ಪ್ರಕಾಶ್ ರೈ, ನಿಮಗೆ ಎದೆಯಲ್ಲಿ ಗುಂಡಿಗೆ ಇದ್ದರೆ, ಮಿದುಳಲ್ಲಿ ಬುದ್ಧಿಯಿದ್ದರೆ ಈ ಪ್ರಶ್ನೆಗೆ ಉತ್ತರಿಸಿ!
ಕರ್ನಾಟಕದಲ್ಲಿ ಚುನಾವಣೆ ಸಮೀಪಿಸುತ್ತಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಗೆ ತಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡಲು ಆರಂಭಿಸಿದರೋ, ಅದೇ ರೀತಿ ಪರೋಕ್ಷವಾಗಿ ಕಾಂಗ್ರೆಸ್ ಪರವಾಗಿ ಪ್ರಚಾರ ಆರಂಭಿಸಿದ್ದು ಈ ಪ್ರಕಾಶ್ ರೈ. ಅಂದರೆ ಬಿಜೆಪಿಗೆ ಮತಹಾಕಬೇಡಿ, ಬಿಜೆಪಿಯವರು ಹಾಗೆ ಹೀಗೆ ಎಂದು ಹೇಳಿಕೆ ನೀಡುತ್ತ ಪರೋಕ್ಷವಾಗಿ ಕಾಂಗ್ರೆಸ್ಸಿನ ಪರ ಪ್ರಚಾರ ಮಾಡಿದರು.
ಇತ್ತೀಚೆಗಷ್ಟೇ ಹೊಸ ರಾಗ ತೆಗೆದಿದ್ದ ಪ್ರಕಾಶ್ ರೈ, ಬಿಜೆಪಿ ದೇಶಕ್ಕೆ ಕ್ಯಾನ್ಸರ್ ಇದ್ದಂತೆ, ಉಳಿದ ಪಕ್ಷಗಳು ಕೆಮ್ಮು, ಜ್ವರ, ನೆಗಡಿ ಇದ್ದಂತೆ ಮಾತನಾಡಿದ್ದರು. ಈಗ ಹೊಸ ವರಸೆ ತೆಗೆದಿರುವ ಈ ಹೆಸರು ಬದಲಾಯಿಸಿಕೊಂಡಿರುವ ನಟ ಕಮ್ ರಾಜಕಾರಣಿ, ಗೌರಿ ಲಂಕೇಶ್ ಹತ್ಯೆಯಾದ ಬಳಿಕ ಸಂಭ್ರಮಿಸಿದವರನ್ನು ಮೋದಿ ತಡೆಯಲಿಲ್ಲ ಎಂಬ ಕಾರಣಕ್ಕಾಗಿ ಅವರನ್ನು ವಿರೋಧಿಸಿದ್ದೇನೆ ಎಂದಿದ್ದಾರೆ. ಆ ಮೂಲಕ ತಮ್ಮ ಮಿದುಳಲ್ಲಿರುವ ದಡ್ಡತನವನ್ನು ಹೊರಹಾಕಿದ್ದಾರೆ.
ಈಗ ಇಂತಹ ಪ್ರಕಾಶ್ ರೈ ಅವರಿಗೆ ಪ್ರಶ್ನೆ ಕೇಳಬೇಕಾಗಿದೆ. ಜನರ ಪರವಾಗಿ ಧ್ವನಿ ಎತ್ತುತ್ತೇನೆ ಎನ್ನುವ ಪ್ರಕಾಶ್ ರೈ, ನಿಜವಾಗಿಯೂ ಜನರ ಬಗ್ಗೆ ಕಾಳಜಿ ಇದ್ದರೆ? ನಿಮಗೆ ನಿಜವಾಗಿಯೂ ತಾಕತ್ತಿದ್ದರೆ, ಬುದ್ಧಿ ಇದ್ದರೆ ಈ ಪ್ರಶ್ನೆಗಳಿಗೆ ಉತ್ತರಿಸಲಿ.
- ಕೊಡಗಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕಾಶ್ ರೈ ಹೇಳ್ತಾರೆ, ಗೌರಿ ಹತ್ಯೆಯ ಬಳಿಕ ಸಂಭ್ರಮಿಸಿದವರನ್ನು ಮೋದಿ ತಡೆಯಲಿಲ್ಲ ಎಂದು ಅವರನ್ನು ವಿರೋಧಿಸಿದೆ ಎನ್ನುತ್ತಾರೆ. ಆದರೆ ಗೌರಿ ಹತ್ಯೆಯನ್ನೇ ತಡೆಯದ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸದ, ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ವಿರೋಧಿಸದ ಪ್ರಕಾಶ್ ರೈ, ನಿಮ್ಮ ಮಿದುಳಿನ ನರ ಸತ್ತುಹೋಗಿವೆಯೇ?
