ಅಸ್ಸಾಂನ ಮೋತಿ ಭಾಯಿಯ ಈ ಗುಣವನ್ನೇ ಎಲ್ಲ ಮುಸ್ಲಿಮರು ಅಳವಡಿಸಿಕೊಂಡರೆ ಎಷ್ಟು ಚೆಂದ ಅಲ್ಲವೇ?
ದೇಶದ ಎಷ್ಟೋ ಭಾಗಗಳಲ್ಲಿ, ಹಳ್ಳಿಗಳಲ್ಲಿ ಮುಸ್ಲಿಮರು ಹಿಂದೂಗಳು ಸೇರಿ ಎಲ್ಲ ಧರ್ಮದವರೊಂದಿಗೆ ಸೌಹಾರ್ದತೆಯೊಂದಿಗೆ
ಬಾಳುತ್ತಾರೆ. ಆದರೆ ಕೆಲವು ಮುಸ್ಲಿಂ ಮೂಲಭೂತವಾದಿಗಳಿಂದ, ಮದರಸಾಗಳ ದ್ವೇಷ ಬಿತ್ತುವ ಮಾತುಗಳಿಂದ ಇತ್ತೀಚೆಗೆ
ತುಂಬ ಮುಸ್ಲಿಮರು ಲವ್ ಜಿಹಾದ್, ಮತಾಂತರ ಸೇರಿ ಸಮಾಜದ ಶಾಂತಿಗೆ ಧಕ್ಕೆಯಾಗುವ ಹಲವು ವಿಚಾರಗಳಲ್ಲಿ
ತೊಡಗಿದ್ದಾರೆ.
ಆದರೆ ಅಸ್ಸಾಂನ ಕಮ್ರುಪ್ ಗ್ರಾಮಾಂತರ ಜಿಲ್ಲೆಯ ರೊಂಗ್ ಮೊಹೊಲ್ ಗ್ರಾಮದಲ್ಲಿ ಮೋತಿ ಭಾಯಿ ಎಂಬ ಮುಸ್ಲಿಮರನ್ನು
ನೋಡಿದರೆ ಹೆಮ್ಮೆಯೆನಿಸುತ್ತದೆ. ಇದ್ದರೆ ಇಂತಹ ಮುಸ್ಲಿಮರಿರಬೇಕು, ಅಳವಡಿಸಿಕೊಂಡರೆ ಇಂತಹ ಆದರ್ಶ
ಅಳವಡಿಸಿಕೊಳ್ಳಬೇಕು ಎನಿಸುತ್ತದೆ ಹಾಗೂ ಎಲ್ಲ ಮುಸ್ಲಿಮರೂ ಹೀಗೆಯೇ ಇದ್ದರೆ ಎಷ್ಟು ಚೆಂದ ಅಲ್ಲವೇ ಎನಿಸುತ್ತದೆ.
ಹೌದು, ಕಳೆದ 48 ವರ್ಷಗಳಿಂದ ಮೋತಿ ಭಾಯಿ ರೋಂಗ್ ಮೊಹೊಲ್ ಗ್ರಾಮದಲ್ಲಿ ಹಿಂದೂ ಮುಸ್ಲಿಮರ ನಡುವೆ
ಸೌಹಾರ್ದತೆಯ ಸೇತುವೆ ನಿರ್ಮಾಣ ಮಾಡುತ್ತಿದ್ದು, ಪ್ರಸ್ತುತ ಅದನ್ನು ಗಟ್ಟಿಯಾಗಿ ನಿರ್ಮಿಸಿದ್ದಾರೆ. ಆ ಮೂಲಕ ಇಡೀ
ಗ್ರಾಮದ ಹಿಂದೂ ಹಾಗೂ ಮುಸ್ಲಿಮರಿಗೆ ಇವರು ಮೋತಿ ಭಾಯಿಯಾಗಿಯೇ ಪ್ರಸಿದ್ಧರಾಗಿದ್ದಾರೆ.
ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದೇಳುವ ಮೋತಿ ಭಾಯಿ, ಮೊದಲು ಮೋತಿಯುರ್ ರಹಮಾನ್ ಮಸೀದಿಗೆ ತೆರಳಿ
ನಮಾಜು ಮಾಡುತ್ತಾರೆ. ಅಲ್ಲಿ ನಮಾಜು ಮಾಡಿದ ಬಳಿಕ, ಸೀದಾ ಶಿವ ದೇವಾಲಯಕ್ಕೆ ಬರುತ್ತಾರೆ. ಇಲ್ಲಿ ಭಕ್ತರು ಶಿವನಿಗೆ
ಪ್ರಾರ್ಥನೆ, ಪೂಜೆ ಸಲ್ಲಿಸಿದ ಬಳಿಕ ಮೋತಿ ಭಾಯಿಯೂ ಕೈ ಮುಗಿಯುತ್ತಾರೆ. ಬಳಿಕ ಇದೇ ಮೋತಿ ಭಾಯಿಯೇ ಗುಡಿಯ ಕಸ
ಗುಡಿಸಿ, ನೀರು ಚಿಮುಕಿಸಿ ಸ್ವಚ್ಛಗೊಳಿಸುತ್ತಾರೆ.
ಆದರೆ ಮುಸ್ಲಿಮನಾದರೂ ಹಿಂದೂ ದೇವಾಲಯಕ್ಕೆ ಸಲ್ಲಿಸುವ ಮೋತಿ ಭಾಯಿಯ ಈ ಕಾರ್ಯಕ್ಕೆ ಯಾವ ಮುಸ್ಲಿಮರೂ
ಅಡ್ಡಿಯಾಗಿಲ್ಲ. ಯಾವ ಹಿಂದೂಗಳು ತಕರಾರು ತೆಗೆದಿಲ್ಲ. ಬದಲಾಗಿ ಮುಸ್ಲಿಮರ ಹಬ್ಬದಲ್ಲಿ ಇಡೀ ಹಿಂದೂಗಳು
ಪಾಲ್ಗೊಳ್ಳುತ್ತಾರೆ. ಶಿವರಾತ್ರಿಯಂದು ಇಡೀ ಮುಸ್ಲಿಮರು ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. ಹೀಗೆಯೇ ಮುಸ್ಲಿಮರು
ಸೌಹಾರ್ದತೆ ಮೆರೆದರೆ ಎಷ್ಟು ಚೆಂದ ಅಲ್ಲವೇ?
Leave A Reply