• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ರಾಜ್ಯಪಾಲರೇ, ಮಂಗಳೂರು ವಿವಿ ಮೇಲೆ “ಸರ್ಜಿಕಲ್ ಸ್ಟ್ರೈಕ್” ಮಾಡಿ!!

Hanumantha Kamath Posted On June 30, 2018


  • Share On Facebook
  • Tweet It

ನ್ಯೂಸ್ 18 ಎನ್ನುವ ವಾಹಿನಿ ಶುಕ್ರವಾರ ರಾತ್ರಿ ಒಂದು ಒಳ್ಳೆಯ ಪ್ರೋಗ್ರಾಂ ಪ್ರಸಾರ ಮಾಡಿದೆ. ಸರ್ಜಿಕಲ್ ಸ್ಟ್ರೈಕ್ ಎನ್ನುವುದು ಕಾರ್ಯಕ್ರಮದ ಹೆಸರು. ನಮ್ಮದೇ ತುಳುನಾಡಿನ ಹೆಣ್ಣು ಮಗಳು ವಿಜಯಲಕ್ಷ್ಮಿ ಶಿಬರೂರು ನಡೆಸಿಕೊಡುವ ಕಾರ್ಯಕ್ರಮ ಅದು. ಅವರು ಹಿಂದೆ ಬೇರೆ ವಾಹಿನಿಗಳಲ್ಲಿ ಇಂತಹುದೇ ದಿಟ್ಟತನದ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಈಗಲೂ ಅವರಲ್ಲಿ ಅದೇ ರೀತಿಯ ದಿಟ್ಟತನ, ಹುಮ್ಮಸ್ಸು ಇದೆ. ಬಹುಶ: ಕನ್ನಡ ಪತ್ರಿಕೋದ್ಯಮದಲ್ಲಿ ತನಿಖಾ ವರದಿಗಳು ಕಡಿಮೆಯಾಗಿ ಡೆಸ್ಕ್ ಜನರ್ಲಿಸಂ ಮಾತ್ರ ಉಳಿದಿರುವ ಈ ಕಾಲದಲ್ಲಿ ವಿಜಯಲಕ್ಷ್ಮಿಯವರ ಕಾರ್ಯಶೈಲಿ ಮೆಚ್ಚುಗೆ ಪಡೆದಿದೆ. ಅವರ ಬೇರೆ ಬೇರೆ ಎಪಿಸೋಡುಗಳನ್ನು ನಾನು ವೀಕ್ಷಿಸಿದ್ದೇನೆ. ಹಾಗಿರುವಾಗ ವಿಜಯಲಕ್ಷ್ಮಿ ಈ ಬಾರಿ ಕೈಗೆತ್ತಿಕೊಂಡ ಸಬ್ಜೆಕ್ಟ್ ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಾಂಡ ಭ್ರಷ್ಟಾಚಾರ.

