ದೇಶದ ನರ-ನಾಡಿ ರಸ್ತೆಗಳು, ಅದಕ್ಕಾಗಿ ಕೇಂದ್ರ ಸರ್ಕಾರ ರೂಪಿಸಿದೆ 200 ಯೋಜನೆಗಳು!
ನವದೆಹಲಿ: ದೇಶದ ಇತಿಹಾಸದಲ್ಲೇ 60 ವರ್ಷ ಆಡಳಿತ ನಡೆಸಿದರೂ ದೇಶಾದ್ಯಂತ ಉತ್ತಮ ರಸ್ತೆ ರೂಪಿಸದ ಕಾಂಗ್ರೆಸ್ಸಿಗೆ ಕಪಾಳ ಮೋಕ್ಷವಾಗುವಂತೆ ರಸ್ತೆ ನಿರ್ಮಿಸಿದವರು ಎಂದರೆ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರು ಕೇಳಿಬರುತ್ತದೆ. ಆದರೆ ಅಟಲ್ ಬಿಹಾರಿ ವಾಜಪೇಯಿ ಬಳಿಕ ದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಸರ್ಕಾರ ಎಂದರೆ ಅದು ನರೇಂದ್ರ ಮೋದಿ ನೇತೃತ್ವದ ಸರ್ಕಾರ.
ಹೌದು, ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ದೇಶದಲ್ಲಿ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತದೆ. ಇದಕ್ಕೆ ಸಾಕ್ಷಿಯಾಗಿ ಕೇಂದ್ರ ಈ ಮತ್ತೆ ರಸ್ತೆ ಅಭಿವೃದ್ಧಿಗೆ ಬರೋಬ್ಬರಿ 200ಯೋಜನೆಗಳನ್ನು ರೂಪಿಸಿದ್ದು, ರಾಷ್ಟ್ರದ ನರ-ನಾಡಿಗಳು ಎಂದೇ ಖ್ಯಾತಿಯಾಗಿರುವ ರಸ್ತೆಗಳು ದೇಶಾದ್ಯಂತ ನಿರ್ಮಾಣವಾಗಲಿವೆ.
ಇದಕ್ಕಾಗಿ ಸರ್ಕಾರ 1.5 ಲಕ್ಷ ಕೋಟಿ ರೂ, ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡುವ ಗುರಿ ಹೊಂದಿದ್ದು, ಮುಂದಿನ ವರ್ಷದ ಆರಂಭದ ಅವಧಿಯಲ್ಲಿ ಕನಿಷ್ಠ 50 ದೊಡ್ಡ ಮುಖ್ಯ ಹೆದ್ದಾರಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅದರಲ್ಲೂ 8-10 ತಿಂಗಳ ಕಡಿಮೆ ಅವಧಿಯಲ್ಲಿ ಇಷ್ಟೊಂದು ಬೃಹತ್ ಯೋಜನೆಗಳು ಆರಂಭಿಸುವುದರಿಂದ ಹಲವು ಉದ್ಯೋಗ ಸೃಷ್ಟಿ ಸಹ ಆಗುತ್ತದೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಹಿತಿ ನೀಡಿರುವ ಪ್ರಕಾರ ಪೂರ್ಣಗೊಳ್ಳಲಿರುವ ಹಂತದಲ್ಲಿರುವ 416 ಯೋಜನೆಗಳನ್ನು ಪಟ್ಟಿ ಮಾಡಲಿದ್ದು, ಆ ಯೋಜನೆಗಳಿಗೆ ಈ 200 ಯೋಜನೆಗಳು ಸೇರಿದರೆ ದೇಶದ ರಸ್ತೆಗಳು ಬಹುತೇಕ ಅಭಿವೃದ್ಧಿಯಾದಂತೆ ಎಂದೇ ಹೇಳಲಾಗುತ್ತಿದೆ.
Leave A Reply