿ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಸರಕನ್ನು ರೈಲುಗಳ ಮೂಲಕ ಸಾಗಣೆ ಮಾಡಲಾಗಿದೆ ಎಂದು ರೈಲ್ವೆ ಖಾತೆ ಸಚಿವಾಲಯವೇ ಮಾಹಿತಿ ನೀಡಿದೆ.
2017-18ನೇ ಸಾಲಿನಲ್ಲಿ ರೈಲುಗಳ ಮೂಲಕ ದೇಶಾದ್ಯಂತ 1,160 ದಶಲಕ್ಷ ಟನ್ ಸರಕನ್ನು ಸಾಗಣೆ ಮಾಡಲಾಗಿದೆ. ಇದು ದೇಶದ ಇತಿಹಾಸದಲ್ಲೇ ಅತೀ ಹೆಚ್ಚು ಸರಕು ಸಾಗಣೆ ಮಾಡಲಾದ ವರ್ಷ ಎಂಬ ದಾಖಲೆಗೆ ಭಾಜವಾಗಿದೆ ಎಂದು ಸಚಿವಾಲಯ ವಿವರಣೆ ನೀಡಿದೆ.
2013-14ನೇ ಸಾಲಿನಲ್ಲಿ ರೈಲುಗಳ ಮೂಲಕ 1,051 ದಶಲಕ್ಷ ಟನ್ ಸರಕು ಸಾಗಣೆ ಮಾಡಲಾಗಿತ್ತು. ಹಾಗೆಯೇ 2014-15ನೇ ಸಾಲಿನಲ್ಲಿ 1,095 ದಶಲಕ್ಷ ಟನ್ ಹಾಗೂ 2016-17ರಲ್ಲಿ 1,109 ದಶಲಕ್ಷ ಟನ್ ಸರಕು ಸಾಗಣೆ ಮಾಡಲಾಗಿದೆ. ಆದರೆ ಈ ಬಾರಿ ಈ ಸಂಖ್ಯೆ 1,160 ದಶಲಕ್ಷ ಮಿಲಿಯನ್ ಗೆರೆ ತಲುಪಿದ್ದು, ಸಾರ್ವಕಾಲಿಕ ದಾಖಲೆ ದಾಖಲಿಸಿದೆ.
ದೇಶದಲ್ಲಿ ಸುಮಾರು 13 ಸಾವಿರ ಸರಕು ಸಾಗಣೆ ರೈಲುಗಳು ಓಡಾಡುತ್ತಿದ್ದು, ರೈಲು ಇಲಾಖೆಯ ಒಟ್ಟು ಆದಾಯದಲ್ಲಿ ಈ ವಿಭಾಗವೇ ಶೇ.65ರಷ್ಟು ಆದಾಯ ಒದಗಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.
Leave A Reply