ಹಣದ ದಾಹ, ಸ್ಥಾನಮಾನದ ಪುಕಟ್ಟೆ ಆಸೆ…

ಈ ಸ್ಟೋರಿ ಅವರ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಯಾವತ್ತೋ ಬರಬೇಕಿತ್ತು. ಯಾಕೆಂದರೆ ಮಂಗಳೂರು ವಿಶ್ವವಿದ್ಯಾನಿಲಯವೆಂಬ ಹುಲ್ಲುಗಾವಲಿನಲ್ಲಿ ಮೆಯ್ದವರ ಕಥೆ ಈ ಮೊದಲೇ ಎಲ್ಲರೂ ನೋಡಬೇಕಿತ್ತು. ಆದರೆ ತಪ್ಪು, ಅನ್ಯಾಯ, ಭ್ರಷ್ಟಾಚಾರಕ್ಕೆ ಫಲ ಇವತ್ತಲ್ಲ ನಾಳೆ ಸಿಗುತ್ತೆ ಎನ್ನುವುದಕ್ಕೆ ಉದಾಹರಣೆ ಎನ್ನುವಂತೆ ಇವತ್ತು ಅದು ಹೆಚ್ಚೆಚ್ಚು ಹೊರಜಗತ್ತಿಗೆ ಗೊತ್ತಾಗುತ್ತಿದೆ. ಸಜ್ಜನಿಕೆಯ ಮುಖವಾಡ ತೊಟ್ಟು, ಮಾಧ್ಯಮಗಳನ್ನು ಮ್ಯಾನೇಜ್ ಮಾಡುತ್ತಿದ್ದವರ ಮುಖವನ್ನು ಅನಾವರಣ ಮಾಡಿದೆ ಈ ಸರ್ಜಿಕಲ್ ಸ್ಟ್ರೈಕ್. ದೇವರು ವಿದ್ಯೆ, ಬುದ್ಧಿ ಕೊಡುವುದು ಅದನ್ನು ನಾಲ್ಕು ಜನರಿಗೆ ನಾವು ಹಂಚಲಿ ಎನ್ನುವುದಕ್ಕೆ. ಅದರಲ್ಲಿಯೂ ಶಿಕ್ಷಕ ವೃತ್ತಿಯಲ್ಲಿ ಬರುವುದಕ್ಕೆ ಪುಣ್ಯ ಮಾಡಿರಬೇಕು. ಯಾಕೆಂದರೆ ನಾಳಿನ ಸಮಾಜವನ್ನು ರೂಪಿಸುವಂತವರು ಅವರು. ಅದರಲ್ಲಿಯೂ ಒಂದು ವಿಶ್ವವಿದ್ಯಾಲಯದಲ್ಲಿ ಕುಲಪತಿ ಆಗುವುದೇಂದರೆ ಅದಕ್ಕಿಂತ ಭಾಗ್ಯ ಬೇರೆ ಇಲ್ಲ. ಇದು ಒಂದು ರೀತಿಯಲ್ಲಿ ಪೇಯ್ಡ್ ಸಮಾಜಸೇವೆ. ಆ ಅವಕಾಶವನ್ನು ಕುಲಪತಿಗಳಾಗಿದ್ದ ಭೈರಪ್ಪನವರು ಸಮರ್ಥವಾಗಿ ಬಳಸಬೇಕಿತ್ತು. ಬೇರೆ ಕುಲಪತಿಗಳಿಗೆ ಮಾದರಿಯಾಗಬೇಕಿತ್ತು. ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಬೇಕಿತ್ತು. ಶಿಕ್ಷಕ ಸಮುದಾಯದ ಪಾಲಿಗೆ ರೋಲ್ ಮಾಡೆಲ್ ಆಗಬೇಕಿತ್ತು. ಆದರೆ ಅತಿಯಾದ ಹಣದ ದಾಹ ಮತ್ತು ಪುಕಟ್ಟೆ ಸ್ಥಾನಮಾನಕ್ಕಾಗಿ ಹಾ ತೊರೆಯುವ ಮನಸ್ಸಿನ ನಡುವೆ ಭೈರಪ್ಪನವರು ತಮ್ಮತನವನ್ನು ಕಳೆದುಕೊಂಡು ಟಿವಿ ವಾಹಿನಿಗಳ ಕಾರ್ಯಕ್ರಮದ ವಸ್ತುವಾಗಿದ್ದಾರೆ. ಅದರೊಂದಿಗೆ ಅವರ ಸಿಂಡಿಕೇಟ್ ಸದಸ್ಯರು. ಒಂದು ವಿಶ್ವವಿದ್ಯಾಲಯದಲ್ಲಿ ಸಿಂಡಿಕೇಟ್ ಸದಸ್ಯನಾಗುವುದೆಂದರೆ ಅದೊಂದು ರೀತಿಯಲ್ಲಿ ಪವಿತ್ರ ಸೇವೆಗೆ ಪರ್ಯಾಯ ಹೆಸರು. ಆದರೆ ಅದರಲ್ಲಿ ಇದ್ದವರು ಸಿಂಡಿಕೇಟ್ ಸದಸ್ಯರಾಗುವುದೆಂದರೆ ಹಣ ಹೊಡೆಯುವ ದಂಧೆಯಂತೆ ಮಾರ್ಪಡಿಸಿದರಲ್ಲ ಸರಸ್ವತಿ ಅವರಿಗೆ ಬರುವ ಜನ್ಮದಲ್ಲಿ ಒಲಿಯುವುದುಂಟೆ.

