ನೋಟ್ಯಂತರ, ಜಿಎಸ್ ಟಿ ಎಫೆಕ್ಟ್ ನಿಂದ ಹೊರ ಬಂದ ಭಾರತ: ವಿಶ್ವಬ್ಯಾಂಕ್ ಶ್ಲಾಘನೆ
ವಾಷಿಂಗಟನ್: ಭಾರತ ಆರ್ಥಿಕ ನಿಯಮಗಳಲ್ಲೇ ಐತಿಹಾಸಿಕ ನಿರ್ಧಾರಗಳಾದ ನೋಟ್ಯಂತರ ಮತ್ತು ಜಿಎಸ್ ಟಿಗಳನ್ನು ತೆಗೆದುಕೊಂಡು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತೀವ್ರ ವಿರೋಧ ಎದುರಿಸಿತ್ತು. ದೇಶದ ಆರ್ಥಿಕ ವ್ಯವಸ್ಥೆಯೇ ಕುಸಿದು ಹೋಯಿತು ಎಂಬಂತೆ ಮೋದಿ ವಿರೋಧಿಗಳು ಗೀಳಿಟ್ಟಿದ್ದರು. ಇನ್ನೆಂದು ದೇಶದ ಆರ್ಥಿಕ ಸ್ಥಿತಿ ಸಮಸ್ಥಿತಿಗೆ ಬರಲಾರದು ಎಂಬ ಮೂಡ ಭಾವನೆ ವಿರೋಧ ಪಕ್ಷಗಳು ಬಿತ್ತಿದ್ದವು. ಆದರೆ ಇದೀಗ ವಿಶ್ವಬ್ಯಾಂಕ್ ಮೋದಿ ವಿರೋಧಿಗಳಿಗೆ ತಕ್ಕ ಉತ್ತರ ನೀಡಿದ್ದು, ನೋಟ್ಯಂತರ ಮತ್ತು ಜಿಎಸ್ ಟಿ ಪರಿಣಾಮದಿಂದ ಭಾರತ ಹೊರಬಂದಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದೆ.
ಮಂಗಳವಾರ ವಿಶ್ವಬ್ಯಾಂಕ್ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಭಾರತ ಜಿಡಿಪಿ ದರ 7.3 ಇದ್ದು 2019-2020ರ ವೇಳೆಗೆ 7.5 ತಲುಪಲಿದೆ. ನೋಟ್ಯಂತರ ಮತ್ತು ಜಿಎಸ್ ಟಿ ನಿಯಮದಿಂದ ಎದುರಾಗಿದ್ದ ಆರ್ಥಿಕ ಪರಿಣಾಮಗಳನ್ನು ಭಾರತ ಯಶಸ್ವಿಯಾಗಿ ಎದುರಿಸಿ, ಎಲ್ಲವನ್ನು ಸರಿದಾರಿಗೆ ತಂದಿದೆ ಎಂದು ತಿಳಿಸಿದೆ.
ಖಾಸಗಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ, ಆರ್ಥಿಕ ಸ್ಥಿತಿಗೆ ಪುನಶ್ಚೇತನ ನೀಡುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದ್ದ 2017ರಲ್ಲಿ 6.3 ತಲುಪಿದ್ದ ಜಿಡಿಪಿ ದರ 2018ಕ್ಕೆ 7.3 ತಲುಪಿದೆ. ಭಾರತ ಬಂಡವಾಳ ಹೂಡಿಕೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಆರ್ಥಿಕ ಸ್ಥಿತಿ ಚೇತರಿಕೆ ಕಂಡುಕೊಳ್ಳಲಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
Leave A Reply