ದೇಶದಲ್ಲಿ ಪೆಟ್ರೋಲ್ ಬೆಲೆ ಜಾಸ್ತಿಯಾಯಿತು ಎನ್ನುವವರು, ಆರೋಗ್ಯ ಖರ್ಚು ಕಡಿತವಾಗಿದ್ದಕ್ಕೆ ಏನೆನ್ನುತ್ತಾರೆ?
ಭಾರತದಲ್ಲಿ ಯಾವುದರ ಬೆಲೆ ಹೆಚ್ಚಾದರೂ ಪರವಾಗಿಲ್ಲ, ಪೆಟ್ರೋಲ್ ಬೆಲೆ ಮಾತ್ರ ಹೆಚ್ಚಾಗಬಾರದು. ಹಾಗೊಂದು ವೇಳೆ ಸರ್ಕಾರ ನೂರು ಯೋಜನೆ ಜಾರಿಗೊಳಿಸಿದ್ದರೂ ಪೆಟ್ರೋಲ್ ಬೆಲೆ ಜಾಸ್ತಿಯಾದರೆ ಮಾತ್ರ ಎಲ್ಲರೂ ದೇಶದ ನಾಯಕನ ಮೇಲೆಯೇ ಹರಿಹಾಯುತ್ತಾರೆ. ಪ್ರಸ್ತುತವಾಗಿಯೂ ಪೆಟ್ರೋಲ್ ಬೆಲೆ ಜಾಸ್ತಿಯಾಯಿತು ಎಂದು ಸ್ವತಃ ಬೈಕ್, ಕಾರು ಇಲ್ಲದವರೂ ಮೋದಿ ವಿರುದ್ಧ ಮಾತನಾಡುತ್ತಿದ್ದಾರೆ. ಕಾರಣ ಪೆಟ್ರೋಲ್ ಬೆಲೆ ಜಾಸ್ತಿಯಾಗಿದ್ದು.
ಆದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದಲ್ಲಿ ಆರೋಗ್ಯಕ್ಕಾಗಿ ಹೆಚ್ಚಿನ ಸವಲತ್ತು ನೀಡಿರುವುದು, ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಿ ನೂರು ರೂಪಾಯಿಗೆ ಸಿಗುತ್ತಿದ್ದ ಔಷಧಗಳು ಬರೀ ಐದು-ಹತ್ತು ರೂಪಾಯಿಗೆ ಸಿಗುತ್ತಿರುವ ಕುರಿತು ಒಬ್ಬನೂ ಸೊಲ್ಲೆತ್ತುವುದಿಲ್ಲ. ಅಂದರೆ ನಾವು ಆರೋಗ್ಯಕ್ಕಾಗಿ ನೂರು ರೂಪಾಯಿ ವ್ಯಯಿಸುತ್ತೇವೆಯೇ ಹೊರತು, ಪೆಟ್ರೋಲ್ ಗಾಗಿ ನಾಲ್ಕು ರೂಪಾಯಿ ಜಾಸ್ತಿ ಖರ್ಚು ಮಾಡುವುದಿಲ್ಲ ಎಂದಾಯಿತಲ್ಲ.
ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಇದುವರೆಗೆ ದೇಶಾದ್ಯಂತ 3600 ಆರೋಗ್ಯ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಸುಮಾರು 700 ಔಷಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಷ್ಟೇ ಅಲ್ಲ, ಕ್ಯಾನ್ಸರ್, ರಕ್ತದೊತ್ತಡ ಸೇರಿ ಹಲವು ಪ್ರಮುಖ ಕಾಯಿಲೆಗಳ ಔಷಧದ ಬೆಲೆಯಲ್ಲಿ ಶೇ.50ರಿಂದ 90ರಷ್ಟು ಕಡಿತಗೊಳಿಸಲಾಗಿದೆ.
ಆದರೂ ನಾವು ಮೋದಿ ಅವರನ್ನು ದೂರುವುದು ಪೆಟ್ರೋಲ್ ಬೆಲೆ ಏರಿಕೆ ವಿಷಯದಲ್ಲಿ. ಆದರೆ ಪೆಟ್ರೋಲ್ ಬೆಲೆ ಏರಿಕೆಯಾಗಲು ಮೋದಿ ಕಾರಣ ಅಲ್ಲ, ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಜಾಸ್ತಿಯಾಗಿದ್ದು ಎಂಬುದು ಎಷ್ಟು ಜನರಿಗೆ ಗೊತ್ತು?
