ಮಾವೋವಾದಿಗಳನ್ನು ಎನ್ ಕೌಂಟರ್ ಮಾಡಿದ್ದಕ್ಕೆ ಹೆದರಿ ಮಹಿಳೆ ಶರಣಾಗಿದ್ದಾರೆ ನೋಡಿ
ಕೇಂದ್ರ ಸರ್ಕಾರ ಮಾವೋವಾದಿಗಳ ನಿಗ್ರಹಕ್ಕೆ ಹಲವು ಯೋಜನೆ ರೂಪಿಸಿದೆ. ಒಡಿಶಾ ಸೇರಿ ಹಲವು ರಾಜ್ಯಗಳು ಸಹ ಇದಕ್ಕೆ ಸಹಕಾರ ನೀಡುತ್ತಿವೆ. ಇದೇ ಕಾರಣಕ್ಕೆ ಒಡಿಶಾದಲ್ಲಿ ಇತ್ತೀಚೆಗೆ ಪೊಲೀಸರು ಎರಡು ಎನ್ ಕೌಂಟರ್ ನಡೆಸಿ ಏಳು ಮಾವೋವಾದಿಗಳನ್ನು ಹತ್ಯೆ ಮಾಡಿದ್ದು ಉತ್ತಮ ನಿದರ್ಶನ.
ಇದರಿಂದ ನಕ್ಸಲರ ಎದೆಯಲ್ಲಿ ನಡುಕ ಹುಟ್ಟಿದ್ದು, ಒಡಿಶಾದಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಮಾವೋವಾದಿಗಳ ಗುಂಪು ಸೇರಿದ್ದ ಮಹಿಳಾ ಮಾವೋದಿಯೊಬ್ಬರು ಪೊಲೀಸರಿಗೆ ಬಂದು ಶರಣಾಗಿದ್ದಾರೆ.
ಹೌದು, ಕೆ.ಲಕ್ಷ್ಮೀ ಅಲಿಯಾಸ್ ಶ್ವೇತಾ ಅಲಿಯಾಸ್ ಕುಮಾರಿ ಎಂಬ ಮಹಿಳೆ ಒಡಿಶಾದ ಮಲ್ಕಂಗಿರಿ ಪೊಲೀಸರಿಗೆ ಬಂದು ಶರಣಾಗಿದ್ದಾರೆ. 2008ರಲ್ಲಿ ಆಂಧ್ರಪ್ರದೇಶ-ಒಡಿಶಾ ಗಡಿಯ ಗುಮ್ಮಾ ಏರಿಯಾ ಸಮಿತಿ ಸದಸ್ಯೆಯಾಗಿ ಕೆಲಸ ಮಾಡುತ್ತಿದ್ದರು, ಇತ್ತೀಚೆಗೆ ಈ ಮಹಿಳೆ ಉಪಟಳ ಜಾಸ್ತಿಯಾಗಿದ್ದ ಕಾರಣ, ಮಹಿಳೆ ಕುರಿತು ಮಾಹಿತಿ ನೀಡಿದವರಿಗೆ 4 ಲಕ್ಷ ರೂ, ಬಹುಮಾನ ನೀಡಲಾಗುವುದು ಎಂದು ಘೋಷಿಸಲಾಗಿತ್ತು.
ಈಕೆಯ ಗಂಡ ಧನಂಜಯ ಗೊಪೆ ಅಲಿಯಾಸ್ ಸುಧೀರ್ ಎಂಬುವವನು ಸಹ ಗುಮ್ಮಾ ಏರಿಯಾ ಸಮಿತಿಯ ಸದಸ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಆತ ಕೂಡ ಶರಣಾಗುವ ಕುರಿತು ಚಿಂತನೆ ನಡೆಸಿದ್ದಾನೆ. ಮಹಿಳೆ ತನ್ನ ತಪ್ಪು ತಿದ್ದಿಕೊಂಡು ಜೀವನ ನಡೆಸುವುದಾಗಿ ತಿಳಿಸಿದರೆ ಅವಕಾಶ ನೀಡಲಾಗುವುದು ಎಂದು ಎಸ್.ಪಿ. ಜಗಮೋಹನ್ ಮೀನಾ ತಿಳಿಸಿದ್ದಾರೆ.
ಒಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ರೌಡಿಗಳ ವಿರುದ್ಧ ಕಠಿಣ ಕ್ರಮ, ಎನ್ ಕೌಂಟರ್ ಮಾಡಲು ಅವಕಾಶ ನೀಡಿದ ಕಾರಣ ರೌಡಿಗಳೇ ಪೊಲೀಸ್ ಠಾಣೆಗೆ ಬಂದು ಶರಣಾಗುತ್ತಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು ನಕ್ಸಲರ ವಿರುದ್ಧ ಕೈಗೊಳ್ಳುವ ಕಾರ್ಯಾಚರಣೆ, ಎನ್ ಕೌಂಟರ್ ಗೆ ಹೆದರಿ ಮಾವೋವಾದಿಗಳು ಶರಣಾಗುತ್ತಿರುವುದು ಉತ್ತಮ ಬೆಳವಣಿಗೆ.
Leave A Reply