ಮುಸ್ಲಿಂ ರಾಷ್ಟ್ರಗಳಲ್ಲೇ ಯೋಗ ಇದ್ದರೂ ಹೀನಾ ಖಾನ್ ಗೇಕೆ ವಿರೋಧ ಮುಸ್ಲಿಂ ಮೂಲಭೂತವಾದಿಗಳೇ?
ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ 2015ರ ಜೂನ್ 21ರಂದು ಮೊದಲ ಬಾರಿಗೆ ವಿಶ್ವ ಯೋಗ ದಿನ ಆಚರಿಸಲಾಯಿತು. ಸುಮಾರು 47 ರಾಷ್ಟ್ರಗಳು ಯೋಗದಿನಕ್ಕೆ ಬೆಂಬಲ ಸೂಚಿಸಿದವು. ಈ ಬಾರಿಯೂ ಪಾಕಿಸ್ತಾನ, ಬಾಂಗ್ಲಾದೇಶ, ಸೌದಿ ಅರೇಬಿಯಾ ಸೇರಿ ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ ಯೋಗ ದಿನ ಆಚರಿಸಲಾಯಿತು. ಲಕ್ಷಾಂತರ ಜನ ಯೋಗ ಮಾಡುವ ಮೂಲಕ ಬೆಂಬಲ ಸೂಚಿಸಿದರು.
ಆದರೆ ಭಾರತದಲ್ಲಿರುವ ಮುಸ್ಲಿಂ ಮೂಲಭೂತವಾದಿಗಳು ಮಾತ್ರ ಯೋಗ ಮಾಡಲು ವಿರೋಧಿಸುತ್ತಿದ್ದಾರೆ. ಮುಸ್ಲಿಮರು ಯೋಗ ಮಾಡುವುದು ಇಸ್ಲಾಮೇತರ ಎಂಬ ಅಸಹಿಷ್ಣುತೆ ಪ್ರದರ್ಶಿಸುತ್ತಿದ್ದಾರೆ. ಆ ಮೂಲಕ ಮುಸ್ಲಿಮರು ಆರೋಗ್ಯವಂತ ಜೀವನ ಸಾಗಿಸಲು ಅಡ್ಡಗಾಲು ಹಾಕುತ್ತಿದ್ದಾರೆ. ಮೌಢ್ಯ ಮೆರೆಯುತ್ತಿದ್ದಾರೆ.
ಕಳೆದ ಗುರುವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ನಟಿ ಹೀನಾ ಖಾನ್ ಯೋಗ ಮಾಡುತ್ತಿರುವ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದರು. ಅಲ್ಲದೆ ಹೀಗೆ ಯೋಗ ಮಾಡುವುದರಿಂದ ಮನಸ್ಸಿನಲ್ಲಿ ಆವರಿಸುವ ಶಾಂತಿಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂಬ ಒಕ್ಕಣೆ ಸಹ ಬರೆದಿದ್ದರು.
ಆದರೆ ಇದಕ್ಕೆ ಸಾಮಾಜಿಕ ಜಾಲತಾಣದಲ್ಲೇ ಹಲವು ಮುಸ್ಲಿಂ ಮೂಲಭೂತವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಹೀನಾ ಖಾನ್ ಮುಸ್ಲಿಮಳೇ ಅಲ್ಲ, ಅವರು ಮುಸ್ಲಿಮರಾಗಿದ್ದರೆ ಹೀಗೆ ಮಾಡುತ್ತಿರಲಿಲ್ಲ, ಹೀಗೆ ಯೋಗ ಮಾಡುವ ಬದಲು ಐದು ಬಾರಿ ನಮಾಜು ಮಾಡಬೇಕಿತ್ತು, ನಮಾಜೇ ಮುಸ್ಲಿಮರಿಗೆ ಯೋಗ ಎಂಬಂತಹ ಹಲವು ಟೀಕೆ ಮಾಡಿದ್ದಾರೆ.
ಇಡೀ ವಿಶ್ವವೇ ಯೋಗ ದಿನ ಆಚರಿಸುತ್ತಿದೆ. ಜಗತ್ತಿನಾದ್ಯಂತ ಕೋಟ್ಯಂತರ ಜನ ಯೋಗ ಮಾಡುತ್ತಿದ್ದಾರೆ. ಮುಸ್ಲಿಂ ರಾಷ್ಟ್ರಗಳೂ ಆರೋಗ್ಯದ ಹಿತದೃಷ್ಟಿಯಿಂದ ಯೋಗಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಆದರೆ ಭಾರತದಲ್ಲಿ ಮಾತ್ರ ಮುಸ್ಲಿಂ ಮೂಲಭೂತವಾದಿಗಳಿಂದಾಗಿ ಮುಸ್ಲಿಮರು ಯೋಗ ಮಾಡಿದರೆ ಟೀಕೆಗಳು ವ್ಯಕ್ತವಾಗುತ್ತಿವೆ. ಇವರೆಲ್ಲ ಎಚ್ಚೆತ್ತುಕೊಳ್ಳುವುದು ಯಾವಾಗ?
Leave A Reply