ಕೈ ಮುಗಿದು ಒಳಗೆ ಬಾ, ಇದು ವಿದ್ಯಾದೇಗುಲ ಎನ್ನುವ ವಾಕ್ಯವನ್ನು ಶಾಲೆ, ಕಾಲೇಜುಗಳ ಹೊರಗೆ ಗೋಡೆಯಲ್ಲಿ ಬರೆದಿರುತ್ತಾರೆ. ಆದರೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿರುವ ಕೆಲವರು “ಕೈ ಚಾಚಿ ಬಾ, ಇಲ್ಲಿ ಬಾಚಿಕೊಳ್ಳಲು ಬೇಕಾದಷ್ಟಿದೆ” ಎನ್ನುವ ಲೆವೆಲ್ಲಿಗೆ ತಂದು ನಿಲ್ಲಿಸಿ ಬಿಟ್ಟಿದ್ದರು. ನಾನು ವಿಜಯಲಕ್ಷ್ಮಿ ಶಿಬರೂರು ಟಿವಿ ಕಾರ್ಯಕ್ರಮ ಮಾಡುವ ಬಹಳ ಹಿಂದೆನೆ ಈ ಬಗ್ಗೆ ಬರೆದಿದ್ದೆ. ಯಾಕೆಂದರೆ ಅದಕ್ಕೆ ಬೇಕಾದ ದಾಖಲೆ ಸಿಕ್ಕಿತ್ತು. ಆವತ್ತು ಭವ್ಯ ಭಾರತ ನಿರ್ಮಾಣ ಮಾಡಲು ಸಿಂಡಿಕೇಟ್ ನಲ್ಲಿ ಇರಬೇಕಾಗಿದ್ದವರು ತಮ್ಮ ಭವಿಷ್ಯದ ಉಳಿವಿಗಾಗಿ ಚಡಪಡಿಸಿದ್ದರು. ನೀವು ಎಷ್ಟು ಮಂದಿ ನಿನ್ನೆಯ ಸರ್ಜಿಕಲ್ ಸ್ಟ್ರೈಕ್ ಕಾರ್ಯಕ್ರಮ ನೋಡಿದ್ದಿರೋ ಗೊತ್ತಿಲ್ಲ. ಅಂತರ್ಜಾಲದಲ್ಲಿ ಸಿಗುತ್ತೆ. ಸಮಯ ಸಿಕ್ಕಿದಾಗ ನೋಡಿ. ಅಲ್ಲಿನ ಭ್ರಷ್ಟಾಚಾರವನ್ನು ಅರ್ಧ ಗಂಟೆಯಲ್ಲಿ ಹೇಳಿ ಮುಗಿಸುವಂತದ್ದು ಅಲ್ಲ. ಕಂಪ್ಯೂಟರ್ ಹಗರಣ, ಸಿಸಿ ಟಿವಿ ಹಗರಣ, ಲ್ಯಾಪ್ ಟಾಪ್ ಹಗರಣ, ವಿದೇಶಿ ವಿದ್ಯಾರ್ಥಿಗಳ ಕಾಲೇಜು, ಹಾಸ್ಟೆಲ್ ಹಗರಣ, ಗುತ್ತಿಗೆ ಆಧಾರದಲ್ಲಿ ನೇಮಕವಾದ ಗಾರ್ಡನ್ ನೋಡುವವರ, ಸೆಕ್ಯೂರಿಟಿ ಗಾರ್ಡ್ ಗಳ ಕೆಲಸ, ಸಂಬಳದ ಹಗರಣ, ಕಟ್ಟಡ ನಿರ್ಮಾಣದ ಹಗರಣ ಯಾವುದನ್ನು ಬಿಡಲು ಸಾಧ್ಯವಿಲ್ಲ. ತೆಲುಗು, ತಮಿಳಿನ ಸಿನೆಮಾ ನಿರ್ದೇಶಕರ ಕೈಗೆ ಸಿಕ್ಕಿದರೆ ಒಂದು ಸಿನೆಮಾ ಆಗುವಷ್ಟು ಕಥೆ ಇರುವ ಮಂಗಳೂರು ವಿಶ್ವವಿದ್ಯಾಲಯ ಸಮಗ್ರ ಭ್ರಷ್ಟಾಚಾರವನ್ನು ಅರ್ಧ ಗಂಟೆಯಲ್ಲಿ ಬಹಳ ಕುತೂಹಲಕಾರಿಯಾಗಿ ವಿಜಯಲಕ್ಷ್ಮಿ ನಮ್ಮ ಮುಂದೆ ತೆರೆದಿಟ್ಟಿದ್ದಾರೆ.

