ಹುತಾತ್ಮ ಯೋಧನ ತಾಯಿಗೆ ಪಿಂಚಣಿ ನೀಡಲಿಲ್ಲ ಕಾಂಗ್ರೆಸ್ ಸರ್ಕಾರ, ಆದರೆ ಹಾಗೆ ಮಾಡಲಿಲ್ಲ ಮೋದಿ ಸರ್ಕಾರ!
ದೆಹಲಿ: ಅದು 2009. ಈಶಾನ್ಯ ಭಾಗದ ಚೀನಾ ಗಡಿಗೆ ಹಿಮಾಚಲ ಪ್ರದೇಶದ ರಿಂಕು ರಾಮ್ ಎಂಬ ಯೋಧ ನಿಯೋಜನೆಗೊಂಡಿದ್ದ. ಆದರೆ ವೈರಿಗಳ ದಾಳಿಗೆ ಆತ ಹುತಾತ್ಮನಾದ. ಎಂತಹ ದುರದೃಷ್ಟ ನೋಡಿ, ಆತನ ದೇಹವೂ ಪತ್ತೆಯಾಗಲಿಲ್ಲ. ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಯೋಧನ ಪತ್ತೆಹಚ್ಚಲು ಸಹ ಮುಂದಾಗಲಿಲ್ಲ.
ಯೋಧ ನಾಪತ್ತೆಯಾದ ಬಳಿಕ ಅವರ ತಾಯಿಗೆ ಪಿಂಚಣಿ ಸೌಲಭ್ಯ ಸೇರಿ ಹಲವು ಸೌಕರ್ಯ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ ಬಳಿಕ ಮರೆತು ಹೋಯಿತು. ಅತ್ತ ಮಗನನ್ನೂ ಕಳೆದುಕೊಂಡು, ಇತ್ತ ಆತನ ಪಿಂಚಣಿಯೂ ಬರದೆ ಕಷ್ಟದಲ್ಲೇ ಜೀವನ ಕಳೆಯತೊಡಗಿದ ಆ ತಾಯಿ ಪಿಂಚಣಿಗಾಗಿ ಸರ್ಕಾರಿ ಕಚೇರಿ ಅಲೆದರೂ ಪ್ರಯೋಜನವಾಗಲಿಲ್ಲ.
ಕೊನೆಗೂ ಇದರಿಂದ ಬೇಸತ್ತ ಆ ಯೋಧನ ತಾಯಿ ಸಶಸ್ತ್ರ ಪಡೆಗಳ ನ್ಯಾಯಾಧೀಕರಣದ ಮೆಟ್ಟಿಲೇರಬೇಕಾಯಿತು. ಕಾಂಗ್ರೆಸ್ಸಿನ ನಿರ್ಲಕ್ಷ್ಯ ಆ ತಾಯಿಯನ್ನು ಬಸವಳಿಯುವಂತೆ ಮಾಡಿತು. ಆದರೆ ಈ ವಿಷಯ ಯಾವಾಗ ಕೇಂದ್ರ ಸರ್ಕಾರಕ್ಕೆ ಗೊತ್ತಾಯಿತೋ, ಶೀಘ್ರ ಆ ತಾಯಿಗೆ ಸೌಲಭ್ಯ ನೀಡಲು ಮುಂದಾಯಿತು.
ಹೌದು, 2009ರಿಂದ ಅನ್ವಯವಾಗುವಂತೆ ಹುತಾತ್ಮ ಯೋಧನ ತಾಯಿಗೆ ಪಿಂಚಣಿ ಹಾಗೂ ಬರೋಬ್ಬರಿ 10 ಲಕ್ಷ ರೂ. ಗೌರವ ಧನ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಕುರಿತು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತು ಆದೇಶ ಹೊರಡಿಸಿದ್ದಾರೆ.
ಯಾವುದೇ ಒಂದು ಸರ್ಕಾರ ದೇಶದ ಜನರಿಗೆ ಸಕಲ ಸೌಲಭ್ಯ ಒದಗಿಸುವ ಜತೆಗೆ ಗಡಿ ಕಾಯುವ ಸೈನಿಕರಿಗೆ ಸಕಲ ಸೌಲಭ್ಯ ನೀಡಿದಾಗ ಮಾತ್ರ ಆ ದೇಶ ಸುಭದ್ರವಾಗಿರಲು ಸಾಧ್ಯ. ಇದನ್ನು ಮನಗಂಡಿರುವ ಕೇಂದ್ರ ಸರ್ಕಾರ ಇತ್ತೀಚೆಗೆ ಸೈನಿಕರ ವೇತನ ಹೆಚ್ಚಿಸಿದೆ. ನವವಿವಾಹಿತ ಯೋಧರಿಗೆ ಅತಿಥಿ ಗೃಹ ನಿರ್ಮಿಸಲು ಅನುಮತಿ ನೀಡಿದೆ. ಅಷ್ಟೇ ಏಕೆ, ಈಗ ಯೋಧನ ಕಳೆದುಕೊಂಡ ತಾಯಿಯ ಕಣ್ಣೀರನ್ನೂ ಒರೆಸಿದೆ.
Leave A Reply