- ಇನ್ನು ಪ್ರಕಾಶ್ ರೈ ಅವರು ಹೇಳಿಕೆ ನೀಡಿರುವ ಕ್ಯಾನ್ಸರ್ ವಿಷಯಕ್ಕೆ ಬರೋಣ. ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತದ ಖ್ಯಾತಿ ವಿಶ್ವಮಟ್ಟದಲ್ಲಿ ಹಾರಾಡಿದೆ ಹೊರತು ಭ್ರಷ್ಟಾಚಾರದಿಂದ ಸುದ್ದಿಯಾಗಿಲ್ಲ. ಹೀಗಿರುವ ಬಿಜೆಪಿಯನ್ನು ಕ್ಯಾನ್ಸರ್ ಎನ್ನುವ ಪ್ರಕಾಶ್ ರೈ ಮಿದುಳಿಗೆ ಯಾವ ರೋಗ ತಗುಲಿದೆ. ಅಷ್ಟಕ್ಕೂ ಬಿಜೆಪಿ ಏನು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದೆಯೇ? ಕಲ್ಲಿದ್ದಲು, ಕಾಮನ್ ವೆಲ್ತ್ ಗೇಮ್ಸ್ ಹಗರಣನೀಡಿದೆಯೇ? ನಾಚಿಕೆಯಾಗುವುದಿಲ್ಲವೇ ಪ್ರಕಾಶ್ ರೈ ನಿಮಗೆ?
- ನಾನು ಅನ್ಯಾಯವನ್ನು ನಿರಂತರವಾಗಿ ಪ್ರಶ್ನಿಸುತ್ತಲೇ ಇದ್ದೇನೆ ಎನ್ನುವ ಪ್ರಕಾಶ್ ರೈ ನಿರ್ಭಯಾ ಪ್ರಕರಣವಾದಾಗ ಎಲ್ಲಿ ಮಲಗಿದ್ದರು? ಅಷ್ಟೇ ಏಕೆ ಕರ್ನಾಟಕದಲ್ಲಿ ಎಂ.ಎಂ.ಕಲಬುರ್ಗಿ ಹತ್ಯೆಯಾದಾಗ ಪ್ರಕಾಶ್ ರೈ ಯಾರನ್ನು ಪ್ರಶ್ನಿಸಿದರು? ರಾಜ್ಯದಲ್ಲಿ 22 ಹಿಂದೂಗಳ ಹತ್ಯೆಯಾಗಿದ್ದರೂ ಆ ಕುರಿತು ರಾಜ್ಯ ಕಾಂಗ್ರೆಸ್ ಸರ್ಕಾರವನ್ನೇಕೆ ಪ್ರಕಾಶ್ ರೈ ಪ್ರಶ್ನಿಸಲಿಲ್ಲ? ನಿಜವಾಗಿಯೂ ಅನ್ಯಾಯ ಪ್ರಶ್ನಿಸುವವನ ಗುಂಡಿಗೆಯೇ ಇದು?
- ಕಾವೇರಿ ವಿಚಾರವಾಗಿ ಎರಡು ತಿಂಗಳಲ್ಲಿ ಜನಪ್ರತಿನಿಧಿಗಳು ಹೇಗೆ ಜನರಿಗೆ ಮೋಸ ಮಾಡಿದ್ದಾರೆ ಎಂಬುದನ್ನು ಜನರ ಮುಂದಿಡುತ್ತೇನೆ ಎಂದಿದ್ದೀರಿ. ಸಂತೋಷ. ಆದರೆ ಕಳೆದ ವರ್ಷ ಇದೇ ಕಾವೇರಿ ವಿಚಾರದಲ್ಲಿ ಖಾಸಗಿ ಸುದ್ದಿವಾಹಿನಿಯ ಆ್ಯಂಕರ್ ಒಬ್ಬರು ಪ್ರಶ್ನೆ ಕೇಳಿದಾಗ ಬಾಲ ಸುಟ್ಟ ಬೆಕ್ಕಿನಂತೆ ಎದ್ದು ಹೋದಿರಲ್ಲ, ಯಾಕೆ ನನ್ನನ್ನು ವಿವಾದಕ್ಕೆ ಎಳೆಯುತ್ತೀರಿ ಎಂದು ಸಂಭಾವಿತನಂತೆ ವರ್ತಿಸಿದರಲ್ಲ, ಆಗ ನಿಮ್ಮೊಳಗಿನ ಸಾತ್ವಿಕ ಸತ್ತು ಹೋಗಿದ್ದನೇ? ಅಥವಾ ತಮಿಳುನಾಡಿನ ಜನ ನಿಮ್ಮ ಸಿನಿಮಾ ನೋಡುವುದಿಲ್ಲ ಎಂಬ ಭಯ ಕಾಡಿತೆ? ತಾಕತ್ತಿದ್ದರೆ ಉತ್ತರಿಸಿ.
Leave A Reply