70 ವರ್ಷದ ನಂತರ ಮಹಾರಾಷ್ಟ್ರದ ಹಳ್ಳಿಗೆ ಬಂತು ವಿದ್ಯುತ್.. ಇದಲ್ಲವೇ ಅಚ್ಛೇ ದಿನ್
ಮುಂಬೈ: ದೇಶದೆಲ್ಲೆಡೆ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಗಳು ಏನು ಮಾಡುತ್ತಿವೆ ಎಂದು ನಿತ್ಯ ಲೋಕಸಭೆಯಿಂದ ಬೀದಿಯಲ್ಲೂ ವಿರೋಧ ಮಾಡುವ ವಿರೋಧ ಪಕ್ಷಗಳಿಗೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ತಕ್ಕ ಉತ್ತರ ನೀಡಲಾಗುತ್ತಿದೆ. ಇದೀಗ ಬಿಜೆಪಿ ನೇತೃತ್ವದ ಮಹಾರಾಷ್ಟ್ರದ ಸರ್ಕಾರ ಮತ್ತೊಂದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದ್ದು, ದೇಶಕ್ಕೆ ಸ್ವತಂತ್ರ್ಯ ದೊರೆತು 70 ವರ್ಷದ ಬಳಿಕವೂ ವಿದ್ಯುತ್ ಸಂಪರ್ಕವಿಲ್ಲದೇ ಪರದಾಡುತ್ತಿದ್ದ ಹಳ್ಳಿಯೊಂದಕ್ಕೆ ವಿದ್ಯುತ್ ಸಂಪರ್ಕ ಕೊಡಿಸುವ ಮೂಲಕ ದಾಖಲೆ ಬರೆದಿದೆ.
ಬುಡಕಟ್ಟು ನಿವಾಸಿಗಳೇ ವಾಸಿಸಿರುವ ಮಹಾರಾಷ್ಟ್ರದ ಅಮರಾವತಿ ಧರ್ಣಿಯ ಗ್ರಾಮದಕ್ಕೆ ಇತಿಹಾಸದಲ್ಲೇ ಪ್ರಥಮ ಬಾರಿಗೆ ವಿದ್ಯುತ್ ಸಂಪರ್ಕ ದೊರೆತಿದೆ. ವಿದ್ಯುತ್ ಇಲ್ಲದೇ ನಿತ್ಯ ರಾತ್ರಿ ಹಲವು ಸಮಸ್ಯೆಗಳಿಗೆ ಸಿಲುಕಿದ್ದ ಬುಡಕಟ್ಟು ಸಮುದಾಯಕ್ಕೆ ವಿದ್ಯುತ್ ಸಂಪರ್ಕ ದೊರೆತಿರುವುದು ಭಾರಿ ಅನುಕೂಲ ಕಲ್ಪಿಸಿದಂತಾಗಿದೆ.
ವಿದ್ಯುತ್ ಸಂಪರ್ಕವಿಲ್ಲದೇ ನಿತ್ಯ ದೀಪದ ಬೆಳಕಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಸರ್ಕಾರದ ಈ ಕಾರ್ಯದಿಂದ ಭಾರಿ ಅನುಕೂಲವಾಗಿದೆ ಎಂದು ಧರ್ಣಿ ನಿವಾಸಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಕ್ಸಲ ಪ್ರಭಾವವುಳ್ಳ ಬುಡಕಟ್ಟು ಸಮುದಾಯದ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ದೊರೆತಿರುವುದು, ನಕ್ಸಲರ ಪ್ರಭಾವ ಕಡಿಮೆಗೊಳಿಸಲು, ಹಿಡಿತದಲ್ಲಿಟ್ಟುಕೊಳ್ಳಲು ಅನುಕೂಲವಾಗಲಿದೆ.
Leave A Reply