ಭಾರತದ ಮುಡಿಗೆ ಎನ್ ಎಸ್ ಜಿ ಸದಸ್ಯತ್ವ ಕಿರೀಟ ತೊಡಿಸಲು ಮೋದಿ ವೇದಿಕೆ ಸಿದ್ಧಪಡಿಸಿದ್ದಾರೆ ನೋಡಿ!
ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾದ ಬಳಿಕ ದೇಶದ ಘನತೆ ವಿಶ್ವಮಟ್ಟದಲ್ಲಿ ಬಾನೆತ್ತರಕ್ಕೆ ಹಾರುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಭಾರತ 2016ರಲ್ಲಿ ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜಿಮೆ ಗುಂಪಿಗೆ ಸೇರಿತು. 2017ರಲ್ಲಿ ವಾಸೆನಾರ್ ಅರೇಂಜ್ ಮೆಂಟ್ ಗುಂಪಿಗೆ ಸೇರ್ಪಡೆಯಾಯಿತು, ಪ್ರಸಕ್ತ ವರ್ಷದಲ್ಲಿ ಆಸ್ಟ್ರೇಲಿಯಾ ಗ್ರೂಪ್ ಗೆ ಸೇರುವ ಮೂಲಕ ವಿಶ್ವದಲ್ಲಿ ಭಾರತ ಬಲಿಷ್ಠ ದೇಶವಾಗುವತ್ತ ದಾಪುಗಾಲು ಇಟ್ಟಿತು.
ಆದರೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮಾಧಾನವಿಲ್ಲ. ಮೋದಿ ಪ್ರಧಾನಿಯಾದಾಗಿನಿಂದಲೂ ಒಂದೇ ಕನಸು. ಹೇಗಾದರೂ ಮಾಡಿ ಭಾರತವನ್ನು ಅಣು ಸರಬರಾಜು ತಂಡಕ್ಕೆ (ಎನ್ಎಸ್ ಜಿ) ಸೇರಿಸಬೇಕು. ಕಳೆದ ವರ್ಷ ಬೀಜಿಂಗ್ ನಲ್ಲಿ ಭಾರತ ಇನ್ನೇನು ಗ್ರೂಪ್ ಗೆ ಸೇರಿತು ಎನ್ನುವಷ್ಟರಲ್ಲೇ ಚೀನಾ ಅಡ್ಡಗಾಲು ಹಾಕಿಬಿಟ್ಟಿತು.
ಆದರೇನಂತೆ, ನರೇಂದ್ರ ಮೋದಿ ಅವರು ಭಾರತಕ್ಕೆ ಹಿನ್ನಡೆಯಾಗುವುದನ್ನು ಅದ್ಹೇಗೆ ತಪ್ಪಿಸುತ್ತಾರೆ? ಅದಕ್ಕಾಗಿಯೇ ಈ ಬಾರಿ, ಅಂದರೆ 2019ರ ಲೋಕಸಭೆ ಚುನಾವಣೆಗೂ ಮುನ್ನ ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ಕೊಡಿಸಲು ಪ್ರಧಾನಿ ಮೋದಿ ಸಕಲ ಸಿದ್ಧತೆ ಮಾಡಿದ್ದಾರೆ.
ಈ ಕುರಿತು ಎನ್ ಎಸ್ ಜಿ ಸದಸ್ಯತ್ವ ಹೊಂದಿರುವ 48 ರಾಷ್ಟ್ರಗಳು ಜೂನ್ ಅಥವಾ ಡಿಸೆಂಬರ್ ನಲ್ಲಿ ಸಭೆ ಸೇರಲಿದ್ದು, ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ನೀಡುವ ಕುರಿತು ಚರ್ಚೆ ನಡೆಸಲಾಗುತ್ತದೆ. ಈ ದಿಸೆಯಲ್ಲಿ ಮೋದಿಯವರು ಸಹ ಶತಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಭಾರತದ ಸದಸ್ಯತ್ವಕ್ಕೆ ಅಡ್ಡಿಯಾಗಿರುವ ಚೀನಾದ ಜತೆಗೂ ನರೇಂದ್ರ ಮೋದಿ ಅವರು ಮಾತುಕತೆ ನಡೆಸುತ್ತಿದ್ದಾರೆ. ಕಳೆದ ಏಪ್ರಿಲ್ ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿ ಮಾಡಿದ ಬಳಿಕ ಚೀನಾ, ಭಾರತದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳಲು ಬಯಸಿದ್ದು, ಈ ಬಾರಿ ಭಾರತಕ್ಕೆ ಅಡ್ಡಿಯಾಗುವುದಿಲ್ಲ ಎಂದೇ ಹೇಳಲಾಗುತ್ತಿದೆ. ಮೋದಿ ಪ್ರಯತ್ನದಿಂದ ಭಾರತಕ್ಕೆ ಸದಸ್ಯತ್ವ ಸಿಗಲಿ, ನಮ್ಮ ದೇಶ ಬಲಿಷ್ಠವಾಗಲಿ.
Leave A Reply