ಮಧ್ಯಪ್ರದೇಶ ಹಿಂದೂ ಬಾಲಕಿಯ ಅತ್ಯಾಚಾರಿಯ ರುಂಡ ಕತ್ತರಿಸಿದವರಿಗೆ 5 ಲಕ್ಷ ರೂ. ಘೋಷಿಸಿದ ಬಿಜೆಪಿ ನಾಯಕ!
ಭೋಪಾಲ್: ಜಮ್ಮು-ಕಾಶ್ಮೀರದ ಕಠುವಾದಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಹಿಂದೂಗಳು ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಲೇ ಇಡೀ ದೇಶದಲ್ಲಿ ಪ್ರತಿಭಟನೆ ನಡೆಸಲಾಯಿತು, ಮೇಣದ ಬತ್ತಿ ಹಿಡಿದು ಹೋರಾಟ ಮಾಡಲಾಯಿತು.
ಆದರೆ, ಮಧ್ಯಪ್ರದೇಶದ ಮಂಡ್ ಸೌರ್ ಜಿಲ್ಲೆಯಲ್ಲಿ 8 ವರ್ಷದ ಹಿಂದೂ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದರೂ, ಮಾಡಿರುವ ಆರೋಪಿಗಳು ಮುಸ್ಲಿಮರೇ ಎಂಬ ಆರೋಪವಿದ್ದರೂ ಇದುವರೆಗೂ ದೇಶದಲ್ಲಿ ಯಾವುದೇ ಬುದ್ಧಿಜೀವಿಗಳು, ಪ್ರಗತಿಪರರು, ಜೀವಪರರು ಪ್ರತಿಭಟನೆ ನಡೆಸದೆ, ತಮ್ಮ ಇಬ್ಬಂದಿತನ ಪ್ರದರ್ಶಿಸಿದ್ದಾರೆ.
ಆದರೆ ಭೋಪಾಲ್ ನಲ್ಲಿ ರಾಜ್ಯ ಸರ್ಕಾರ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳ ಬಂಧನಕ್ಕೆ ಆದೇಶಿಸಿದ್ದರೆ, ಕೇಂದ್ರ ಸರ್ಕಾರ ಈಗಾಗಲೇ ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆ ವಿಧಿಸುವುದಾಗಿ ತಿಳಿಸಿದೆ. ಆ ಮೂಲಕ ಬಿಜೆಪಿ ನೇತೃತ್ವದ ಸರ್ಕಾರ ಅತ್ಯಾಚಾರಿಗಳ ವಿರೋಧ ಎಂಬುದು ಸಾಬೀತುಪಡಿಸಿದೆ.
ಈಗ ಮಧ್ಯಪ್ರದೇಶ ಬಿಜೆಪಿ ಮುಖಂಡರೊಬ್ಬರು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳನ್ನು ಕೂಡಲೇ ಬಂಧಿಸಿ, ಗಲ್ಲು ಶಿಕ್ಷೆ ವಿಧಿಸಬೇಕು. ಹಾಗೊಂದು ವೇಳೆ ಸರ್ಕಾರ ಕ್ರಮ ಕೈಗೊಳ್ಳಲು ಸಾಧ್ಯವಾಗದಿದ್ದರೆ, ಅತ್ಯಾಚಾರಿ ಆರೋಪಿಗಳ ತಲೆ ಕಡಿದು ತಂದವರಿಗೆ ನಾನೇ 5 ಲಕ್ಷ ರೂಪಾಯಿ ನೀಡುತ್ತೇನೆ ಎಂದು ಬಿಜೆಪಿ ಮುಖಂಡ ಸಂಜೀವ್ ಮಿಶ್ರಾ ಘೋಷಿಸಿದ್ದಾರೆ.
ಕಳೆದ ಜೂನ್ 26ರಂದು ಶಾಲೆ ಎದುರು ನಿಂತಿದ್ದ 8 ವರ್ಷದ ಬಾಲಕಿಯನ್ನು ಅಪಹರಿಸಿದ ಇಬ್ಬರು ಮುಸ್ಲಿಮರು ಅರಣ್ಯಕ್ಕೆಹೊತ್ತೊಯ್ದು ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜೂನ್ 27ರಂದು ಬಾಲಕಿ ದೇಹ ಸಿಕ್ಕಿದ್ದು, ಪ್ರಸ್ತುತ ಇಂಧೋರ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
-ಚಿತ್ರ ಕೃಪೆ- ಎಎನ್ಐ
Leave A Reply