ಪ್ರಣಬ್ ಮುಖರ್ಜಿ ಆರ್ ಎಸ್ ಎಸ್ ಸಭೆಯಲ್ಲಿ ಭಾಗಿಯಾಗೋದು ತಪ್ಪಲ್ಲ ಎಂದ ಕಾಂಗ್ರೆಸ್ ಮುಖಂಡನಾರು ಗೊತ್ತೆ?
ಮುಂಬೈ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಂದ್ರ ಕಚೇರಿ ಹೊಂದಿರುವ ನಾಗಪುರದಲ್ಲಿ ನಡೆಯಲಿರುವ ವಾರ್ಷಿಕ ಸಂಘ ಶಿಕ್ಷಾ ವರ್ಗದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗಿಯಾಗುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಮುಖಂಡರಿಗೆ ಹಿರಿಯ ಕಾಂಗ್ರೆಸ್ ಮುಖಂಡ, ಕೇಂದ್ರದ ಮಾಜಿ ಗೃಹ ಸಚಿವ ಸುಶೀಲ್ ಕುಮಾರ ಸಿಂಧೆ ತಕ್ಕ ಉತ್ತರ ನೀಡಿದ್ದಾರೆ.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸುವುದು ತಪ್ಪಲ್ಲ. ಮುಖರ್ಜಿ ಅವರೊಬ್ಬ ಉತ್ತಮ ಚಿಂತಕರು, ಜಾತ್ಯಾತೀತ ವ್ಯಕ್ತಿತ್ವವುಳ್ಳವರು. ಅವರು ಸಂಘದ ಆಹ್ವಾನ ಸ್ವೀಕರಿಸಿರುವುದರಲ್ಲಿ ತಪ್ಪಿಲ್ಲ ಎಂದು ಹೇಳಿದ್ದಾರೆ.
ಮುಖರ್ಜಿ ಉತ್ತಮ ವ್ಯಕ್ತಿ. ಅವರು ಜಾತ್ಯಾತೀತ ಚಿಂತನೆಯುಳ್ಳವರು. ಅವರು ಎಲ್ಲೇ ಇದ್ದರೂ ಅಲ್ಲಿ ಜಾತ್ಯಾತೀತ ತತ್ವಗಳ ವಿಚಾರಗಳನ್ನು ಮಂಡಿಸುತ್ತಾರೆ. ವಿರೋಧಿಸುವ ಮುನ್ನ ಅವರು ಆ ಸಭೆಯಲ್ಲಿ ಏನು ಮಾತನಾಡಲಿದ್ದಾರೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.
ಪ್ರಣಬ್ ಮುಖರ್ಜಿ ನಾಗಪುರದಲ್ಲಿ ಜೂನ್ 7ರಂದು ನಡೆಯಲಿರುವ ಸಂಘದ ಸ್ವಯಂ ಸೇವಕರ ವಾರ್ಷಿಕ ಸಂಘ ಶಿಕ್ಷಾ ವರ್ಗದ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
Leave A Reply