ರಾಮ ಜನ್ಮಭೂಮಿ ಅಯೋಧ್ಯೆ ಆಕರ್ಷಣೆ ಹೆಚ್ಚಿಸಲು ಯೋಗಿ ಸರ್ಕಾರದಿಂದ ಭರ್ಜರಿ ಬಜೆಟ್
ಲಖನೌ: ದೇಶದ ಬೃಹತ್ ದೊಡ್ಡ ರಾಜ್ಯ, ಶ್ರೀರಾಮನ ಜನ್ಮಸ್ಥಾನ ಅಯೋಧ್ಯೆ ಇರುವ ಸ್ಥಳ, ಕಾಶೀ ವಿಶ್ವನಾಥನ ಪುಣ್ಯ ಸನ್ನಿಧಿ ಇರುವ ಉತ್ತರ ಪ್ರದೇಶದ ಮುಖ್ಯಮಂತ್ರಿಯ ಸ್ಥಾನವನ್ನು ಯೋಗಿ ಆದಿತ್ಯನಾಥ ವಹಿಸಿಕೊಂಡ ನಂತರ ಮಹತ್ತರ ಬದಲಾವಣೆಗಳನ್ನು ತಂದಿದೆ. ರಾಜ್ಯದಲ್ಲಿ ಅಪರಾಧ ಲೋಕವನ್ನು ಮಟ್ಟ ಹಾಕುವ ಮೂಲಕ ಹೊಸ ಭರವಸೆಯನ್ನು ಮೂಡಿಸಿದೆ. ಇದೀಗ ಕೋಟ್ಯಂತರ ಹಿಂದೂಗಳ ಶ್ರದ್ಧಾ ಕೇಂದ್ರವಾದ ಅಯೋಧ್ಯೆ ಶ್ರೀರಾಮನ ತಾಣವನ್ನು ಪ್ರವಾಸಿಗರಿಗೆ ಆಕರ್ಷಿಸುವಂತೆ ಮಾಡಲು ಭರ್ಜರಿ ಬಜೆಟ್ ನೀಡುವ ಮೂಲಕ ಹೊಸ ನಿರೀಕ್ಷೆಯನ್ನು ಯೋಗಿ ಸರ್ಕಾರ ಹುಟ್ಟಿಸಿದೆ.
ಅಯೋಧ್ಯೆಯ ಕೆಲವು ಪ್ರಮುಖ ಸ್ಥಾನಗಳ ಆಕರ್ಷಿಸುವಂತೆ ಮಾಡಲು ಯೋಗಿ ಆದಿತ್ಯನಾಥ್ ಸರ್ಕಾರ ಇದೀಗ ಮತ್ತೆ 10.7 ಕೋಟಿ ರೂಪಾಯಿ ನೀಡಿದೆ. ಶೀಘ್ರದಲ್ಲಿ ಹಣ ಬಿಡುಗಡೆ ಮಾಡಲಾಗುವುದು. ಅಯೋಧ್ಯೆಯಲ್ಲಿರುವ ಸೀತಾ ಕುಂಡ, ವಿದ್ಯಾ ಕುಂಡ, ದಂಥವನ ಕುಂಡಗಳು ಸೇರಿ ಹಲವು ಪುರಾತನ ಸ್ಥಳಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಅಯೋಧ್ಯೆಯ ಅಭಿವೃದ್ಧಿ ಮತ್ತು ಸುಂದರಿಕರಣಗೊಳಿಸುವ ನೀತಿ ಯೋಗಿ ಆದಿತ್ಯನಾಥ ಅಧಿಕಾರಕ್ಕೆ ಬಂದಾಗಿನಿಂದಲು ಕ್ರಮ ಕೈಗೊಳ್ಳಲಾಗಿತ್ತು. ಅಯೋಧ್ಯೆಯಲ್ಲಿ ಮರ್ಯಾದಾ ಪುರುಷ ಶ್ರೀರಾಮನ ಬೃಹತ್ ಮೂರ್ತಿ ನಿರ್ಮಿಸಲು ಯೋಗಿ ನಿರ್ಧರಿಸಿದ್ದರು. ಪ್ರವಾಸೋಧ್ಯಮ ಇಲಾಖೆ ಮೂಲಕ ಧಾರ್ಮಿಕ ತಾಣಗಳನ್ನು ಇನ್ನಷ್ಟು ಆಕರ್ಷಣೆಗೊಳಿಸಿ, ಧಾರ್ಮಿಕ ಪ್ರವಾಸೋದ್ಯಕ್ಕೆ ಹೆಚ್ಚಿನ ಒತ್ತು ನೀಡಲು ಯೋಗಿ ಸರ್ಕಾರ ಪ್ರಯತ್ನಿಸುತ್ತಿದೆ. ಶ್ರೀರಾಮ ನವಮಿಯಂದು ಸಹಸ್ರ ಲಕ್ಷದೀಪ ಕಾರ್ಯಕ್ರಮ ಆಯೋಜಿಸಿ ಇಡೀ ರಾಷ್ಟ್ರದ ಗಮನವನ್ನು ಯೋಗಿ ಸೆಳೆದಿದ್ದರು.
Leave A Reply