ಅಷ್ಟೇ ಅಲ್ಲ, ಮೊದಲೆಲ್ಲ ಮೊಣಕಾಲು ಕಸಿ ಮಾಡಿಸಬೇಕು ಎಂದರೆ ಕನಿಷ್ಠ ಎಂದರೂ 2.5ರಿಂದ 3 ಲಕ್ಷ ರೂಪಾಯಿ ಬೇಕಾಗುತ್ತಿತ್ತು. ಆದರೆ ಕೇಂದ್ರ ಸರ್ಕಾರ ಈ ಕಸಿ ಮಾಡಿಸಲು ರಿಯಾಯಿತಿ ನೀಡಿದ ಕಾರಣ ಪ್ರಸ್ತುತ ಕೇವಲ 50 ರಿಂದ 80 ಸಾವಿರ ರೂಪಾಯಿ ವ್ಯಯಿಸಿದರೂ ಕಸಿ ಮಾಡಿಸಿಕೊಳ್ಳಬಹುದು. ಹೀಗಂತ ಪ್ರಧಾನಿ ನರೇಂದ್ರ ಮೋದಿ ಅವರೇ ಇತ್ತೀಚೆಗೆ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪ್ರಯೋಜನ ಯೋಜನೆಯ ಫಲಾನುಭವಿಗಳ ಜತೆ ನಡೆಸಿದ ಸಂವಾದದಲ್ಲಿ ತಿಳಿಸಿದ್ದಾರೆ.
ಇದರ ಜತೆಗೆ ಕಳೆದ ಬಜೆಟ್ ನಲ್ಲಿ ವಿಶ್ವದ ಬೃಹತ್ ಆರೋಗ್ಯ ಯೋಜನೆ ಎಂದೇ ಖ್ಯಾತಿಯಾದ ಆಯುಷ್ಮಾನ್ ಭಾರತ್ ಯೋಜನೆಗೆ ಶೀಘ್ರವೇ ಚಾಲನೆ ದೊರೆಯಲಿದೆ. ಈ ಯೋಜನೆಯಿಂದ ದೇಶದ 50 ಕೋಟಿ ಜನ ವಾರ್ಷಿಕ 5 ಲಕ್ಷ ರೂಪಾಯಿ ಆರೋಗ್ಯ ವಿಮೆ ಪಡೆಯಲಿದ್ದಾರೆ. ಆರೋಗ್ಯಕ್ಕಾಗಿ ದೇಶಾದ್ಯಂತ ಕೇಂದ್ರ ಸರ್ಕಾರ 1.5 ಲಕ್ಷ ಆರೋಗ್ಯ ಕೇಂದ್ರ ಸ್ಥಾಪಿಸಲು ಮುಂದಾಗಿದೆ.
ಹೇಳಿ ಕಡಿಮೆ ಬೆಲೆಗೆ ಔಷಧಿ, ಕಸಿ, ಐದು ಲಕ್ಷ ರೂಪಾಯಿ ವರೆಗೆ ಆರೋಗ್ಯ ವಿಮೆ ಸಿಕ್ಕರೂ ನಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ತೆಗಳಬೇಕಾ? ನಾಲ್ಕು ರೂಪಾಯಿ ಜಾಸ್ತಿ ಖರ್ಚಾಯಿತೆಂದು, ನಮ್ಮ ಲಕ್ಷಾಂತರ ರೂಪಾಯಿ ಉಳಿಸಲು ಮುಂದಾಗಿರುವ ಪ್ರಧಾನಿಯನ್ನು ತೆಗಳಬೇಕಾ? ಅರವತ್ತು ವರ್ಷ ದೇಶವಾಳಿದ ಕಾಂಗ್ರೆಸ್ಸಿಗೆ ದೇಶಾದ್ಯಂತ ಶೌಚಾಲಯ ಕಟ್ಟಿಸಬೇಕು, ವಿದ್ಯುತ್ ನೀಡಬೇಕು ಎಂಬ ಕನಿಷ್ಠ ಕಾಳಜಿಯೂ ಇರಲಿಲ್ಲ. ಅದನ್ನು ಮೋದಿ ನಾಲ್ಕು ವರ್ಷದಲ್ಲೇ ಮಾಡಿದ್ದಾರೆ. ಇಂತಹ ನಾಯಕನನ್ನು ಟೀಕುಸುವ ಮುನ್ನ ಯೋಚನೆ ಮಾಡಲೇಬೇಕು.
Leave A Reply