ಹಾಗಾದರೆ ಈ ಪ್ರೋಗ್ರಾಂನ ಫಲಿತಾಂಶ ಏನು?

ನಮ್ಮ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾಗಿರುವ, ಗುಜರಾತಿನ ಸಚಿವರಾಗಿದ್ದ, ಅಲ್ಲಿನ ವಿಧಾನಸಭೆಯ ಸ್ಪೀಕರ್ ಆಗಿದ್ದ ವಜುಭಾಯ್ ಪಟೇಲ್ ಅವರು ” ವಾಟ್ ಹೆಪನಿಂಗ್ ಇನ್ ಮ್ಯಾಂಗಲೋರ್ ಯೂನಿವರ್ಸಿಟಿ?” ಎಂದು ಕೇಳಬೇಕು. ಅವರ ಆಪ್ತರು ಈ ಕಾರ್ಯಕ್ರಮ ತೋರಿಸಿ ಗುಜರಾತಿ ಭಾಷೆಯಲ್ಲಿ ವಿವರಿಸಬೇಕು. ಅದರ ನಂತರ ವಜುಬಾಯ್ ಪಟೇಲ್ ತಮ್ಮ ಪೆನ್ ತೆಗೆದು ತಮ್ಮ ಲೆಟರ್ ಹೆಡ್ ನಲ್ಲಿ ತನಿಖೆಗೆ ಆದೇಶಿಸಿದ್ದೇನೆ ಎಂದು ಬರೆದು ಮುಖ್ಯಮಂತ್ರಿ ಕಾರ್ಯಾಲಯಕ್ಕೆ ಕಳುಹಿಸಬೇಕು. ಅಷ್ಟೇ, ಮಂಗಳೂರು ವಿಶ್ವವಿದ್ಯಾಲಯದ ಹೆಗ್ಗಣಗಳು ಬೋನಿಗೆ ಬಿದ್ದವು ಎಂದೇ ಅರ್ಥ. “ಸರ್, ನಿಮ್ಮನ್ನು ದಾರಿ ತಪ್ಪಿಸಿ, ಕತ್ತಲಲ್ಲಿಟ್ಟು ಹರೀಶ್ ಆಚಾರ್ ಎನ್ನುವವರನ್ನು ಮೂರನೇ ಬಾರಿಗೆ ಸಿಂಡಿಕೇಟ್ ಮೆಂಬರ್ ಮಾಡಲಾಗಿದೆ. ನಿಯಮ ಪ್ರಕಾರ ಒಬ್ಬರು ಒಂದೇ ಸಲ ಮೆಂಬರ್ ಆಗಬಹುದು” ಎಂದು ಗವರ್ನರ್ ಭವನದ ಅಧಿಕಾರಿಗಳು ವಜುಬಾಯ್ ಪಟೇಲ್ ಅವರ ಕಿವಿಯಲ್ಲಿ ಹೇಳಿದರೆ ಮುಗಿಯಿತು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಭ್ರಷ್ಟಾಚಾರ ಮಾಡಿದವರ ಹೊಟ್ಟೆಯಲ್ಲಿ ಚೆಂಡೆ ಬಾರಿಸಲು ಶುರುವಾಗಿದೆ ಎಂದೇ ಅರ್ಥ!

ಸರ್ಜಿಕಲ್ ಸ್ಟ್ರೈಕ್ , ವಿವಿ ಗಂಗೋತ್ರಿ ಗೋಲ್ಮಾಲ್! ಬಯಲಾಯ್ತು ಭೈರಪ್ಪ ಕರ್ಮಕಾಂಡ!

Posted by Tulunadu News on Friday, June 29, 2018

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search